ಬಿಸಿ ಬಿಸಿ ಸುದ್ದಿ

ಜನಸಮೂಹದ ಮದ್ಯೆ ನೆರವೇರಿದ ಸದ್ಗುರು ಶ್ರೀ ರಂಗಲಿಂಗೇಶ್ವರರ ರಥೋತ್ಸವ

ಕಲಬುರಗಿ: ಅದ್ದೂರಿಯಾಗಿ ಭವ್ಯ ರಥೋತ್ಸವ ನೆರದ ಭಕ್ತರ ಮದ್ಯೆ ಸದ್ಗುರು ರಂಗಲಿಂಗೇಶ್ವರ ಮತ್ತು ಕೂಡಲೂರು ಬಸವಲಿಂಗೇಶ್ವರ ಹಾಗೂ ಶ್ರೀ ಸದ್ಗುರು ಶ್ರೀ ಮಾರುತೇಶ್ವರರ ನಾಮದ ಜೈಘೋಷ ಹಾಕುವದರ ಮೂಲಕ ಅದ್ದೂರಿಯಾಗಿ ನೆರವೇರಿತು. ಇದಕ್ಕೂ ಮುನ್ನ ನಡೆದ ಧರ್ಮಸಭೆ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಡಿನ ಖ್ಯಾತ ಚಿಂತಕರಾದ ಶ್ರೀ ವಿಶ್ವರಾಧ್ಯ ಸತ್ಯಂಪೇಟ ರವರು ಮಾತನಾಡಿ ಹಲವು ಸಂಗತಿಗಳ ಕುರಿತು ಗಮನಸೆಳೆದರು, ಮಠಗಳು ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳ ಕಡೆ ದಾವಿಸಿ ಬರಬೇಕಾದ ತುರ್ತಿದೆ. ಮೌಢ್ಯ ಕಂದಾಚಾರಗಳನ್ನು ಸಮಾಜದಿಂದ ಹೊರದಬ್ಬಿ ವೈಚಾರಿಕವಾದ ವಾತಾವರಣವನ್ನು ನಿರ್ಮಿಸಬೇಕು. ಈ ದೆಸೆಯಲ್ಲಿ ಶ್ರೀ ರಂಗಲಿಂಗೇಶ್ವರರ ಕೊಡುಗೆ ಅನನ್ಯವಾದದ್ದು ಎಂದರು.

ಇದನ್ನೂ ಓದಿ: ಫೋನ್ ಮಾಡಿ ವಿದ್ಯಾರ್ಥಿಗೆ ಕಂಗ್ರಾಟ್ಸ್ ಹೇಳಿದ ಶಿಕ್ಷಣ ಸಚಿವರು

ವೇದಿಕೆಯkಮೇಲಿದ್ದ ಮತ್ತೊರ್ವ ಅತಿಥಿಗಳಾದ ಹೀರಿಯ ಸಾಹಿತಿಗಳಾದ ಶ್ರೀ ಶಿವಣ್ಣ ಇಜೇರಿಯವರು ಮಾತನಾಡಿ ಇವತ್ತು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಅನುಸಂಧಾನದ  ಅಗತ್ಯತೆಯಿದೆ. ಈ ಎರಡು ಕ್ಷೇತ್ರಗಳು ಸಮಾಜದ ವಿಕಾಸಕ್ಕಾಗಿ ತೆರೆದುಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ವಿಜಯ ಕರ್ನಾಟಕ ಪತ್ರಿಕೆಯ ಯಾದಗಿರಿ ವಲಯದ ಉಪಸಂಪಾದಕರಾದ ಶ್ರೀ ಪ್ರಕಾಶ ದೊರೆಯವರು ಮಾತನಾಡುತ್ತ ತಮ್ಮ ಮತ್ತು ಶ್ರೀಗಳ ನಡುವಿನ ಸಂಭಂದದ ಕುರಿತು ಮಾತನಾಡಿ ಶ್ರೀ ರಂಗಲಿಂಗೇಶ್ವರರು ಹಲವು ಅನುಪಮವಾದ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ್ದಾರೆ. ಇವರಿಂದ ಅನೇಕ ತತ್ವಪದಗಳು ರಚನೆಯಾಗಿವೆ ಸುಮಾರು 169 ತತ್ವಪದಗಳು ಮಾತ್ರ ಇವರೆಗೂ ಲಭ್ಯವಾಗಿದ್ದು ಇನ್ನುಳಿದವುಗಳನ್ನು ಶೋದಿಸಬೇಕಾಗಿದೆ, ಹಾಗಾದಾಗ ಮಾತ್ರ ಇವರ ಸಮಗ್ರ ಕೊಡುಗೆಗಳು ಸಮಾಜಕ್ಕೆ ದೊರಕಿದಂತಾಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಶ್ರೀ ಮಲ್ಲಣ್ಣ ಹೊಸಮನಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ಪರಮಪೂಜ್ಯ ಕೈಲಾಸ ಆಶ್ರಮ ಶ್ರೀಗಳಾದ ಶ್ರೀ ಶಿವಲಿಂಗ ಶರಣರು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಠದ ಮುಖ್ಯಸ್ಟರಾದ ಶ್ರೀ ಶಿವಯೋಗಿ ಶರಣರು ವಹಿಸಿದ್ದರು. ಈ ಕಾರ್ಯಕ್ರಮ ವೇದಿಕೆಯಲ್ಲಿ ಶ್ರೀ ಯಂಕೋಬಾ ಹೊಳ್ಳೆಪ್ಪ ಪೂಜಾರಿ, ಶ್ರೀಮತಿ ರಕ್ಷಿತಾ ಮತ್ತು ಶ್ರೀ ಈರಣ್ಣ ದೇಸಾಯಿ ಹಾಗೂ ಪಂಪಣ್ಣಗೌಡ ಮುಂತಾದವರು ವೇದಿಕೆಯ ಮೇಲಿದ್ದರು. ಈ ಕಾರ್ಯಕ್ರಮವನ್ನು ಡಾ, ಸಾಯಿಬಣ್ಣ ಯಾದಗಿರಿ ನಿರೂಪಿಸಿದರು, ಶ್ರೀ ಹಣಮಂತ್ರಾಯ ಗುರಿಕಾರ ಸ್ವಾಗತಿಸಿದರು, ಡಾ. ನಾಗರಾಜ ದೊರೆ ವಂದಿಸಿದರು.

ಇದನ್ನೂ ಓದಿ: ೧೮ ನೇ ಶತಮಾನದ ಸಂತ ಶರಣಬಸವೇಶ್ವರರ ಜೀವನಚರಿತ್ರೆ ಎರಡು ದಿನ ಪ್ರಸಾರ

ಈ ರಥೋತ್ಸವದಲ್ಲಿ ಶ್ರೀ ಭೀಮಶ್ಯ ಕುಡಗಿ ಶ್ರೀ ರಾಮಣ್ಣ ಮದರಿ ಶ್ರೀ ರಾಮಯ್ಯ ತಟ್ಟಿಮನಿ ಶ್ರೀ ಸಣ್ಣ ಬಾಬು ಕೂಡಗಿ ಶ್ರೀ ಕೃಷ್ಣ್ನಪ್ಪ ಅಂಗಡಿ ಯಾದವ ಶ್ರೀ ಶ್ರೀಶೈಲ್ ಮಡಿವಾಳಕಾರ್ ಶ್ರೀ ನಾರಾಯಣ ಯಾದವ ಶ್ರೀ ಅಶೋಕರಾವ್ ಮಲ್ಲಬಾದಿ ಶ್ರೀ ಸಿದ್ದನಗೌಡ ಮಾಲಿಪಾಟೀಲ್ ಶ್ರೀ ನನ್ನಯ್ಯ ಸ್ವಾಮಿ ಗಣಚಾರಿ ಶ್ರೀ ಶರಣು ಇಟಗಿ ಸೇರಿದಂತೆ ಸಮಸ್ತ ಗ್ರಾಮಸ್ಥರು ಭಾಗವಹಿಸಿದ್ದರು

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

5 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

5 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

7 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

7 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

7 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

7 hours ago