ಕಲಬುರಗಿ; ಕನ್ನಡದ ಜನಪ್ರಿಯ ಚಾನೆಲ್ ಸುವರ್ಣ ಕನ್ನಡದಲ್ಲಿ ಸಂತ ಶರಣಬಸವೇಶ್ವರರ ಜೀವನ ಮತ್ತು ಮನುಕುಲದ ಕಲ್ಯಾಣ ಹಾಗೂ ಶೈಕ್ಷಣಿಕ ಸಬಲೀಕರಣಕ್ಕಾಗಿ ಶರಣಬಸವೇಶ್ವರ ಸಂಸ್ಥಾನ ಮತ್ತು ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿದ ಕೊಡುಗೆ ಕುರಿತು ಎರಡು ಭಾಗಗಳ ಧಾರಾವಾಹಿ ಪ್ರಸಾರವಾಗಲಿದೆ.
೧೮ನೇ ಶತಮಾನದ ಸಂತ ಶರಣಬಸವೇಶ್ವರರ ಜೀವನ ಮತ್ತು ಈ ಭಾಗದ ಜನರ ಕಲ್ಯಾಣಕ್ಕಾಗಿ ೨೦೦ ವ?ಕ್ಕಿಂತ ಮೇಲ್ಪಟ್ಟ ಸಂಸ್ಥಾನದ ಕೊಡುಗೆ ಕುರಿತು ಒಂದು ಗಂಟೆಯ ಕಾರ್ಯಕ್ರಮವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ಪ್ರತಿ ಧಾರವಾಹಿ ೩೦ ನಿಮಿ?ಗಳ ಸಂಚಿಕೆಯನ್ನು ಹೊಂದಿದೆ ಹಾಗೂ ಅದು ಮೇ ೨೧ ಮತ್ತು ಮೇ ೨೨ ರಂದು ಸಂಜೆ ೬.೦೦ ಗಂಟೆಗೆ ಪ್ರಸಾರವಾಗಲಿದೆ.
ಇದನ್ನೂ ಓದಿ: ಜೇವರ್ಗಿ ಸಿದ್ದಲಿಂಗಪ್ಪ ಮುದುಬಾಳ ಅದ್ಭುತ ಸಾಧನೆ: SSLC ಪರೀಕ್ಷೆಯಲ್ಲಿ 619/625 ಅಂಕ
ಮೊದಲ ಸಂಚಿಕೆಯು ಶರಣಬಸವೇಶ್ವರ ಸಂಸ್ಥಾನದ ಇತಿಹಾಸವನ್ನು ವಿಸ್ತಾರವಾಗಿ ವಿವರಿಸುತ್ತದೆ ಮತ್ತು ಸಂತ ಶರಣಬಸವೇಶ್ವರರು ಹೇಗೆ ಸಂತರಲ್ಲಿ ಮುನ್ನುಗ್ಗಿದರು ಮತ್ತು ಜನರ ಸಂಕ?ಗಳನ್ನು ನಿವಾರಿಸಲು ಅವರ ನಿಸ್ವಾರ್ಥ ಸೇವೆ ಮತ್ತು ೧೮ ನೇ ಶತಮಾನದ ಭೀಕರ ಬರಗಾಲದಲ್ಲಿ ಸಿಲುಕಿದ ಪ್ರದೇಶದ ಜನರಿಗೆ ಅವರು ಹೇಗೆ ಸೇವೆ ಸಲ್ಲಿಸಿದರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ದಾಸೋಹ ಸಂಸ್ಕೃತಿಯು ಈ ಪ್ರದೇಶದಲ್ಲಿ ಹೇಗೆ ಜೀವನ ಪದ್ಧತಿಯಾಯಿತು ಎನ್ನುವುದನ್ನು ವಿವರಿಸುತ್ತದೆ. ಸಂತ ಶರಣಬಸವೇಶ್ವರರ ನಂತರ ಸಂಸ್ಥಾನದ ಉತ್ತರಾಧಿಕಾರಿಯಾದ ದೊಡ್ಡಪ್ಪ ಶರಣರು ನೀಡಿದ ಕೊಡುಗೆ ಮತ್ತು ದೊಡ್ಡಪ್ಪ ಶರಣರ ಆಹ್ವಾನದ ಮೇರೆಗೆ ಸಂತ ಶರಣಬಸವೇಶ್ವರರು ಕಲಬುರಗಿಯನ್ನು ತಮ್ಮ ತವರುಮನೆಯನ್ನಾಗಿ ಮಾಡಿಕೊಂಡಿದ್ದು ಹೇಗೆ ಎಂಬುದನ್ನು ಈ ಸಂಚಿಕೆಯಲ್ಲಿ ಬಿಂಬಿಸಲಾಗಿದೆ.
ನಿಜಾಮ ಸರ್ಕಾರದ ದಬ್ಬಾಳಿಕೆಯ ವಿರುದ್ಧದ ವಿಮೋಚನಾ ಹೋರಾಟದಲ್ಲಿ ಸಂಸ್ಥಾನದ ೭ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಕೊಡುಗೆ ಮತ್ತು ಅವರು ೧೯೩೪ ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯನ್ನು ಹೇಗೆ ಪ್ರಾರಂಭಿಸಿದರು ಎಂಬುದರ ಒಳನೋಟವನ್ನು ಎರಡನೇ ೩೦ ನಿಮಿ?ಗಳ ಸಂಚಿಕೆ ನೀಡುತ್ತದೆ.
ಇದನ್ನೂ ಓದಿ: ನೂತನ ವಿದ್ಯಾಲಯ ಸಂಸ್ಥೆಯ ಬಾಲಕರ ಪ್ರೌಢ ಶಾಲೆಗೆ ಅತ್ಯುತ್ತಮ ಫಲಿತಾಂಶ
ಈ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳ ಸರಣಿಯನ್ನು ಪ್ರಾರಂಭಿಸಲು ಸಂಸ್ಥಾನದ ಮುಂದಿನ ಪ್ರಯತ್ನಗಳಿಗೆ ಬಲವಾದ ಅಡಿಪಾಯ ಹಾಕಿದವರು ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಅನ್ನ ದಾಸೋಹದ ಪರಿಕಲ್ಪನೆಯನ್ನು ಜ್ಞಾನ ದಾಸೋಹಕ್ಕೆ ವಿಸ್ತರಿಸಿ ಏಕಾಂಗಿಯಾಗಿ ಶೈಕ್ಷಣಿಕವಾಗಿ ಹಿಂದುಳಿದ ಕಲಬುರಗಿಯನ್ನು ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಿದ ಬಗೆಯನ್ನು ಈ ಸಂಚಿಕೆಯಲ್ಲಿ ವಿವರಿಸಲಾಗಿದೆ. ಇಡೀ ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರವಾದ ಕಲಬುರಗಿಯಲ್ಲಿ ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಡಾ. ಅಪ್ಪಾಜಿಯವರ ಕನಸು ನನಸಾಗಿಸಿದ ಶರಣಬಸವ ವಿಶ್ವವಿದ್ಯಾಲಯದ ಕುರಿತು ವಿವರಿಸಿದೆ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಸ್ಥಾಪನೆಗೆ ಅವರು ಹೇಗೆ ಕಾರಣಿಭೂತರಾಗಿದ್ದರು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ತದನಂತರ ಶರಣಬಸವ ವಿಶ್ವವಿದ್ಯಾಲಯ ಆರಂಭಿಸಿ ಶಿಕ್ಷಣ ಸಂಸ್ಥೆಗಳ ಸರಪಳಿಯಲ್ಲಿ ಮಹಿಳೆಯರ ಶೈಕ್ಷಣಿಕ ಸಬಲೀಕರಣದ ಬಗ್ಗೆಯೂ ಸಂಚಿಕೆ ವಿವರಿಸುತ್ತದೆ.
ಎರಡನೇಯ ಸಂಚಿಕೆಯು ಸಂಸ್ಥಾನದ ೯ನೇ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರ ಪಟ್ಟಾಭಿ?ಕವನ್ನೂ ಪ್ರಮುಖವಾಗಿ ಬಿತ್ತರಿಸುತ್ತದೆ. ೯ನೇ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರ ಪಟ್ಟಾಭಿಷೇಕದ ಅಂಗೀಕಾರ ಮತ್ತು ಪೀಠದ ಪಟ್ಟಾಧೀಕಾರವನ್ನು ವಿವಿಧ ಮಠಾಧೀಶರಾದ ಬೀದರ್ ಜಿಲ್ಲೆಯ ಹಾರಕೂಡ ಸಂಸ್ಥಾನ ಹಿರೇಮಠದ ಡಾ.ಚೆನ್ನವೀರ ಶಿವಾಚಾರ್ಯರು, ಆಂಧ್ರಪ್ರದೇಶದ ಶ್ರೀಶೈಲಂನ ಸಾರಂಗ ಮಠದ ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಉಜ್ಜಯಿನಿ ಮಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಾಗವತ್ಪದ ಸ್ವಾಮಿಗಳು, ಚೌಡಪುರಿ ಮಠದ ಪೂಜ್ಯ ಡಾ.ರಾಜಶೇಖರ ಮಹಾಸ್ವಾಮಿಗಳು, ಬೆಳಗುಂಪಿಯ ಪೂಜ್ಯ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಮಹಾರಾ?ದ ಔಸಾದ ಪೂಜ್ಯ ಶ್ರೀ ಗುರುಬಾಬಾ ಮಹಾರಾಜರು ಸೇರಿದಂತೆ ವಿವಿಧ ಮಠಾಧೀಶರಿಂದ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರಿಗೆ ೯ನೇ ಪೀಠಾಧಿಪತಿಯಾಗಿ ಪಟ್ಟಾಧಿಕಾರದ ಪಟ್ಟಾಭಿ?ಕ ಮತ್ತು ಅನುಗ್ರಹ ನೀಡಿ ಅನುಮೋದಿಸಿರುವದು ಬಿತ್ತರಿಸುತ್ತಿದೆ.