ಬಿಸಿ ಬಿಸಿ ಸುದ್ದಿ

೧೫ ನೇ ಹಣಕಾಸು ಯೋಜನೆಯ ೨೫೮ ಲಕ್ಷ ರೂ. ಕ್ರಿಯಾಯೋಜನೆಗೆ ಸರ್ವ ಸದಸ್ಯರ ಒಪ್ಪಿಗೆ

ಶಹಾಬಾದ:ನಗರದ ನಗರಸಭೆಯಲ್ಲಿ ಶನಿವಾರ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮನ್ಯ ಸಭೆಯಲ್ಲಿ ೧೫ ನೇ ಹಣಕಾಸು ಯೋಜನೆಯಡಿ ಸುಮಾರು ೨೫೮ ಲಕ್ಷ ರೂ.ಗಳ ಕ್ರೀಯಾಯೋಜನೆಗೆ ಸರ್ವ ಸದಸ್ಯರು ಒಪ್ಪಿಗೆ ನೀಡಿ ಅನುಮೋದನೆ ಪಡೆಯಲಾಯಿತು.

೧೫ನೇ ಹಣಕಾಸು ಯೋಜನೆಯ ಪ್ರೀಯಾಯೋಜನೆಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಬೀದಿ ದೀಪಗಳ ನಿರ್ವಹಣೆಗೆ ಅನುದಾನ ಕಾಯ್ದಿರಿಸುವುದು ಕಂಡು ಬಂದಿತು. ಎಸ್‌ಎಫ್‌ಸಿ ಮುಕ್ತ ಅನುದಾನವನ್ನು ಸರ್ಕಾರದ ಆದೇಶದಂತೆ ಸಾಮನ್ಯವರ್ಗದ ಸುಮಾರು ೯೯ ಲಕ್ಷ ರೂ. ಅನುದಾನವನ್ನು ಹೊರಗುತ್ತಿಗೆ ಕಾರ್ಮಿಕರ ವೇತನಕ್ಕಾಗಿ ಕಾಯ್ದಿರಿಸಲಾಯಿತು.

ಅಲ್ಲದೇ ಎಸ್‌ಈಪಿ (ಪರಿಶಿಷ್ಟ ಜಾತಿ) ಅನುದಾನದ ೧೭ ಲಕ್ಷ ರೂ. ಅನುದಾನದಲ್ಲಿ ೧೭ ಲಕ್ಷ ರೂ.ಯನ್ನು ಪೌರಕಾರ್ಮಿಕರಿಗಾಗಿ ಬೆಳಗಿನ ಉಪಹಾರಕ್ಕಾಗಿ ಹಾಗೂ ಇನ್ನುಳಿದ ೬.೮೦ ಲಕ್ಷ ರೂ.ಯನ್ನು ಪರಿಶಿಷ್ಟ ಜಾತಿ ವಾಸಿಸುವ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಣವನ್ನು ಕಾಯ್ದಿರಿಸಲಾಯಿತು.ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.

ತೆರಿಗೆ ಹಣ ಕಟ್ಟಲು ಸಾರ್ವಜನಿಕರು ಬಂದರೆ ನಗರಸಭೆಯ ಬಿಲ್ ಕಲೆಕ್ಟರ್‌ಗಳು ಹತ್ತು ದಿನ ಬಿಟ್ಟು ಬನ್ನಿ. ಇದು ನನಗೆ ಸಂಬಂಧಿಸಿದಲ್ಲ ಎಂದು ಒಬ್ಬರ ಮೇಲೆ ಒಬ್ಬರು ಹಾಕುತ್ತ ಸಾರ್ವಜನಿಕರಿಗೆ ಪೀಡಿಸುತ್ತಿದ್ದಾರೆ.ಮನೆಗೆ ಹೋಗಿ ತೆರಿಗೆ ಕಟ್ಟಿ ಎಂದು ಹೋದರೇ ಹಣ ಕಟ್ಟುವುದಿಲ್ಲ. ಕಚೇರಿಗೆ ಬಂದು ಹಣ ಕಟ್ಟು ಮುಂದಾದರೂ ಹಣ ಕಟ್ಟಿಸುಕೊಳ್ಳುವುದಿಲ್ಲ ಎಂದರೆ ನಗರಸಭೆಯ ಆಡಳಿತ ಎಷ್ಟೊಂದು ಕುಸಿದಿದೆ ಎಂಬುದು ತೋರಿಸುತ್ತದೆ.ಕೂಡಲೇ ಕ್ರಮಕೈಗೊಳ್ಳಬೇಕೆಂದು ಸದಸ್ಯೆ ಸಾಬೇರಾಬೇಗಂ,ಡಾ.ಅಹ್ಮದ್ ಪಟೇಲ್, ನಾಗರಾಜ ಕರಣಿಕ್, ಸೂರ್ಯಕಾಂತ ಕೋಬಾಳ ಆಗ್ರಹಿಸಿದರು.

ಈ ಹಿಂದೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ರೈತರಿಂದ ಪಡೆದುಕೊಂಡ ಸುಮಾರು ೧೭ ಎಕರೆ ಭೂಮಿಯ ಅಂದು ಹಣ ಪಾವತಿಸಲಾಗಿತ್ತು.ರೈತರು ನ್ಯಾಯಾಲಯದ ಮೊರೆ ಹೋಗಿ ಹೆಚ್ಚಿನ ಹಣ ನೀಡುವಂತೆ ಮನವಿ ಸಲ್ಲಿಸಿದ್ದರು.ಅದರಂತೆ ಅವರಿಗೆ ಬಾಕಿ ೭೯ ಲಕ್ಷ ರೂ. ನೀಡಬೇಕಾಗಿದೆ.ಅದಕ್ಕೆ ಎಸ್‌ಡಬ್ಲೂಎಮ್ ೭೭ ಲಕ್ಷ ಅನುದಾನವನ್ನು ಬಳಸಿಕೊಳ್ಳಲು ಅನುಮತಿ ನೀಡಲು ತಮ್ಮ ಅಭಿಪ್ರಾಯ ಸಲ್ಲಿಸಿಬೇಕೆಂದು ಎಇಇ ಶರಣು ಪೂಜಾರಿ ಸರ್ವ ಸದಸ್ಯರು ತಿಳಿಸಿದರು.ಅದಕ್ಕೆ ಸದಸ್ಯ ರವಿ ರಾಠೋಡ ಈಗ ಬೇಡ ಮುಂದೆ ನೋಡೋಣ ಎಂದರು.ಅಲ್ಲದೇ ಉಳಿದ ಸದಸ್ಯರು ಯಾವುದೇ ಹಣ ನೀಡುವುದು ಬೇಡ ಎಂದು ಒಕ್ಕೋರಲದಿಂದ ಹೇಳಿದರು.

ವಾರ್ಡ ನಂ. ೧೨ ಮತ್ತು ೧೩ ರ ಹೊಂದಿಕೊಂಡಿರುವ ರಸ್ತೆಗೆ ಸಂಪರ್ಕ ರಸ್ತೆ ನಿರ್ಮಾಣ ಅತಿ ಅವಶ್ಯಕತೆಯಿದೆ.ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.ಇದಕ್ಕೆ ಇಲ್ಲಿನ ಜೆಇಗಳು ಸ್ಪಂದಿಸುತ್ತಿಲ್ಲ ಎಂದು ರವಿ ರಾಠೋಡ ಹೇಳಿದರು.ಅದಕ್ಕೆ ನಗರಸಭೆಯ ಅಧ್ಯಕ್ಷೆ ಅಂಜಲಿ ಕಂಬಾನೂರ ಅವರು ಜೆಇ ಅವರೇ ತಾವು ಸರಿಯಾಗಿ ಕೆಲಸ ಮಾಡದ ಕಾರಣ ಸಭೆಯಲ್ಲಿ ಗಲಾಟೆ ನಡೆಯುತ್ತಿದೆ.ಇದಕ್ಕೆ ತಾವೇ ಕಾರಣ.ಇನ್ನು ಮುಂದೆ ದೂರು ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮದು.ಒಂದು ಇದೇರೀತಿ ಮುಂದುವರೆದರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯ ರಜನಿಕಾಂತ ಕಂಬಾನೂರ ವಾರ್ಡ ನಂ.೧೩ ರಲ್ಲಿ ರಸ್ತೆ ಕಾಮಗಾರಿ ಬೇಗನೆ ಮುಗಿಸಬೇಕು.

ಯಾರೇ ಏನೆ ಹೇಳಲಿ ಕ್ರೀಯಾಯೋಜನೆ ಪ್ರಕಾರ ಕಾಮಗಾರಿ ಕೈಗೊಳ್ಳಿ ಎಂದರು.ಅಲ್ಲದೇ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸರಿಯಾದ ಸಮಯಕ್ಕೆ ಬರುತ್ತಿಲ್ಲ.ಅದಕ್ಕಾಗಿ ಬಯೋಮೆಟ್ರಿಕ್ ಹಾಜರಾತಿ ಅಳವಡಿಸಬೇಕೆಂದು ಒತ್ತಾಯಿಸಿದರು.ಬೇರೆ ಕಡೆ ಅಳವಡಿಸಿದ ಬಯೋಮೆಟ್ರಿಕ್ ಹಾಳಾಗುವುದಿಲ್ಲ.ಆದರೆ ನಗರಸಭೆಯ ಬಯೋಮೆಟ್ರಿಕ್ ಮಾತ್ರ ಹಾಳಾಗಿದೆ ಎಂದು ಹೇಳುವುದು ಹಾಸ್ಯಸ್ಪದವಾಗಿದೆ. ಆದ್ದರಿಂದ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಪ್ರಭಾರಿ ಪೌರಾಯುಕ್ತರಾದ ಬಸವರಾಜ ಅವರನ್ನು ಸದಸ್ಯ ಶ್ರವಣಕುಮಾರ ಒತ್ತಾಯಿಸಿದರು.

ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿಲೆಇಇ ಶರಣು ಪೂಜಾರಿ,ಎಇಇ ಮುಜಾಮಿಲ್ ಅಲಂ, ಕಚೇರಿ ವ್ಯವಸ್ಥಾಪಕ ಶರಣಗೌಡ ಪಾಟೀಲ, ಎಇ ಶಾಂತರೆಡ್ಡಿ ದಂಡಗುಲಕರ್ ಜೆಇ ಮೌಲಾ ಅಲಿ, ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ, ಆರೋಗ್ಯ ನೀರಿಕ್ಷಕ ಶಿವರಾಜಕುಮಾರ, ನಗರಸಭೆಯ ಸರ್ವ ಸದಸ್ಯರು ಮತ್ತು ಸಿಬ್ಬಂದಿಗಳು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago