ಬಿಸಿ ಬಿಸಿ ಸುದ್ದಿ

ಎಸ್ಸಿ-ಎಸ್ಟಿ ಮೀಸಲು: ಹೋರಾಟಕ್ಕೆ ವೇದಿಕೆ ಸಿದ್ಧ – ಭೀಮರಾವ ದೊರೆ

  • ಮೆ.೨೦ ರಂದು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ
  • ನ್ಯಾ.ನಾಗಮೋಹನದಾಸ ವರದಿ ಜಾರಿಗೆ ಆಗ್ರಹ

ಕಲಬುರಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ಸತತವಾಗಿ ಹೋರಾಟ ನಡೆಸಲು ವೇದಿಕೆ ಸಿದ್ಧಗೊಂಡಿದೆ  ಎಂದು ಮಹರ್ಷಿ ವಾಲ್ಮೀಕಿ ಸಮಾಜದ ಚಿತ್ತಾಪುರ ತಾಲೂಕು ಅಧ್ಯಕ್ಷ ಭೀಮರಾವ ದೊರೆ ಹೇಳಿದರು.

ವಾಡಿ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಬೌದ್ಧ ಸಮಾಜ, ಮಹರ್ಷಿ ವಾಲ್ಮೀಕಿ ಸಮಾಜ, ಮಾದಿಗ ಸಮಾಜ, ಬಂಜಾರಾ ಮತ್ತು ಭೋವಿ ಸಮಾಜಗಳ ಮುಖಂಡರ ಜಂಟಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ನಿವೃತ್ತ ನ್ಯಾ.ನಾಗಮೋಹನದಾಸ ಅವರ ಅಧ್ಯಕ್ಷತೆಯ ಏಕಸದಸ್ಯ ಆಯೋಗ ಎಸ್ಸಿ-ಎಸ್ಟಿ ಮೀಸಲು ಪ್ರಮಾಣವನ್ನು ಜನಸಂಖ್ಯೆಗನುಗುಣವಾಗಿ ಪಜಾಗೆ ಶೇ.೧೭ ಮತ್ತು ಪಪಂಕ್ಕೆ ಶೇ.೭.೩ ಹೆಚ್ಚಿಸಲು ಸೂಚಿಸಿದೆ. ಅಧಿಕಾರದಲ್ಲಿರುವ ಸರ್ಕಾರ ವರದಿ ಜಾರಿಗೆ ಹಿಂದೇಟು ಹಾಕುತ್ತಿದೆ. ಪರಿಣಾಮ ಮೇ.೨೦ ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪಜಾ/ಪಪಂ ಸಮುದಾಯಗಳ ಜಂಟಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.

ಇದನ್ನೂ ಓದಿ: ಜಿಮ್ಸ್ ನಲ್ಲಿ ರೋಗಿಗಳಿಗೆ ಭೇಟಿ ಮಾಡಿದ ಸಂಸದ ಡಾ.ಉಮೇಶ ಜಾಧವ

ಸಂವಿಧಾನಬದ್ಧ ಹಕ್ಕುಗಳಿಂದ ವಂಚಿತಗೊಂಡಿರುವ ಬೇಡ, ನಾಯಕ ಸೇರಿದಂತೆ ಬುಡಕಟ್ಟು ಜನಾಂಗಗಳನ್ನು ಸಂಘಟಿಸುವಲ್ಲಿ ಶ್ರಮಿಸುತ್ತಿರುವ ವಾಲ್ಮೀಕಿ ಗುರುಪೀಠದ ಪೂಜ್ಯ ಪ್ರಸನ್ನಾನಂದ ಸ್ವಾಮೀಜಿ ಅವರು ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ೯೫ ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ಮಾತ್ರ ಪರಿಶಿಷ್ಟರ ಆಕ್ರಂಧನ ಕೇಳಿಸಿಕೊಳ್ಳುವಲ್ಲಿ ಜಾಣ ಕಿವುಡಾಗಿದೆ. ಹಕ್ಕು ಹರಣ ಮಾಡುತ್ತಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸಲು ಮೇ.೨೦ ರಂದು ಚಿತ್ತಾಪುರ ತಾಲೂಕು ಕೇಂದ್ರದಲ್ಲಿ ಪಜಾ/ಪಪಂ ಸಮುದಾಯಗಳ ಜಂಟಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಸರ್ಕಾರ ಕಿವಿಗೊಡದಿದ್ದರೆ, ರಾಜ್ಯಾಧ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಹಾಗೂ ಭೋವಿ ಸಮಾಜದ ಕಾರ್ಯದರ್ಶಿ ರಘುವೀರ ಪವಾರ ಮಾತನಾಡಿ ಮೀಸಲಾತಿ ಹೋರಾಟವನ್ನು ಬೆಂಬಲಿಸುವುದಾಗಿ ಹೇಳಿದರು. ಮಾದಿಗ ಸಮಾಜದ ಮುಖಂಡ ರಾಜು ಮುಕ್ಕಣ್ಣ ಮಾತನಾಡಿ, ಅಂಬೇಡ್ಕರರಿಗೆ ಅಪಮಾನವಾದಾಗ ಮತ್ತು ಸಂವಿಧಾನ ಸುಡುವ ಹೇಳಿಕೆಗಳು ಕೇಳಿಬಂದಾಗ ಹೊಲೆ ಮಾದಿಗರಷ್ಟೇ ಹೋರಾಟಕ್ಕೆ ನಿಲ್ಲುತ್ತಾರೆ. ಇನ್ನುಳಿದ ಮೀಸಲಾತಿ ಫಲಾನುಭವಿ ಜನಾಂಗಗಳು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು. ಅಕ್ರಮ ಪರೀಕ್ಷೆ, ನೇಮಕಾತಿ ಮತ್ತು ಭ್ರಷ್ಟಾಚಾರಗಳ ವಿರುದ್ಧ ವಿಧಾನಸೌಧದ ಒಳಗೂ ಮತ್ತು ಹೊರಗೂ ಧೈರ್ಯದಿಂದ ಮಾತನಾಡುತ್ತಿರುವ ರಾಜ್ಯದ ಏಕೈಕ ದಲಿತ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೋಟೀಸ್ ಕೊಟ್ಟು ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳಕ್ಕೆ ಶಾಸಕ ಬಸವರಾಜ ಮತ್ತಿಮಡು ಭೇಟಿ

ಇದಕ್ಕೂ ಶಾಸಕ ಖರ್ಗೆಯವರೇ ಪ್ರತ್ಯುತ್ತರ ಕೊಟ್ಟು ಕೆಚ್ಚೆದೆ ಪ್ರದರ್ಶಿಸಿದ್ದಾರೆ. ಆದರೆ ಉಳಿದ ಪಜಾ/ಪಪಂ ಶಾಸಕರು ಖರ್ಗೆ ಪರ ಮಾತನಾಡುತ್ತಿಲ್ಲ ಏಕೆ? ಮಾದಿಗ ಸಮಾಜದ ಮುಖಂಡ, ಪುರಸಭೆ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ವಕೀಲ ಶ್ರವಣಕುಮಾರ ಮೊಸಲಗಿ ಮಾತನಾಡಿ, ದೇಶದಲ್ಲಿ ಖಾಸಗೀಕರಣ ಜಾರಿಯಾದಂದಿನಿಂದ ಮೀಸಲಾತಿಗೆ ಬೆಲೆ ಇಲ್ಲವಾಗಿದೆ. ಉದ್ಯೋಗ ಕ್ಷೇತ್ರಗಳನ್ನು ಸರ್ಕಾರ ಸಂಪೂರ್ಣ ಖಾಸಗೀಕರಣ ಮಾಡುತ್ತಿದೆ. ನಿರುದ್ಯೋಗ ಸಂಖ್ಯೆ ಹೆಚ್ಚಲು ಈ ಹೆಮ್ಮಾರಿಯೇ ಕಾರಣವಾಗಿದ್ದು, ಖಾಸಗೀಕರಣದ ವಿರುದ್ಧ ಮೊದಲು ದನಿ ಎತ್ತಬೇಕು ಎಂದು ಕರೆ ನೀಡಿದರು.

ಬೌದ್ಧ ಸಮಾಜದ ಖಜಾಂಚಿ ಚಂದ್ರಸೇನ ಮೇನಗಾರ, ಮಾದಿಗ ಸಮಾಜದ ಅಧ್ಯಕ್ಷ ಬಸವರಾಜ ಕಾಟಮಳ್ಳಿ, ಬಂಜಾರಾ ಸಮಾಜದ ಮುಖಂಡ ತುಕಾರಾಮ ರಾಠೋಡ, ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಉಪಾಧ್ಯಕ್ಷ ಸುಭಾಷ ರದ್ದೇವಾಡಗಿ, ಮುಖಂಡರಾದ ಬಸಲಿಂಗಪ್ಪ ಬಂದಳ್ಳಿ, ನಾಗೇಂದ್ರ ಜಮಾದಾರ, ಹಾಜಪ್ಪ ಲಾಡ್ಲಾಪುರ, ಭಾಗಣ್ಣ ದೊರೆ, ಭೀಮರಾಯ ದಿಗ್ಗಾಂವ, ಜಗನ್ನಾಥ ಸುಬೇದಾರ, ಇಂದ್ರಜೀತ ಸಿಂಗೆ, ಸತೀಶ ಭಟ್ಟರ್ಕಿ, ಶರಣಪ್ಪ ವಾಡೇಕರ, ಆನಂದ ಇಂಗಳಗಿ ಪಾಲ್ಗೊಂಡಿದ್ದರು.

ಇ-ಸ್ಟಾಂಪಿಂಗ್ ಸೌಲಭ್ಯ ಯಶಸ್ವಿಯಾಗಲಿ- ರವೀಂದ್ರ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago