ಆಳಂದ: ಬೇಸಿಗೆ ರಜೆ ಎಂದರೆ ಶಾಲಾ ಮಕ್ಕಳಿಗೆ ಎಲ್ಲಿದ ಉತ್ಸಾಹ, ಈಜು, ಮೋಜು ಮಜಾ, ಮಸ್ತಿ, ಪ್ರವಾಸ, ಸಭೆ ಸಮಾರಂಭ ಬಂಧು ಬಾಂಧವರ ಭೇಟಿ ಅಜ್ಜಾ ಅಜ್ಜಿಯರ ಭೇಟಿ ಹೀಗೆಯಲ್ಲ ಸುತ್ತಾಡಿ ಕಾಲ ಕಳೆಯಬೇಕೆನ್ನುವ ಮಕ್ಕಳೆ ಹೆಚ್ಚು.
ಆದರೆ ಈ ಬಾರಿ ನಿಮ್ಮ ಶಾಲೆ ೧೫ ದಿನಗಳ ಮುಂಚಿತವಾಗಿಯೇ ಶುರುವಾಗಲಿದ್ದು, ಬೇಜಾರಾಗಬೇಡಿ, ಈಗಿನಿಂದಲೇ ಅವೆಯಲ್ಲವನ್ನು ಬೇಗನೇ ಮುಗಿಸಿ ಶಾಲೆಗೆ ಹೋಗಲು ಮಾನಸಿಕ ಮತ್ತು ದೈಹಿಕವಾಗಿ ಸಿದ್ಧತೆ ಮಾಡಿಕೊಳ್ಳಿ, ಏಕೆಂದರೆ ಹೊಸ ಶೈಕ್ಷಣಿಕ ವರ್ಷಕ್ಕೆ ನಿಮ್ಮನು ಸ್ವಾಗತಿಸಲು ಶಿಕ್ಷಣ ಇಲಾಖೆ ಮೂಲಕ ಶಾಲೆಗಳಲ್ಲಿ ಭರದ ಸಿದ್ಧತೆ ನಡೆಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಮೇ ೧೫ರಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆರಂಭಕ್ಕೆ ನಿರ್ಧರಿಸಿದ್ದು ಅಲ್ಲದೆ ಶಾಲಾ ಆರಂಭಕ್ಕೂ ಮೊದಲೇ ಪಠ್ಯ-ಪುಸ್ತಕ ವಿತರಣೆ ಕಾರ್ಯಕ್ಕೆ ಮುಂದಾಗಿ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಸಕಲ ಸಿದ್ಧತೆ ಮಾಡತೊಡಗಿದೆ.
ಇದನ್ನೂ ಓದಿ: ಕಲಬುರಗಿ: ವಿಶ್ವ ಮಲೇರಿಯಾ ದಿನಾಚರಣೆ
ಈಗಾಗಲೇ ತಾಲೂಕಿನ ಶಾಲೆಗಳಿಗೆ ಪುಸ್ತಕ ಹಂಚಿಕೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡವು ಕಾರ್ಯಪ್ರವರ್ತವಾಗಿದ್ದು, ಶೇ ೨೦ರಷ್ಟು ಪುಸ್ತಕ ದಾಸ್ತಾನು ಮಾಡಿಕೊಂಡಿದ್ದು, ಅಲ್ಲದೆ ಇನ್ನೂಳಿದ ಪುಸ್ತಕಗಳ ದಾಸ್ತಾನಿಗೆ ಮುಂದಾಗಿದೆ.
ಪುಸ್ತಕ ಬೇಡಿಕೆ: ತಾಲೂಕಿನ ೧ರಿಂದ ೧೦ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಒಟ್ಟು ೧ರಿಂದ೮ನೇ ತರಗತಿ ವರೆಗೆ ೩೦೪ ಶಾ ಹಾಗೂ ೪೯ ಪ್ರೌಢಶಾಲೆಗಳು ಮತ್ತು ಅನುದಾನಿತ ೧೯ ಪ್ರಾಥಮಿಕ ಶಾಲೆ ಹಾಗೂ ೧೧ ಪ್ರೌಢಶಾಲೆಗಳಿಗೆ ಉಚಿತವಾಗಿ ವಿತರಿಸಲು ೫೦೯೨೩೮ ಪುಸ್ತಕಗಳ ಬೇಡಿಕೆ ಇದೆ. ಈಗಾಗಲೇ ೧೧೧೭೭೦ ಪುಸ್ತಕಗಳ ದಾಸ್ತಾನು (ಶೇ೨೨) ಕೈಗೊಳ್ಳಲಾಗಿದೆ. ಇದಕ್ಕೆ ಹೊರತಾಗಿಯೂ ಅನುದಾನ ರಹಿತ ಶಾಲೆಗಳಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ೧೨೫ ಶಾಲೆಗಳಿಗೆ ಮಾರಾಟಕ್ಕಾಗಿ ೬೪೮೬೬ ವಿವಿಧ ವಿಷಯಗಳ ಪುಸ್ತಕದ ಬೇಡಿಕೆಯಲ್ಲಿ ೯೭೩೮ ಪುಸ್ತಕಗಳು ದಾಸ್ತಾನು (ಶೇ ೨೦ರಷ್ಟು) ಕೈಗೊಳ್ಳಲಾಗಿದೆ. ಇನ್ನೂ ಮೂರು ಲಾರಿ ಪುಸ್ತಕ ತುಂಬಿ ಬಂದಿವೆ. ದಾಸ್ತಾನು ಕಾರ್ಯ ನಡೆದಿದೆ. ದಾಸ್ತಾನು ಕೈಗೊಂಡು ಪುಸ್ತಕಗಳನ್ನು ಈ ತಿಂಗಳ ಕೊನೆಯ ವರೆದಲ್ಲಿ ಏಕಕಾಲಕ್ಕೆ ತಾಲೂಕಿನ ಎಲ್ಲಾ ಶಾಲೆಗಳ ಮೂಲಕ ಎಲ್ಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಕಾರ್ಯ ನಡೆಸಿ ಮೇ. ೧೫ಕ್ಕೆ ಶಾಲಾ ಆರಂಭೋತ್ಸವ ಅದ್ಧೂರಿಯಾಗಿ ಕೈಗೊಳ್ಳಲು ನಿರ್ಧರಿಸಿದೆ ಎಂದು ಶಿಕ್ಷಣಾಧಿಕಾರಿಗಳು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಾಳೆ ಗುಲ್ಬರ್ಗಾ ವಿವಿಯ 39 ಮತ್ತು 40ನೇ ಘಟಿಕೋತ್ಸವ
ವಿದ್ಯಾರ್ಥಿಗಳಿಗೆ ಅನುಕೂಲ: ಕಳೆದೆರಡು ವರ್ಷಗಳಿಂದ ಕೋವಿಡ್-೧೯ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಮಕ್ಕಳಿಗೆ ತೊಂದರೆಯಾಗಿದೆ. ಕುಂಠಿತವಾದ ಶೈಕ್ಷಣಿಕ ಗುಣಮಟ್ಟವನ್ನು ಸರಿದ್ಯೊಗಿಸಲು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅನುಕೂಲ ಕಲ್ಪಿಸಲು ಶಾಲಾ ಆರಂಭದ ಮುಂಚೆಯೇ ಶಾಲೆಗಳ ಎಲ್ಲಾ ಮಕ್ಕಳಿಗೆ ಪಠ್ಯ-ಪುಸ್ತಕ ವಿತರಣೆಗೆ ಕ್ರಮ ಕೈಗೊಂಡು ಶೈಕ್ಷಣಿಕ ಅನುಕೂಲ ಒದಗಿಸಲು ಶ್ರಮಿಸಲಾಗುತ್ತಿದೆ. ಅಲ್ಲದೆ, ಶಾಲೆಗಳಲ್ಲಿ ಶಿಕ್ಷರ ವರ್ಗಾವಣೆ ನಿಯೋಜನೆ ನಡೆಯಲಿದೆ. ಕೊರತೆ ಸಾಧಕ ಬಾಧಕವನ್ನು ಸರಿಪಡಿಸಿವು ಕಾರ್ಯ ನಡೆದಿದೆ.
ಚಿತ್ರಶೇಖರ ದೇಗುಲಮಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಳಂದ.