ಬಿಸಿ ಬಿಸಿ ಸುದ್ದಿ

ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲನೆಗೆ ಪ್ರಿಯಾಂಕ್ ಖರ್ಗೆ ಕರೆ

ಕಲಬುರಗಿ: ಬುದ್ದ‌ ಬಸವ ಅಂಬೇಡ್ಕರ ಬೇಕು ಆದರೆ ಅವರ ತತ್ವಗಳು ಬೇಡವಾಗಿದೆ. ಇದನ್ನು‌ ಗಮನಿಸಿದರೆ, ಸಮಾಜಿಕವಾಗಿ ನಾವು ದಾರಿತಪ್ಪಿದ್ದೇವೆ ಎನಿಸುತ್ತಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ವಿಷಾದಿಸಿದರು.

ಕಾಳಗಿ‌ ಪಟ್ಟಣದಲ್ಲಿ ನಡೆದ ಡಾ ಅಂಬೇಡ್ಕರ ಅವರ 131 ನೆಯ ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಬಾಬಾಸಾಹೇಬರು ವ್ಯಕ್ತಿ ಪೂಜೆಯನ್ನು ವಿರೋಧಿಸಿದ್ದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿ ಪೂಜೆ‌ ನಡೆದಾಗ ಆತ ಸರ್ವಾಧಿಕಾರಿ‌ ಆಗುತ್ತಾನೆ. ಆಗ ಪ್ರಜೆಗಳ ಕೆಲಸ ಆಗುವುದಿಲ್ಲ. ಹಾಗಾಗಿ‌ ನೀವು ಅಂಬೇಡ್ಕರ ಅವರ ತತ್ವ ಪಾಲನೆ ಮಾಡುವುದಿದ್ದರೆ ವ್ಯಕ್ತಿ ಪೂಜೆ ವರ್ಜಿಸಿ. ಜನಪ್ರತಿನಿಧಿಗಳ ಹಾರ ತುರಾಯಿ ಹಾಕಿ ಮೆರವಣಿಗೆ ಮಾಡಬೇಡಿ ಎಂದು ಮನವಿ ಮಾಡಿದರು.

ಸಂವಿಧಾನದ ಶ್ರೇಷ್ಟತೆಯನ್ನು ಹೊಗಳಿದ ಶಾಸಕರು ಬಾಬಾಸಾಹೇಬರು ರಚಿಸಿದ ಸಂವಿಧಾನದಲ್ಲಿ ಸರ್ವರಿಗೆ ಸಮಪಾಲು ಸಮಬಾಳು ಎನ್ನುವ ಬುದ್ದನ ಬಸವಣ್ಣನ ತತ್ವ ಅಡಗಿದೆ ಎಂದರು. ” ಡಾ ಬಾಬಾಸಾಹೇಬರು ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದು ಕೋಲಂಬಿಯಾ ಯೂನಿವರ್ಸಿಟಿ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ್ದಾರೆ. ಅವರ 125 ನೆಯ ಜಯಂತಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ರೂ 128 ಕೋಟಿ ಖರ್ಚಿನಲ್ಲಿ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಮಾದರಿಯ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ ” ಎಂದು ತಾವು ಸಮಾಜಕಲ್ಯಾಣ ಸಚಿವರಾಗಿದ್ದ ಕೈಗೊಂಡ ಕಾರ್ಯಕ್ರಮದ ಬಗ್ಗೆ ನೆನಪಿಸಿಕೊಂಡರು.

ಭಾರತ ಸಶಕ್ತವಾಗಿ‌ ಉಳಿದಿರೋದು ಭಗವಗ್ದೀತೆ, ‌ ಕುರಾನ್ ಅಥವಾ ಬೈಬಲ್‌ನಿಂದಾಗಿ ಅಲ್ಲ ಅದು ಸಂವಿಧಾನದಿಂದ ಮಾತ್ರ ಎಂದು‌ ಹೇಳಿದ ಖರ್ಗೆ ಅವರು ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮ ಧರ್ಮದ ನಡುವೆ ಜಗಳ ಹಚ್ಚಿ‌ ಕೋಮು ದ್ವೇಷ ಬೆಳೆಸುತ್ತಿರುವವರನ್ನ ಬಾಬಾಸಾಹೇಬರು ದೇಶದ್ರೋಹಿಗಳು ಎಂದು ಕರೆದಿದ್ದಾರೆ ಎಂದರು.

ಬಿಜೆಪಿಯವರು ಬಡವರ ಮಕ್ಕಳ ಕೊರಳಿಗೆ ಕೇಸರಿ ಶಾಲು ಹಾಕಿಸಿ ಧರ್ಮದ‌ ಹೆಸರಿನಲ್ಲಿ ಅವರನ್ನು ಬಳಸಿಕೊಳ್ಳುತ್ತಾರೆ. ಇದರಿಂದ ಈಗಿನ ಯುವಕರು ಎಚ್ಚರದಿಂದರಬೇಕು ಎಂದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago