ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಹೀಗೆ ಬರೆದುಕೊಂಡಿದ್ದಾರೆ.
ಜನ ಸಾಮಾನ್ಯರ ಜೀವನವನ್ನು ಹಾಳುಗೆಡವಿದೆ. ಈಗ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಕೇಸರಿಕರಣಗೊಳಿಸುವ ಮೂಲಕ ನಾಡಿನ ಮಕ್ಕಳ ಭವಿಷ್ಯವನ್ನೂ ಈ ಸರ್ಕಾರ ಮಣ್ಣು ಮಾಡಲು ಹೊರಟಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿರುವಂತೆ, ಇತಿಹಾಸವನ್ನು ಅರಿಯದವರಿಂದ ಇತಿಹಾಸವನ್ನು ರಚಿಸಲಾಗುವುದಿಲ್ಲ.
ಬರೆದುಕೊಂಡಿರುವ ಶಾಸಕ ಇಂದು ಈ ನಾಡಿನ ಇತಿಹಾಸವನ್ನೇ ತಿರುಚಿ, ತಾಯಿನಾಡನ್ನೇ ಬ್ರಿಟೀಷರಿಗೆ ಮಾರಲು ಹೊರಟಿದ್ದ ಹೇಡಿಗಳನ್ನು, ವೀರರಂತೆ ಬಿಂಬಿಸಲು ಮುಂದಾಗಿರುವುದು ಈ ದೇಶದಕ್ಕಾಗಿ ಪ್ರಾಣತೆತ್ತ ನಿಜವಾದ ದೇಶಭಕ್ತರಿಗೆ ಮಾಡಿರುವ ಘೋರ ಅಪಮಾನ.
– ಅವರು ಹೊಸದಾಗಿ ಸೇರಿಸಿದ ಪಠ್ಯಗಳ ಲೇಖಕರಲ್ಲಿ 10 ಜನರಲ್ಲಿ 9 ಜನ ಒಂದೇ ಜಾತಿಗೆ ಸೀಮಿತರಾದವರಾಗಿದ್ದಾರೆ. ಆದರೆ ಹಿಂದಿನ ಪುಸ್ತಕದಿಂದ ಕತ್ತರಿ ಹಾಕಿರುವ ಪಠ್ಯಗಳ ಲೇಖಕರಲ್ಲಿ ಎಲ್ಲರೂ ಹಿಂದುಳಿದ, ಪರಿಶಿಷ್ಟ ಜಾತಿಯ ಹಾಗೂ ಇತರ ಸಮುದಾಯಗಳಿಗೆ ಸೇರಿದ್ದವರದ್ದಾಗಿದೆ.
ಸರ್ವ ಸಮುದಾಯಗಳ ನಾಡು ಸೃಷ್ಟಿಸಬೇಕಿದ್ದ, ಸರ್ವ ಸಮಾಜಗಳಿಗೆ ಸಮಾನ ಮನೋಭಾವ ಮೂಡಿಸಬೇಕಿದ್ದ, ಪಠ್ಯಪುಸ್ತಕಗಳನ್ನ ಇನ್ನು ಮುಂದೆ ಏಕ ಜಾತಿ ವಿಚಾರಗಳನ್ನು ಮಾತ್ರ ಹೇಳಲು ಉಪಯೋಗಿಸಲಾಗುವುದು. ಬಹು ಸಂಸ್ಕೃತಿಯ ಈ ಕನ್ನಡ ನಾಡಿನಲ್ಲಿ ಇನ್ಮುಂದೆ ಏಕ ಜಾತಿ ಪ್ರಭಾವದ ಮನುವಾದದ ಬೇರೆನ್ನು ನೆಡಲು BJP ಈ ಪಠ್ಯದ ಮೂಲಕ ಪ್ರಯತ್ನಿಸುತ್ತಿದೆ.
ಸಾರಾ ಅಬೂಬಕರ್, ಕೆ ಲೀಲಾ, ಬಿ ಟಿ ಲಲಿತಾ ನಾಯ್ಕ್ ಅವರ ಚೇತೋಹಾರಿ ಲೇಖನಗಳನ್ನ ಕೈಬಿಟ್ಟು, ಹೆಣ್ಣೊಬ್ಬಳನ್ನು ಹಣದ ರಾಶಿಗೆ ಹೋಲಿಸುವ RSS ಪ್ರೇಮಿಯ ಲೇಖನವನ್ನ ಸೇರಿಸಲಾಗಿದೆ. ಮನುವಾದದ ಸ್ತ್ರೀ ವಿರೋಧಿ ನೀತಿಗಳನ್ನ 21ನೇ ಶತಮಾನದಲ್ಲಿ, ನಮ್ಮ ಮಕ್ಕಳಿಗೆ ಕಲಿಸುವ ನೀಚ ಸ್ಥಿತಿಗೆ ನಾವು ಬಂದಿದ್ದೀವಾ? ಜಾತಿ ಶೋಷಣೆ ವಿರುದ್ದ ಹೋರಾಡಿದವರನ್ನ ಬದಿಗೆ ಸರಿಸುತ್ತಾ, ಮನುವಾದ ಸಾರಿದವರನ್ನ ಮುನ್ನೆಲೆಗೆ ತರಲಾಗುತ್ತಿದೆ. ಇವೆಲ್ಲವನ್ನು BJP ನಾಯಕರ ಮಕ್ಕಳು ಎಂದಿಗೂ ಕಲಿಯುವುದಿಲ್ಲ. ಇವರ ಮಕ್ಕಳೆಲ್ಲರೂ ಓದುವುದು ವಿದೇಶದಲ್ಲಿ. ಆದರೆ ಇಲ್ಲಿ ಓದಲಿರುವ ನಮ್ಮ ಮಕ್ಕಳಿಗೆ ತಿರುಚಿದ ಇತಿಹಾಸ ಕಲಿಸಿ ಅವರ ಭವಿಷ್ಯವನ್ನು ಮಣ್ಣು ಮಾಡಲು BJP ಹೊರಟಿದೆ.
ಇವರು ಹೇಳೋದು ಸಬ್ ಕ ಸಾಥ್, ಸಬ್ ಕ ವಿಕಾಸ್ ಇವರು ಮಾಡೋದು ಮನುವಾದ್ ಕ ಸಾಥ್, ಮನುವಾದ್ ಕ ವಿಕಾಸ್, ಸಬ್ ಕ ಸರ್ವನಾಶ್ ಬುದ್ಧ-ಬಸವ-ಅಂಬೇಡ್ಕರ್ ರ ಪ್ರಗತಿಪರ ಚಿಂತನೆಗಳಿಂದ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯ. ಪ್ರಬುದ್ಧಸಮಾಜದಿಂದ ಮಾತ್ರವೇ ಪ್ರಗತಿ ಹೊಂದಲು ಸಾಧ್ಯ. ಮಕ್ಕಳ ಇಂದಿನ ಅವಶ್ಯಕತೆ ಪ್ರಬುದ್ಧತೆಯೇ ಹೊರತು ಮನುವಾದವಲ್ಲಾ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…