ಬಿಸಿ ಬಿಸಿ ಸುದ್ದಿ

ಬಸವಣ್ಣನ ಪರಿಕಲ್ಪನೆ ಹೊಸದು: ಅತ್ತಿವೇರಿ ಮಾತೆ

ಕಲಬುರಗಿ: ವಿಶ್ವಾತ್ಮನನ್ನು ಅಂಗೈಯಲ್ಲಿ ಚುಳುಕಾಗಿಸಿದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರು ಎಂದು ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿಯ ಬಸವೇಶ್ವರಿ ಮಾತಾಜಿ ಅಭಿಮತ ವ್ಯಕ್ತಪಡಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಪರ ಸಂಘಟನೆಗಳು ಹಾಗೂ ಕಾಯಕ ಶರಣರ ಒಕ್ಕೂಟದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಸವಣ್ಣ ನಡೆದಾಡಿದ ಶರಣರು ಬದುಕಿದ್ದ ನಮ್ಮ ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಕಂಡು ಬರುತ್ತಿರುವುದು ದುರ್ದೈವದ ಸಂಗತಿ. ಈ ಜಗತ್ತನ್ನು ನಾವು ನೋಡುವುದೇ ಬೇರೆ, ಬಸವಣ್ಣ ನೋಡಿದ ಪರಿಕಲ್ಪನೆಯೇ ಬೇರೆಯಾಗಿತ್ತು ಎಂದರು.

ಮೂಢನಂಬಿಕೆ, ಜಾತಿಪದ್ಧತಿ ವರ್ಣಾಶ್ರಮ ಶ್ರೇಣಿಕೃತ ವ್ಯವಸ್ಥೆಯನ್ನು ವಿರೋಧಿಸಿದ ಅವರು ವೈಚಾರಿಕ ಬೀಜ ಬಿತ್ತಿದರು. ನಡೆದು ನುಡಿದ ಅವರ ವಚನಗಳು ಮೌಲ್ಯಗಳಿಂದ ಕೂಡಿವೆ. ಶರಣರ ಕೀರ್ತಿ ಯಾವುದೇ ಮಾಧ್ಯಮಗಳಿಲ್ಲದೇ ದೇಶ ವಿದೇಶಗಳಿಗೆ ಹಬ್ಬಿತ್ತು. ಕಾಶ್ಮೀರ, ತಮಿಳುನಾಡು, ಅಫಘಾನಿಸ್ತಾನದಿಂದ ಕಲ್ಯಾಣಕ್ಕೆ ಆಗಮಿಸಿದ್ದರು. ಬಸವ ತತ್ವದ ಪ್ರಚಾರ ಆಗಿದ್ದರೆ ನಮ್ಮ ದೇಶದಲ್ಲಿ ಅಶಾಂತಿ ವಾತಾವರಣ ಇರುತ್ತಿರಲಿಲ್ಲ ಎಂದರು.
ಕೂಡಲ ಸಂಗಮದ ಬಸವಧರ್ಮ ಪೀಠದ ಜಗದ್ಗುರು ಡಾ. ಗಂಗಾ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ನೇತೃತ್ವ ವಹಿಸಿದ್ದರು. ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಖನಿಜಾ ಫಾತಿಮಾ ಉದ್ಘಾಟಿಸಿದರು. ಡಾ. ಶಕುಂತಲಾ ದುರ್ಗಿ ಷಟಸ್ಥಲ ಧ್ವಜಾರೊಹಣ ನೆರವೇರಿಸಿದರು. ಕಾವೇರಿ ಪಾಟೀಲ್, ಮಹೇಶ್ವರಿ ವಾಲಿ, ನಳಿನಿ ಮಹಾಗಾಂವಕರ್, ಡಾ. ಶಿವಶರಣಪ್ಪ ಮೋತಕಪಲ್ಲಿ, ವೈಜನಾಥ, ಕೆ.ಎ.ಕಲ್ಬುಗಿ, ರವಿಹರಗಿ ಉಪಸ್ಥಿತರಿದ್ದರು.
ಅನನ್ಯ ಪ್ರಾರ್ಥಿಸಿದರು. ಮಾಲತಿ ರೇಷ್ಮಿ ಸ್ವಾಗತಿಸಿದರು. ಪ್ರತಿಭಾ ಬಿದರಿ ವಂದಿಸಿದರು, ವಿಜಯಲಕ್ಷ್ಮೀ ನೇಪೆರಿ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಸ್ವಂತ ಕಾಲ ಮೇಲೆ ನಿಂತು ದುಡಿದು ತಿಂದರೆ ಅದು ಬಿಸಿ ಅನ್ನ. ಅಪ್ಪ-ಅಮ್ಮ ಗಳಿಸಿದನ್ನು ತಿಂದರೆ ಅದು ತಂಗಳು ಅನ್ನ, ಲಂಚ-ವಂಚನೆ, ಮೋಸಗಳಿಂದ ತಿಂದರೆ ಅದು ಹಳಸಿದ ಅನ್ನ. ಅತಂತ್ರ, ಕುತಂತ್ರ, ಪರತಂತ್ರ, ಸ್ವತಂತ್ರ ಹೀಗೆ ತಲೆಗಳಲ್ಲಿ ನಾಲ್ಕು ವಿಧಗಳಿದ್ದು, ಸ್ವತಂತ್ರ ತಲೆಯವರಾಗಿ ಬದುಕಬೇಕು. -ಮಾತೆ ಬಸವೇಶ್ವರಿ, ಅತ್ತಿವೇರಿ.
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago