ಧಾರ್ಮಿಕ ಸ್ಥಳ ನಾಶ ಕ್ರಮಕ್ಕೆ ಆಗ್ರಹ

0
32

ಕಲಬುರಗಿ; ಹಾಗರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬರುವ ಸಿದ್ದೇಶ್ವರ ಕಾಲೊನಿಯಲ್ಲಿರುವ ಧಾರ್ಮಿಕ ಸ್ಥಳವನ್ನು ಗುಂಡಾ ಗಿರಿ ವರ್ತನೆ ನಾಶಪಡಿಸಿದ್ದು , ಮಾಡಿ ನ್ಯಾಯ ಒದಗಿಸಬೇಕೆಂದು ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಸಿದ್ದೇಶ್ವರ ಕಾಲೊನಿ ಸರ್ವೇ ನಂ. ೧೦೭/೨ ಮತ್ತು ೩ ರಲ್ಲಿ ಇರುವ ದೇವಸ್ಥಾ ನವನ್ನು ೨ ಸುಮಾರು ೨೫ ವರ್ಷಗಳಿಂದ ಸಾರ್ವಜನಿಕರು ಪೂಜೆ ಪುನಸ್ಕಾರ ಮಾಡಿ ಕೊಂಡು ಬರಲಾಗಿದೆ. ಆದರೆ, ಮೇ ೬ ರಂದು ಬೆಳಗ್ಗೆ ೧೧ ಗಂಟೆಗೆ ಕೆಲವರು ಬಂದು ಮಂದಿರದ ಅಭಿವೃದ್ಧಿಪಡಿಸಿದ ಉದ್ಯಾನವನವನ್ನು ಏಕಾಏಕಿ ಜೆಸಿಬಿ ಬಳಸಿ ಹನುಮಾನ ದೇವಸ್ಥಾನವನ್ನು ನಾಶ ಮಾಡಿ ಧ್ವಂಸಗೊಳಿಸಿದ್ದಾರೆ.

ಸ್ಥಳವನ್ನು ಲೇ ಔಟ್‌ನಲ್ಲಿ ಗಾರ್ಡನ್ ಸ್ಥಳ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ಲೇ ಔಟ್ ತಿದ್ದುಪಡಿ ಮಾಡಿ ಸಿಎ ಸೈಟ್ ಎಂದು ಮಾಡಲಾಗಿದೆ . ಈ ಹಿಂದೆ ಕುಸನೂರು ಗ್ರಾಪಂಗೆ ಬರುತ್ತಿರುವುದರಿಂದ ಕುಸನೂರು ಗ್ರಾಪಂನಿಂದ ೨೦೧೫ ರಲ್ಲಿ ೬೦ ವರ್ಷ ಲೀಜ್ ಎಂದು ಪಡೆದಿರುತ್ತಾರೆ . ಸರ್ವೆ ನಂ.೧೦೭ / ೨ ಕೆ ಮತ್ತು ೩ ವಿವಿ ನೌಕರರಿಗೆ ಸೇರಿರುತ್ತದೆ. ಇದನ್ನು ವಿವಿ ಗಮನಕ್ಕೆ ತಾರದೆ ಗ್ರಾಪಂ ಕಚೇರಿಯಿಂದ ಆದೇಶ ಪಡೆದಿರುತ್ತಾರೆ. ೬೦ ವರ್ಷ ಲೀಜ್ ರದ್ದುಪಡಿಸಬೇಕು ಎಂದು ಗ್ರಾಪಂಗ ಆಗ್ರಹಿಸಲಾಗಿದೆ.

Contact Your\'s Advertisement; 9902492681

ಇದನ್ನೂ ಓದಿ: ರೈತ ಸಶಕ್ತನಾದರೆ – ದೇಶ ಸಶಕ್ತವಾದಂತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಈ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇದ್ದರೂ ಗುಂಡಾ ವರ್ತನೆ ತೋರಿಸಿದ ವ್ಯಕ್ತಿಗಳ ಮೇಲೆ ಕಾಯಿದೆ ಪ್ರಕಾರ ಕೂಡಲೇ ಬಂಧಿಸಿ ಕಾನೂನಿನ ಕ್ರಮಕೈಗೊಳ್ಳಬೇಕು. ಧ್ವಂಸಗೊಳಿಸಿದ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕೆ.ಎಲ್.ಕಾಂಬಳ, ಸುಭಾಷ್ ಕೋರ ಆಜಾದಪುರ, ಡಾ.ಪ್ರಕಾಶ ಹಾಗರಗಿ , ನಾಗರಾಜ ಬಾವಿದೊಡ್ಡಿ, ಅಂಬಾರಾಯ ಓಕಳಿ, ಸಂಜುಕುಮಾರ ರಾಠೋಡ್, ನಾಗೇಂದ್ರಪ್ಪ ಪಂಡಿತ್ ಪಾಸ್ಟರ್, ರೇವಣಸಿದ್ದಪ್ಪ ಪಾಸ್ಟರ್, ಶಿವಕುಮಾರ ಅಜಾದಪುರ, ಬಸವಗೌಡತಿ, ಪಾರ್ವತಿ, ರೇಣುಕಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here