ಲಿಂಗಸೂಗೂರ: ಬಾಬಾ ಸಾಹೇಬ ಡಾ.ಅಂಬೇಡ್ಕರ್ ಅವರು ಸಾಯುವ ಕೊನೆಗಳಿಗೆಯಲ್ಲಿಯೂ ಸಹ ಈ ದೇಶದ ಜನರ ಬದುಕಿನ ಬಗ್ಗೆ ಚಿಂತಿಸಿದ ಮಹಾನ್ ದೇಶಪ್ರೇಮಿಯಾಗಿದ್ದಾರೆ ಎಂದು ಉಪನ್ಯಾಸಕ ನಿಜಲಿಂಗ ದೊಡ್ಮನಿ ಅಭಿಪ್ರಾಯಪಟ್ಟರು.
ಛಲವಾದಿ ಯುವ ಬ್ರಿಗೇಡ್ ತಾಲ್ಲೂಕ ಸಮಿತಿ ವತಿಯಿಂದ ಪಟ್ಟಣದ ಸಾಂಸ್ರ್ಕತಿಕ ಭವನದಲ್ಲಿ ರವಿವಾರ ಏರ್ಪಡಿಸಿದ್ದ ಸಂವಿಧಾನ ಸಂರಕ್ಷಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಶೋಷಿತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಭನೆಯಾಗಬೇಕು.ದೇಶವನ್ನು ಯಾವುದೇ ಧರ್ಮˌ ಜಾತಿಗೆ ಸೀಮಿತ ಮಾಡದ ಸಂವಿಧಾನ ತಜ್ಞ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಎಲ್ಲ ಧರ್ಮದ ಜನರ ಸ್ವತ್ತಾಗಿ ಮಾಡಿದ್ದಾರೆ. ದೇಶದ ಎಲ್ಲ ವರ್ಗದ ಜನರಿಗೆ ಅಧಿಕಾರವನ್ನು ಹಂಚಿಕೊಟ್ಟಿದ್ದಾರೆ. ಆಯಾ ವರ್ಗದ ಜನಸಂಖ್ಯೆಗನುಗುಣವಾಗಿ ಸೌಲಭ್ಯ ನೀಡಿದ್ದಾರೆ. ದೇಶದ ಬಗ್ಗೆ ಮುಂದಾಲೋಚನೆ ಹೊಂದಿದ್ದ ಬಾಬಾ ಸಾಹೇಬರು ಹಲವು ಯೋಜನೆಗಳನ್ನು ದೇಶದ ಜನರಿಗೆ ನೀಡಿದ್ದಾರೆ. ಡಾ.ಅಂಬೇಡ್ಕರ್ ಅವರು ಸಾಯುವ ಕೊನೆಗಳಿಗೆಯಲ್ಲಿಯೂ ಸಹ ಈ ದೇಶದ ಜನರ ಬದುಕಿನ ಬಗ್ಗೆ ಚಿಂತಿಸಿದ್ದಾರೆ ಎಂದರು.
ಈ ವೇಳೆ ಶಾಸಕ ಡಿ.ಎಸ್ ಹೂಲಗೇರಿˌ ಛಲವಾದಿ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಕೆ ಕುಮಾರˌ ತಾಲೂಕಾಧ್ಯಕ್ಷ ರೇವಣಸಿದ್ದಪ್ಪ ಗೌಡೂರ ಮುಖಂಡರಾದ ಭೂಪನಗೌಡ ಪಾಟೀಲˌ ಶ್ರೀನಿವಾಸ ಅಮ್ಮಾಪುರˌ ಶರಣಬಸವ ಭಟ್ಟರˌ ಹೆಚ್.ಬಿ ಮುರಾರಿˌ ಹುಚ್ಚೇಶ ಕವಿತಾಳˌ ಪಂಪಾಪತಿ ಪರಂಗಿˌ ಯಲ್ಲಪ್ಪ ವಂದಲಿˌ ಅಮರೇಶ ಕುಪ್ಪಿಗುಡ್ಡˌ ಬಸವರಾಜ ಬಸ್ಸಾಪುರˌ ಜಮದಗ್ನಿ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…