ಕಲಬುರಗಿ; ಹಾಗರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬರುವ ಸಿದ್ದೇಶ್ವರ ಕಾಲೊನಿಯಲ್ಲಿರುವ ಧಾರ್ಮಿಕ ಸ್ಥಳವನ್ನು ಗುಂಡಾ ಗಿರಿ ವರ್ತನೆ ನಾಶಪಡಿಸಿದ್ದು , ಮಾಡಿ ನ್ಯಾಯ ಒದಗಿಸಬೇಕೆಂದು ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಸಿದ್ದೇಶ್ವರ ಕಾಲೊನಿ ಸರ್ವೇ ನಂ. ೧೦೭/೨ ಮತ್ತು ೩ ರಲ್ಲಿ ಇರುವ ದೇವಸ್ಥಾ ನವನ್ನು ೨ ಸುಮಾರು ೨೫ ವರ್ಷಗಳಿಂದ ಸಾರ್ವಜನಿಕರು ಪೂಜೆ ಪುನಸ್ಕಾರ ಮಾಡಿ ಕೊಂಡು ಬರಲಾಗಿದೆ. ಆದರೆ, ಮೇ ೬ ರಂದು ಬೆಳಗ್ಗೆ ೧೧ ಗಂಟೆಗೆ ಕೆಲವರು ಬಂದು ಮಂದಿರದ ಅಭಿವೃದ್ಧಿಪಡಿಸಿದ ಉದ್ಯಾನವನವನ್ನು ಏಕಾಏಕಿ ಜೆಸಿಬಿ ಬಳಸಿ ಹನುಮಾನ ದೇವಸ್ಥಾನವನ್ನು ನಾಶ ಮಾಡಿ ಧ್ವಂಸಗೊಳಿಸಿದ್ದಾರೆ.
ಸ್ಥಳವನ್ನು ಲೇ ಔಟ್‌ನಲ್ಲಿ ಗಾರ್ಡನ್ ಸ್ಥಳ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ಲೇ ಔಟ್ ತಿದ್ದುಪಡಿ ಮಾಡಿ ಸಿಎ ಸೈಟ್ ಎಂದು ಮಾಡಲಾಗಿದೆ . ಈ ಹಿಂದೆ ಕುಸನೂರು ಗ್ರಾಪಂಗೆ ಬರುತ್ತಿರುವುದರಿಂದ ಕುಸನೂರು ಗ್ರಾಪಂನಿಂದ ೨೦೧೫ ರಲ್ಲಿ ೬೦ ವರ್ಷ ಲೀಜ್ ಎಂದು ಪಡೆದಿರುತ್ತಾರೆ . ಸರ್ವೆ ನಂ.೧೦೭ / ೨ ಕೆ ಮತ್ತು ೩ ವಿವಿ ನೌಕರರಿಗೆ ಸೇರಿರುತ್ತದೆ. ಇದನ್ನು ವಿವಿ ಗಮನಕ್ಕೆ ತಾರದೆ ಗ್ರಾಪಂ ಕಚೇರಿಯಿಂದ ಆದೇಶ ಪಡೆದಿರುತ್ತಾರೆ. ೬೦ ವರ್ಷ ಲೀಜ್ ರದ್ದುಪಡಿಸಬೇಕು ಎಂದು ಗ್ರಾಪಂಗ ಆಗ್ರಹಿಸಲಾಗಿದೆ.
ಇದನ್ನೂ ಓದಿ: ರೈತ ಸಶಕ್ತನಾದರೆ – ದೇಶ ಸಶಕ್ತವಾದಂತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಈ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇದ್ದರೂ ಗುಂಡಾ ವರ್ತನೆ ತೋರಿಸಿದ ವ್ಯಕ್ತಿಗಳ ಮೇಲೆ ಕಾಯಿದೆ ಪ್ರಕಾರ ಕೂಡಲೇ ಬಂಧಿಸಿ ಕಾನೂನಿನ ಕ್ರಮಕೈಗೊಳ್ಳಬೇಕು. ಧ್ವಂಸಗೊಳಿಸಿದ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಎಲ್.ಕಾಂಬಳ, ಸುಭಾಷ್ ಕೋರ ಆಜಾದಪುರ, ಡಾ.ಪ್ರಕಾಶ ಹಾಗರಗಿ , ನಾಗರಾಜ ಬಾವಿದೊಡ್ಡಿ, ಅಂಬಾರಾಯ ಓಕಳಿ, ಸಂಜುಕುಮಾರ ರಾಠೋಡ್, ನಾಗೇಂದ್ರಪ್ಪ ಪಂಡಿತ್ ಪಾಸ್ಟರ್, ರೇವಣಸಿದ್ದಪ್ಪ ಪಾಸ್ಟರ್, ಶಿವಕುಮಾರ ಅಜಾದಪುರ, ಬಸವಗೌಡತಿ, ಪಾರ್ವತಿ, ರೇಣುಕಾ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…