ಇ-ಸ್ಟಾಂಪಿಂಗ್ ಸೌಲಭ್ಯ ಯಶಸ್ವಿಯಾಗಲಿ- ರವೀಂದ್ರ

0
19

ಶಹಾಬಾದ:ದೈನಂದಿನ ವ್ಯವಹಾರದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಉದ್ದೇಶದಿಂದ ಆರಂಭಿಸಿರುವ ಇ-ಸ್ಟಾಂಪಿಂಗ್ ಸೌಲಭ್ಯ ಯಶಸ್ವಿಯಾಗಲಿ ಎಂದು ಸೇಡಂನ ಸಹಕಾರ ಸಂಘದ ಸಹಾಯಕ ನಿಬಂಧಕರಾದ ರವೀಂದ್ರ ಹೇಳಿದರು.

ಅವರು ನಗರದ ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ನಿಯಮಿತದಲ್ಲಿ ಆಯೋಜಿಸಲಾದ ಇ-ಸ್ಟ್ಯಾಂಪಿಂಗ್ ಸೇವೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಗುಲ್‌ಮೊಹರ್‌ನ ಮೋಡಿ ನೋಡಿ

ಇ-ಸ್ಟ್ಯಾಂಪಿಂಗ್ ಸೇವೆ ನೀಡುವುದರಿಂದ ಸಾರ್ವಜನಿಕರಿಗೆ ದೂರದ ಜಿಲ್ಲಾ ಕೇಂದ್ರಕ್ಕೆ ತೆರಳುವುದು ತಪ್ಪಿಸಿದಂತಾಗುತ್ತದೆ.ಅಲ್ಲದೇ ಇಂದಿನ ದಿನಗಳಲ್ಲಿ ಸರಕಾರದ ಪ್ರತಿ ವ್ಯವಹಾರಕ್ಕೂ ಇ-ಸ್ಟಾಂಪ್ ಅಗತ್ಯವಿದ್ದು, ಈ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ.ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ.ಮತ್ತೆ ಬ್ಯಾಂಕಿನ ಆರ್ಥಿಕ ಪ್ರಗತಿಯೂ ಹೆಚ್ಚಲಿದೆ ಎಂದು ಹೇಳಿದರು.

ನಿವೃತ್ತ ಲೆಕ್ಕ ಪರಿಶೋಧಕರಾದ ನವಲೆ ಭಾಗಪ್ಪ ಮಾತನಾಡಿ, ಜನರಿಗೆ ಅಗತ್ಯವಿರುವ ಇ-ಸ್ಟಾಂಪ್ ಸೇವೆಯೂ ಸುಲಭ ರೀತಿಯಲ್ಲಿ ಸಿಗುವಂತಾಗಲಿ.ಬ್ಯಾಂಕಿನ ಪ್ರತಿಯೊಬ್ಬ ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿದರೇ ಬ್ಯಾಂಕಿನ ಏಳ್ಗೆ ಸಾಧ್ಯ.ಆದ್ದರಿಂದ ಎಲ್ಲರೂ ಒಮ್ಮನಸ್ಸಿನಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ಅಹ್ಮದ್ ಪಟೇಲ್ ಮಾತನಾಡಿ, ತಾಂತ್ರಿಕ ಯುಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಮಯ ಉಳಿತಾಯ ಶೀಘ್ರದಲ್ಲಿ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಇ-ಸ್ಟಾಂಪ್ ಸೇವೆ ಪ್ರಾರಂಭ ಮಾಡಿದ್ದೆವೆ.ಇದರ ಅನುಕೂಲವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಇದನ್ನೂ ಓದಿ: ಆಳಂದ: ಕರ್ತವ್ಯ ಲೋಪ ಮೂವರು ಶಿಕ್ಷಕರ ಅಮಾನತು

ನಿಂಗಣ್ಣ ಸಂಗಾವಿಕರ್, ಇಬ್ರಹಿಂಸಾಬ, ಮಲ್ಲಿಕಾರ್ಜುನಸ್ವಾಮಿ,ನಿಂಗಣ್ಣ ಪೂಜಾರಿ, ರಾಜು ಕಣದಾಳಕರ್,ಶರಣು ಮಡಿವಾಳ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here