ಆಳಂದ: ಕರ್ತವ್ಯ ಲೋಪ ಮೂವರು ಶಿಕ್ಷಕರ ಅಮಾನತು

0
62

ಆಳಂದ : ಕರ್ತವ್ಯಲೋಪದಡಿ ತಾಲೂಕಿನ ಅಂಬೇವಾಡ ಶಾಲೆಯ ಇಬ್ಬರು ಶಿಕ್ಷಕರು ಮತ್ತು ಕರ್ತವ್ಯಲೋಪ ಹಾಗೂ ಅವ್ಯವಹಾರ ಆರೋಪದಡಿ ಖಜೂರಿ ಓರ್ವ ಶಿಕ್ಷಕಿ ಸೇರಿ ಮೂವರನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಶೋಕ ಭಜಂತ್ರಿ ಅವರು ಅಮನಾತುಗೊಳಿಸಿ ಆದೇಶಿ ಹೊರಡಿಸಿದ್ದಾರೆ.

ತಾಲೂಕಿನ ಅಂಬೇವಾಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಅಬ್ದುಲ ರಜಾಕ್ ಮತ್ತು ಪ್ರಭಾರಿ ಮುಖ್ಯ ಶಿಕ್ಷಕ ಜಹೀರ್ ಅಬ್ಬಾಸ್ ಅವರನ್ನು ಕರ್ತವ್ಯ ಲೋಪದ ಕುರಿತು ಶಾಸಕ ಸುಭಾಷ ಗುತ್ತೇದಾರ ದೂರಿನನ್ವಯ ಶಿಕ್ಷಣ ಸಂಯೋಜಕರು, ಕ್ಷೇತ್ರ ಬಿಆರ್ಪಿ ಮತ್ತು ಸಿಆರ್ಪಿ ನೀಡಿದ ವರದಿಗೆ ಕ್ರೋಢಿಕರಿಸಿದ ಪರಿಶೀಲಿಸಿ ವರದಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ವರಧಿ ಆಧರಿಸಿ ಈ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ದೇವತ್ಕಲ್ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ವಿರುದ್ಧ ಕ್ರಮಕ್ಕೆ ರಕ್ಷಣಾ ಸೇನೆ ಆಗ್ರಹ

ಮತ್ತೊಂದಡೆ ಖಜೂರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೀರಮ್ಮ ಕಲ್ಲಪ್ಪ ಅವರನ್ನು ಸರ್ಕಾರದ ಮಹತ್ತರ ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ವಿಫಲವಾಗಿದ್ದು ಇವರ ಮೇಲೆ ಕರ್ತವ್ಯ ನಿರ್ಲಕ್ಷ್ಯತೆ ಅಂಶಗಳ ಆಧಾರದ ಮೇರೆಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಮುಖ್ಯ ಶಿಕ್ಷಕಿ ವೀರಮ್ಮ ಅವರ ವಿರುದ್ಧ ನಮ್ಮ ಕರುನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಗಂಗಾಧರ ಕುಂಬಾರ, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ಅವರು ನೀಡಿದ ದೂರು ಮತ್ತು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅವರು ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದ ವರದಿ ಅನ್ವಯ ಶಿಕ್ಷಣಾಧಿಕಾರಿಗಳು ಸಲ್ಲಿಸಿದ ಅಂತಿಮ ವರದಿಯ ಮೇಲೆ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here