ಆಳಂದ: ಸಂಸ್ಕೃತ ದೇವಭಾಷೆಯಾಗಿದ್ದ ಕಾಲ ಘಟದ ನಡುವೆ ೧೨ನೇ ಶತಮಾನದಲ್ಲಿ ಬಸವಣ್ಣನವರು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸಿ ಕನ್ನಡವೂ ದೈವ ಭಾಷೆಯಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಹಿಮಾಲಯನ್ ಯೋಗ ಋಷಿ, ಭಾರತೀಯ ಸಂಸ್ಕೃತಿಯ ಅಧ್ಯಾತ್ಮೀಕ ಪ್ರವಚನ ರೂವಾರಿ ಶ್ರೀ ನಿರಂಜನ ಮಹಾಸ್ವಾಮೀಜಿ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ಪೂಜ್ಯ ರಾಜಶೇಖರ ಮಹಾಸ್ವಾಮೀಜಿ ಬಿಎಡ್ ಕಾಲೇಜಿನಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಕನ್ನಡದ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಡು ಭಾಷೆಯಾಗಿದ್ದ ಕನ್ನಡ ಭಾಷೆಯನ್ನು ದೈವ ಭಾಷೆಯಾಗಿ ಪರಿವರ್ತಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ವಚನ ಸಾಹಿತ್ಯ ಕನ್ನಡ ನಾಡಿನಲ್ಲಿ ಜನ್ಮ ತಾಳದಿದ್ದರೇ ಕನ್ನಡ ಭಾಷೆ ಬಹಳ ಹಿಂದುಳಿದಿರುತ್ತಿತ್ತು ಎಂದು ಅವರು ವಿಶ್ಲೇಷಿಸಿದರು.
ಕನ್ನಡವು ಜನ ಸಾಮಾನ್ಯರ ಭಾಷೆ, ಬುದ್ದ, ಮಹಾವೀರ, ಬಸವಣ್ಣನವರು ಹೀಗೆ ಅನೇಕ ಮಹಾನಿಯರು ಸಂಸ್ಕೃತ ಭಾಷೆಯ ಪಾಂಡಿತ್ಯ ಹೊಂದಿದ್ದರು ಸಹಿತ ಅವರು ತಮ್ಮ ಮಾತ್ರ ಭಾಷೆಗಳಲ್ಲೇ ಸಾಹಿತ್ಯ ನೀಡಿ ಬೋಧಿಸಿದಂತೆ ಬಸವಣ್ಣನವರು ಸಹ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಗಟ್ಟಿಗೊಳಿಸಿದ್ದಾರೆ. ಅನುಭವ ಮಂಟಪದಲ್ಲಿ ೧.೯೬ ಜನ ಸದಸ್ಯರಲ್ಲಿ ೭೭೦ ಅಮರ ಗಣಂಗಗಳ ಅಲ್ಲದೆ ೩೩ ವಚನಕಾರ್ತಿಯರು ಶುದ್ಧ ಕನ್ನಡದಲ್ಲೇ ವಚನಗಳನ್ನು ರಚಿಸಿ ನಮ್ಮ ಭಾಷೆ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದು, ನಂತರವೂ ದಾಸರು, ಸಂತರಿಂದ ಉಳಿದ ಬೆಳೆದು ಬಂದ ಕನ್ನಡ ಭಾಷೆಯ ಜೊತೆಗೆ ನಾವೂ ಅನ್ಯ ಭಾಷೆಗಳನ್ನು ಕಲಿತು ಇಂದಿನ ಸ್ಪರ್ಧೆಯ ಗೆಲುವಿನ ವಾರುಸದಾರರಾಗಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯ ಪ್ರಾಚಾರ್ಯ ಡಾ| ರಾಜಶೇಖರ ಮಾಂಗ ಅವರು ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯು ಅನ್ನದ ಭಾಷೆಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಯ ಹಿಂದೆ ದೂರದೃಷ್ಟಿ ಇತ್ತು ಹೀಗಾಗಿಯೇ ಅದು ಇಂದಿಗೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದೆ ಅಲ್ಲದೇ ಸಾಹಿತ್ಯ, ಸಂಸ್ಕೃತಿಯ ಜೊತೆ ಜೊತೆಗೆ ಬೆಳೆದುಕೊಂಡು ಬಂದಿದೆ ಈ ನಿಟ್ಟಿನಲ್ಲಿ ಪರಿಷತ್ತಿನ ಅಧ್ಯಕ್ಷರುಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ವಚನ, ದಾಸ, ತತ್ವಪದ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಿವೆ ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಜನಮಾನಸಕ್ಕೆ ಮತ್ತು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಅನುಚಾನವಾಗಿ ಶತಮಾನಗಳಿಂದ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಬಿ.ಎಡ್ ಕಾಲೇಜ್ ಪ್ರಾಚಾರ್ಯ ಅಶೋಕರೆಡ್ಡಿ, ವಿಕೆಜಿ ಪದವಿ ಕಾಲೇಜು ಪ್ರಾಚಾರ್ಯ ಕಲ್ಯಾಣಿ ಸಾವಳಗಿ, ಪತ್ರಕರ್ತ ಮಹಾದೇವ ವಡಗಾಂವ ಪ್ರಭಾಕರ ಸಲಗರೆ ಇದ್ದರು.
ಕಸಾಪ ಅಧ್ಯಕ್ಷ ಹಣಮಂತ ಶೇರಿ ಖಜೂರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಚಟುವಟಿಕೆಗಳ ಮೂಲಕ ಗಡಿಭಾಗದಲ್ಲಿ ಕನ್ನಡ ಉಳಿಸುವ ಬೆಳೆಸುವ ಕಾರ್ಯಕ್ಕೆ ಕನ್ನಡಾಭಿಮಾನಿಗಳ ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸುಧಾಕರ ಖಾಂಡೇಕರ, ಮಲ್ಲಿಕಾರ್ಜುನ ಬುಕ್ಕೆ, ಗೋವಿಂದ ಹುಸೇನಖಾನ್, ಶರಣಬಸಪ್ಪ ವಡಗಾಂವ, ಶಾಂತೇಶ ಹೂಗಾರ, ಮಲ್ಲಿನಾಥ ತುಕ್ಕಾಣೆ, ಮಹಾಂತಪ್ಪ ನಿಂಗಶೆಟ್ಟಿ, ರಾಜೇಂದ್ರ ಭಾವಿ, ಕಸಾಪ ಪದಾಧಿಕಾರಿಗಳು ಹಾಗೂ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಸಿದ್ದಪ್ಪ ಜಮಾದಾರ ಸ್ವಾಗತಿಸಿದರು. ಶ್ರೀದೇವಿ ವಂದಿಸಿದರು. ಮೇಘಾ ನಿರೂಪಿಸಿದರು. ವಿದ್ಯಾರ್ಥಿನಿ ಪ್ರೀಯಾಂಕಾ ಸಂಗಡಿಗರಿಂದ ನಾಡಗೀತೆ ಹಾಡಲಾಯಿತು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…