ಕಲಬುರಗಿ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತಳೆದಿರುವ ನಿಲುವು ಅಕ್ಷಮ್ಯ ಹಾಗೂ ದೇಶಕ್ಕೆ ತಪ್ಪು ಸಂದೇಶ ನೀಡುವಂತಿದೆ ಎಂದು ಸಿಪಿಐ(ಎಂ) ಸದಸ್ಯೆ ಬೃಂದಾ ಕಾರಟ್ ಬೇಸರ ವ್ಯಕ್ತಪಡಿಸಿದರು.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅಯೋಧ್ಯೆ ಪ್ರಕರಣದಲ್ಲಿ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆ-1991 ಅನ್ವಯ ದೇಶದ ಹಿತ ಕಾಪಾಡುವ ಕುರಿತು ಸುಪ್ರೀಂಕೋರ್ಟ್ ಮಾತನಾಡಿತ್ತು. ಆದರೆ, ಜ್ಞಾನವಾಪಿ ಪ್ರಕರಣದಲ್ಲಿ ಆ ಕಾಯಿದೆಯ ಸಮರ್ಪಕ ಬಳಕೆಗೆ ಮುಂದಾಗದೆ ತಪ್ಪು ಸಂದೇಶ ನೀಡುವ ಕೆಲಸ ಸುಪ್ರೀಂಕೋರ್ಟ್ ಮಾಡಿದೆ ಎಂದರು.
ಜ್ಞಾನವಾಪಿ ಪ್ರಕರಣದಲ್ಲಿ ಸುರ್ಪ್ರೀಕೋರ್ಟ್ ಹಸ್ತಕ್ಷೇಪದ ಅಗತ್ಯವಿರಲಿಲ್ಲ. ದೇಶದ ಶಾಂತಿ, ಸುವ್ಯವಸ್ಥೆ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಬೇಕಾದವರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸಿರುವುದು ಆತಂಕ ಮೂಡಿಸುವಂತಿದೆ. ನಮಗೆ ಸುರ್ಪ್ರೀ ಕೋರ್ಟ್‌ನಿಂದ ಅಪಾರ ನಿರೀಕ್ಷೆಯಿತ್ತು ಎಂದರು.
ಐತಿಹಾಸಿಕ ತಪ್ಪುಗಳಿಗೆ ಆದ್ಯತೆ ನೀಡುವುದರಿಂದ ದೇಶದ ಆಂತರಿಕ ಭದ್ರತೆ ಮತ್ತು ಭಾವೈಕ್ಯತೆ ಹದಗೆಡಬಹುದು ಎಂಬ ಮುಂದಾಲೋಚನೆಯಿಂದ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆ-1991 ಜಾರಿಗೆ ತರಲಾಗಿದೆ. ಜ್ಞಾನವಾಪಿ ಪ್ರಕರಣದಲ್ಲಿ ಈ ಕಾಯಿದೆಯನ್ನು ಉಲ್ಲೇಖಿಸದೆ ಸುಪ್ರೀಂಕೋರ್ಟ್ ನಿರಾಶೆ ಮೂಡಿಸಿದೆ ಎಂದು ಹೇಳಿದರು.
ಜ್ಞಾನವಾಪಿಯ ಬೆನ್ನಲ್ಲೇ ಮಥುರಾ ಶ್ರೀ ಕೃಷ್ಣ ದೇಗುಲದ ಪ್ರಕರಣವೂ ಮುನ್ನೆಲೆಗೆ ಬರುತ್ತಿದೆ. ಆ ಮೂಲಕ ರಾಜಕಾರಣಕ್ಕಾಗಿ ದೇಶಾದ್ಯಂತ ಅಶಾಂತಿ ಮೂಡಿಸುವ ಕೆಲಸವನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಮಾಡುತ್ತಿವೆ ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ, ಎಂ.ಬಿ.ಸಜ್ಜನ್, ಭೀಮಶೆಟ್ಟಿ ಯಂಪಳ್ಳಿ, ಶರಣಬಸಪ್ಪ ಮಮಶೆಟ್ಟಿ, ಜಾವೇದ್ ಹುಸೇನ್, ರೇವಣಸಿದ್ದಪ್ಪ ಕಲಬುರಗಿ ಹಾಗೂ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…