ಬಿಸಿ ಬಿಸಿ ಸುದ್ದಿ

ಗುಲ್‌ಮೊಹರ್‌ನ ಮೋಡಿ ನೋಡಿ

  • ಕರುಣೇಶ.ಜಿ.ಪಾಟೀಲ

ಶಹಾಬಾದ:ಹೂವು ಅರಳಿರುವ ಸುಂದರ ಚಿತ್ತಾರಕ್ಕೆ ಮರಳಾಗದವರಿಲ್ಲ. ಇಲ್ಲಿನ ಜಿಇ ಕಾಲೋನಿಯಲ್ಲಿ ಕೆಂಪು ರಂಗಿನ ಅರಳಿದ ಹೂ ರಾಶಿಯನ್ನು ಮುಡಿಯಲ್ಲಿ ಹೊತ್ತು ನಿಂತಿರುವ ಗುಮೊಹರ್ ಮರಗಳ ಸಾಲು ಸ್ವಾಗತ ಕೋರುತ್ತಿವೆ. ಕಾಲೋನಿಯಲ್ಲಿ ಯಥೇಚ್ಛವಾಗಿ ಬೆಳೆದಿರುವ ಮರಗಳು ಈಗ ಹೂಗಳನ್ನು ಅರಳಿಸಕೊಂಡು ದಾರಿ ಹೋಕರ ಕಣ್ಮನ ಸೆಳೆಯುತ್ತಿದೆ.

ಒಂದು ಬಾರಿ ಕಾಲೋನಿಯಲ್ಲಿ ಸುತ್ತಾಡಿದರೆ ವೈವಿದ್ಯಮಯ ಸಸ್ಯ ಸಂಪತ್ತು ನಮ್ಮನ್ನು ಆಕರ್ಷಿಸದೇ ಇರಲಾರದು. ಹಚ್ಚಹಸಿರಿನಿಂದ ಕೂಡಿದ ಸಸ್ಯಗಳು, ಹೂ, ಹಣ್ಣುಗಳಿಂದ ನಳನಳಿಸುವ ಸಸ್ಯ ಸಂಪತ್ತು ಎಲ್ಲೆಡೆ ಕಣ್ಣಿಗೆ ರಾಚುತ್ತದೆ. ಮೇ, ಜೂನ್ ತಿಂಗಳ ಸಮಯದಲ್ಲಿ ಬೇಸಿಗೆಯ ಬಿರು ಬಿಸಿಲಿಗೆ ಎಲೆಯನ್ನೆಲ್ಲಾ ಉದುರಿಸಿಕೊಂಡು ಕೆಂಪು ಹೂಗಳನ್ನು ಮರದ ತುಂಬಾ ಅರಳಿಸಿ ಕಂಗೊಳಿಸುತ್ತದೆ. ಎಲ್ಲಾ ಪ್ರದೇಶದಲ್ಲಿ ಕಂಡು ಬರುವ ಈ ಮರ ಸೌಂದರ್ಯದ ಪ್ರತೀಕವಾಗಿದೆ.ಗಿಡದ ತುಂಬೆಲ್ಲಾ ಹೂಗಳು ಅರಳಿರುವುದರಿಂದ ನಾನಾ ವಿಧದ ಬಣ್ಣ ಬಣ್ಣದ ಚಿಟ್ಟೆಗಳು ಹಾಗೂ ಕೀಟಗಳು ಮಕರಂದ ಹೀರಲು ಹಾರಾಡುತ್ತಿರುವ ನೋಟವು ಆಕರ್ಷಕವಾಗಿರುತ್ತದೆ.

ಇದನ್ನೂ ಓದಿ: ನಾಳೆ ಜೆಡಿಎಸ್ ನಿಂದ ಚುನಾವಣೆ ರಣಕಹಳೆ: ಹೆಚ್.ಡಿ.ಕುಮಾರಸ್ವಾಮಿ ಘೋಷಣೆ

ಆಸ್ಟ್ರೇಲಿಯಾ, ಕೆರಬಿಯನ್, ಚೈನಾ, ಥೈವಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಕಂಡು ಬರುತ್ತದೆ. ಭಾರತದಲ್ಲಿ ಮೇ-ಜೂನ್ ತಿಂಗಳಲ್ಲಿ ಅರಳುವ ಗುಲ್‌ಮೊಹರ್ ಕೆಂಪು ಬಣ್ಣದ ಪರಿಮಳ ಸೂಸುತ್ತಾ ನಗೆ ಚೆಲ್ಲಿ ನಿಲ್ಲುವ ಪರಿ ಚಿತ್ತಾಕರ್ಷಕ ಹಾಗೂ ವರ್ಣಾತೀತ. ಎಲೆಗಳು ಉದುರಿ ಹೋಗಿ ಮರದ ತುಂಬೆಲ್ಲ ಮೈದುಂಬಿಕೊಂಡು ಕಂಗೊಳಿಸುವುದರಿಂದ ದಾರಿ ಹೋಕರ, ವಾಯು ವಿಹಾರಕ್ಕೆ ಬಂದ ನೋಡುಗರ ಕಣ್ಮನ್ ಸೆಳೆಯುತ್ತಿದೆ. ಎತ್ತ ನೋಡಿದರೂ ರಕ್ತದ ಬಣ್ಣ ರಾಚುತ್ತಾ ನಿಂತು ಪರಿಸರದ ಮೇಲೆ ಪ್ರಭುತ್ವ ಸಾಧಿಸಿ, ಮರಕ್ಕೂ ಪರಿಸರಕ್ಕೂ ಕಳೆ ತರುತ್ತಿದೆ.

ಸಂಕೇಶ್ವರ ಮರ, ಮೇ ಫ್ಲವರ್, ಕತ್ತಿಕಾಯಿ ಮರ ವಿವಿಧ ಹೆಸರುಗಳಿಂದ ಕರೆಯುವ ಇದರ ವೈಜ್ಞಾನಿಕ ಹೆಸರು ಡಿಲೋನಿಕ್ಸ ರೇಜಿಯಾ ಎಂದು. ಲೆಗುಮಿನೇಸಿ ಕುಟುಂಬಕ್ಕೆ ಸೇರಿರುವ ಈ ಮರ ಔಷಧಿಯ ಗುಣಗಳನ್ನು ಹೊಂದಿದೆ. ಕೇವಲ ಎರಡು ತಿಂಗಳು ಕಾಲ ಮಾತ್ರ ಅರಳುವ ಹೂಗಳು ತಮ್ಮ ಚೆಲುವಿನಿಂದ ನೋಡುಗರ ಮನತಣಿಸಿ ಅನೇಕ ಚಿಟ್ಟೆ ಹಾಗೂ ದುಂಬಿಗಳ ಹೊಟ್ಟೆಯನ್ನೂ ತುಂಬಿಸಿ ತಾವು ಬಂದ ಕೆಲಸ ಮುಗಿಯಿತೆಂಬಂತೆ ಮಾಯವಾಗುತ್ತವೆ.

ಇದನ್ನೂ ಓದಿ: ಆಳಂದ: ಕರ್ತವ್ಯ ಲೋಪ ಮೂವರು ಶಿಕ್ಷಕರ ಅಮಾನತು

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago