ಬಿಸಿ ಬಿಸಿ ಸುದ್ದಿ

ವಚನ ಕ್ರಾಂತಿಗಿತ್ತು ಅಸಮಾನತೆಗೆ ಸಮಾದಿ ಕಟ್ಟುವ ಗುರಿ: ವಿಚಾರವಾದಿ ದೇವಿಂದ್ರ ಕರದಳ್ಳಿ

ವಾಡಿ: ಬಸವಾದೀಶರಣ ವಚನ ಸಾಹಿತ್ಯ ಕ್ರಾಂತಿಗೆ ಸಮ ಸಮಾಜ ನಿರ್ಮಿಸುವ ಕನಸ್ಸಿತ್ತು. ಮೌಢ್ಯ ಹಾಗೂ ಸಂಪ್ರದಾಯಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಗೆ ಸಮಾದಿ ಕಟ್ಟುವ ಗುರಿಯಿತ್ತು ಎಂದು ಪುರಸಭೆ ಉಪಾಧ್ಯಕ್ಷ, ಪ್ರಗತಿಪರ ವಿಚಾರವಾದಿ ದೇವಿಂದ್ರ ಕರದಳ್ಳಿ ಹೇಳಿದರು.

ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ವತಿಯಿಂದ ರವಿವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾಜ ಬೆಳಗಿದ ವಚನ ಸಾಹಿತ್ಯ ಶಿರ್ಷಿಕೆಯಡಿಯ ಓದು-ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ೧೨ನೇ ಶತಮಾನದ ಸಾಮಾಜಿಕ ವ್ಯವಸ್ಥೆ ಜಾತಿ ಅಸಮಾನತೆಯಿಂದ ಕೂಡಿತ್ತು. ಅಸ್ಪೃಶ್ಯತೆ ಎಂಬುದು ಅತ್ಯಂತ ಅಮಾನವೀಯ ಆಚರಣೆಯಾಗಿ ಮಾನವೀಯತೆಗೆ ಸಮಾದಿ ಕಟ್ಟಿತ್ತು. ದೇವರು ಮತ್ತು ಧರ್ಮ ಸಂಪ್ರದಾಯಗಳ ಹೆಸರಿನಲ್ಲಿ ಜೀವಂತವಿಡಲಾಗಿದ್ದ ಮೌಢ್ಯಾಚಾರಣೆ, ಮಹಿಳೆಯರ ಬದುಕು ಮೂಲೆಗುಂಪು ಮಾಡಿತ್ತು. ಶರಣರು ತಮ್ಮ ವಚನಗಳ ಮೂಲಕ ಇದನ್ನು ಅತ್ಯಂತ ಉಗ್ರವಾಗಿ ಖಂಡಿಸಿದ್ದರಲ್ಲದೆ, ಸಾಮಾಜಿಕ ಚಳುವಳಿಗೂ ನಾಂದಿ ಹಾಡಿದ್ದರು ಎಂದರು.

ಇದನ್ನೂ ಓದಿ: ನಾಳೆ ವಿಶ್ವ ಶಾಂತಿ ಮಹಾಯಾಗ: ಸುರೇಶ ತಂಗಾ

ಬಸವಣ್ಣನವರ ನೇತೃತ್ವದಲ್ಲಿ ಸಂಘಟಿತರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ, ಅಲ್ಲಮಪ್ರಭು, ಅಕ್ಕಮಹಾದೇವಿ. ಮಡಿವಾಳ ಮಾಚಿದೇವ, ಡೋಹಾರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಮೋಳಿಗೆ ಮಾರಯ್ಯ, ಸೊನ್ನಲಿಗೆಯ ಸಿದ್ಧರಾಮ, ಚೆನ್ನಬಸವಣ್ಣ ಹೀಗೆ ಅನೇಕ ಶರಣರು ವಚನ ಚಳುವಳಿಗೆ ಮೊದಲ ಅಧ್ಯತೆ ನೀಡುವ ಮೂಲಕ ಸಾಮಾಜಿಕ ಅನಿಷ್ಠಗಳ ವಿರುದ್ಧ ದನಿ ಎತ್ತಿದ್ದರು. ಡಾಂಬಿಕ ಭಕ್ತಿಯನ್ನು ಟೀಕಿಸುವ ಜತೆಗೆ ಇಷ್ಟಲಿಂಗದ ಪೂಜೆಯನ್ನು ಬೋಧಿಸಿದರು. ಆದರೆ ನಾವಿಂದು ಶರಣ ವಚನಕಾರರ ಜಯಂತಿಯ ಹೆಸರಿನಲ್ಲಿ ಜಾತಿಯಾಧಾರಿತ ಸಮಾಜವನ್ನು ಪೋಷಿಸುತ್ತಿದ್ದೇವೆ. ಶರಣರನ್ನು ಕುಲಗಳಿಗೆ ಸೀಮಿತಗೊಳಿಸದೆ ಸಮಾಜದ ಭಾಗವಾಗಲು ಬಿಡಬೇಕು. ಪ್ರತಿಯೊಬ್ಬರೂ ವಚನ ಸಾಹಿತ್ಯ ಅಧ್ಯಯನ ಮಾಡಬೇಕು. ಶರಣ ಅಶಯಗಳನ್ನು ಈಡೇರಿಸಲು ಜಾತಿರಹಿತವಾಗಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಸಂಚಲನ ಸಾಹಿತ್ಯ ವೇದಿಕೆ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ ಮಾತನಾಡಿ, ವಚನ ಎಂದರೇನು ಅರಿಯದಿದ್ದರೆ ವಚನ ಸಾಹಿತ್ಯ ಅರಿವಾಗದು. ನುಡಿದಂತೆ ನಡೆಯುವ ಕುರಿತು ಪ್ರಮಾಣ ಮಾಡುವುದೇ ವಚನವಾಗಿದೆ. ಶರಣರು ಸಮಾಜಕ್ಕೆ ನೀಡಿದ ವಚನ ಸಾಹಿತ್ಯ ಕೇವಲ ಬೋಧನೆಯಲ್ಲ. ಅದು ಬದುಕಿನ ಭಾಗವಾಗಿ ಅಸಮಾನತೆಗಳ ವಿರುದ್ಧ ಪ್ರಬಲ ಹೋರಾಟ ಕಟ್ಟಿದ ಮಹಾನ್ ಸಾಹಿತ್ಯವಾಗಿದೆ ಎಂದರು.

ಇದನ್ನೂ ಓದಿ: 18 ಜನ ಸಾಹಿತಿಗಳಿಗೆ ಬಸವ ಪುರಸ್ಕಾರ

ಯುವ ಬರಹಗಾರರಾದ ದಯಾನಂದ ಖಜೂರಿ ಅವರು ಬಸವಣ್ಣನವರ ಕುರಿತು ಮಾತನಾಡಿದರೆ, ಮಡಿವಾಳಪ್ಪ ಹೇರೂರ ಅವರು ನಿಜಶರಣ ಅಂಬಿಗರ ಚೌಡಯ್ಯ ಕುರಿತು, ಮಲ್ಲೇಶ ನಾಟೀಕಾರ ಜೇಡರ ದಾಸಿಮಯ್ಯ, ವಿಕ್ರಮ ನಿಂಬರ್ಗಾ ಅವರು ಮುಕ್ತಾಯಕ್ಕಳ ವಚನ ಸಾಹಿತ್ಯದ ಕುರಿತು ಸಂಕ್ಷಿಪಕ್ತವಾಗಿ ವಿಷಯ ಮಂಡಿಸಿದರು.

ಬಸವರಾಜ ಕೇಶ್ವಾರ, ಮಲ್ಲಿಕಪಾಷಾ ಮೌಜನ್, ವೀರಣ್ಣ ಯಾರಿ, ಚಂದ್ರ ಕರಣಿಕ, ಸಿದ್ದು ಪೂಜಾರಿ, ಶ್ರೀಶರಣ ಹೊಸಮನಿ, ಮಡಿವಾಳ ಬಿದನೂರ, ಖೇಮಲಿಂಗ ಬೆಳಮಗಿ, ಶೋಭಾ ನಿಂಬರ್ಗಾ, ಲಕ್ಷ್ಮೀ ಕೋಳಕೂರ ಪಾಲ್ಗೊಂಡಿದ್ದರು. ರವಿ ಕೋಳಕೂರ ಸ್ವಾಗತಿಸಿದರು. ಶ್ರವಣಕುಮಾರ ಮೊಸಲಗಿ ನಿರೂಪಿಸಿದರು. ಯಶವಂತ ಧನ್ನೇಕರ ವಂದಿಸಿದರು. ಇದಕ್ಕೂ ಮೊದಲು ಶೋಭಾ ನಿಂಬರ್ಗಾ, ಸೀಮಾ ಹುಣಚಡಗಿ ತಂಡದವರಿಂದ ವಚನ ಗಾಯನ ನಡೆಯಿತು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಬಲಿಷ್ಠ ಸಂಘಟನೆ ಸ್‌ಅತಿ ಅವಶ್ಯ: ಲಕ್ಷ್ಮಣ ದಸ್ತಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago