ಶಹಾಬಾದ: ಕನಕದಾಸರು ತಮ್ಮ ಭಕ್ತಿಯಿಂದ ಶ್ರೀ ಕೃಷ್ಣನನ್ನೇ ತನ್ನತ್ತ ತಿರುವಂತೆ ಮಾಡಿದರೇ, ಭಗೀರಥ ಮಹರ್ಷಿಯವರು ತಮ್ಮ ತಪ್ಪಸ್ಸಿನಿಂದ ಶಿವನ ಮುಡಿಯಿಂದ ಗಂಗೆಯನ್ನು ಧರೆಗಿಳಿಸಿ ಸಕಲ ಜೀವರಾಶಿಗಳಿಗೆ ಜೀವದಾನ ಕೊಟ್ಟ ಮಹಾನ್ ಪುರುಷ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಹೇಳಿದರು.
ಅವರು ರವಿವಾರ ನಗರಸಭೆ ವತಿಯಿಂದ ನಗರಸಭೆಯ ಕಚೇರಿಯಲ್ಲಿ ಹಮ್ಮಿಕೊಂಡ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೀರಿನಿಂದಲೇ ಜೀವಿಗಳ ಉಗಮ ಮತ್ತು ಭೂಮಿಯ ಮೇಲೆ ಸಕಲ ಜೀವರಾಶಿಗಳು ನಿರೇ ಜೀವ. ನೀರಿಲ್ಲದೇ ಇದ್ದರೇ ಬದುಕುವುದು ಅಸಾಧ್ಯ.ಆದರೆ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡಿ ಗಂಗೆಯನ್ನೇ ಧರೆಗೆ ಬರುವಂತೆ ಮಾಡಿದವರು ಭಗೀರಥ ಮಹರ್ಷಿ. ಆದರೆ ಇಂದು ದೇಶದಲ್ಲಿ ಬರಗಾಲ ಆವರಿಸಿದೆ. ಕುಡಿಯಲು ನೀರು ಸಿಗುತ್ತಿಲ್ಲ.ಅಂತರ್ಜಲ ಪಾತಾಳಕ್ಕೆ ತಲುಪಿದೆ. ಪಶು, ಪಕ್ಷಿಗಳು ವೇದನೆ ಯಾರು ಕೇಳದಂತಾಗಿದೆ.ಆದ್ದರಿಂದ ಪ್ರತಿಯೊಬ್ಬರೂ ನಮ್ಮ ಪರಿಸರವನ್ನು ಕಾಪಾಡಬೇಕಿದೆ. ಪ್ರತಿ ವ್ಯಕ್ತಿ ಗಿಡ, ಮರಗಳನ್ನು ನೆಟ್ಟು ಮಳೆ ಬರುವಂತೆ ಮಾಡಬೇಕಿದೆ. ನೀರಿನ ಮಹತ್ವವನ್ನು ಅರಿತು, ಹಿತ-ಮಿತವಾಗಿ ಬಳಸಬೇಕು. ನೀರಿನ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕ್ರಮ ಕೈಗೊಳಬೇಕಾಗಿದೆ ಎಂದರು.
ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶರಣು ಪಗಲಾಪೂರ ಮಾತನಾಡಿ, ಭಗೀರಥ ಮಹರ್ಷಿ ಅವರ ಬದ್ಧತೆ ಇಂದಿಗೂ ಸ್ಮರಿಸುವಂತಿದೆ. ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಭಗೀರಥ ಅವರ ಹಾಗೇ ತಪಸ್ಸು ಮಾಡಿದರೇ ಅಸಾಧ್ಯವಾದುದು ಸಾಧ್ಯವಾಗುತ್ತದೆ ಎಂದರು.
ಮಾದಿಗ ಸಮಾಜದ ಮುಖಂಡರಾದ ಶಿವರಾಜ ಕೋರೆ ಮಾತನಾಡಿ,ಶಿವನ ಜಟೆಯಲ್ಲಿದ್ದ ಗಂಗೆಯನ್ನು ಧರೆಗೆ ತಂದ ಕೀರ್ತಿಗೆ ಪಾತ್ರರಾಗಿರುವ ಭಗೀರಥ ಅವರ ಪ್ರಯತ್ನಶೀಲತೆಯು ಭಗೀರಥ ಪ್ರಯತ್ನವೆಂಬ ನುಡಿಗಟ್ಟಾಗಿ ಕನ್ನಡಿಗರೆಲ್ಲರ ಸ್ಫೂರ್ತಿಯ ನೆಲೆಯಾಗಿದೆ. ಉಪ್ಪಾರ ಜನಾಂಗದವರು ಭಗೀರಥರನ್ನು ತಮ್ಮ ಕುಲದ ಮೂಲ ಪುರು?ನೆಂದು ಭಾವಿಸಿ, ಭಕ್ತಿ, ಶ್ರದ್ಧೆಯಿಂದ ಆದಾಧಿಸುತ್ತಿದ್ದಾರೆ ಎಂದರು.
ನಗರಸಭೆಯ ಸಿಬ್ಬಂದಿಗಳಾದ ಶಿವಾನಂದ, ಗೌತಮ ಸೇರಿದಂತೆ ಇತರರು ಇದ್ದರು.
ಭಗೀರಥ ಜಯಂತಿ ಆಚರಣೆಯ ಸಮಯದಲ್ಲಿ ನಗರಸಭೆಯ ವಿದ್ಯುತ್ ಸುಪ್ರವೈಸರ್ ಹಾಗೂ ಸೇವಕ ಬಿಟ್ಟರೇ ಪೌರಾಯುಕ್ತರು, ಎಇಇ ಸೇರಿದಂತೆ ಯಾವ ಸಿಬ್ಬಂದಿಗಳು ಇರಲಿಲ್ಲ. ಅವರು ಮಹಾನ್ ನಾಯಕರ ಜಯಂತಿಗಳಲ್ಲಿ ಪಾಲ್ಗೊಳ್ಳುತ್ತಿಲ್ಲ.ಕಾಟಾಚಾರಕ್ಕೆ ಎಂಬಂತೆ ಆಚರಣೆಗಳು ಮಾಡಿ, ಜಯಂತಿಗಳ ಹೆಸರಿನಲ್ಲಿ ಸಾಕಷ್ಟು ಖರ್ಚು ಹಾಕುತ್ತಾರೆ.ಆದರೆ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮವನ್ನು ಆಚರಿಸಬೇಕೆಂಬ ಸಾಮನ್ಯ ಜ್ಞಾನ ಅವರಿಗಿಲ್ಲ ಎಂದರೆ ಹೇಗೆ ? ಎಂದು ಉಪ್ಪಾರ ಸಮಾಜದ ತಾಲೂಕಾಧ್ಯಕ್ಷ ವಸಂತ ಚೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…