ತರಾಟಗೆ ತೆಗೆದುಕೊಂಡ ಶಾಸಕ ಪ್ರಿಯಾಂಕ್ ಖರ್ಗೆ

0
45

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಹೀಗೆ ಬರೆದುಕೊಂಡಿದ್ದಾರೆ.

  • ಈ 40% ಬಿಜೆಪಿ ಸರ್ಕಾರದ
  • – ಅಪರಿಮಿತ ಭ್ರಷ್ಟಾಚಾರ 
  • – ಪ್ರಾಯೋಜಿತ ಕೋಮುದಳ್ಳುರಿ
  • – ಹಂಗಿಲ್ಲದ ಬೆಲೆಯೇರಿಕೆಗಳು

ಜನ ಸಾಮಾನ್ಯರ ಜೀವನವನ್ನು ಹಾಳುಗೆಡವಿದೆ. ಈಗ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಕೇಸರಿಕರಣಗೊಳಿಸುವ ಮೂಲಕ ನಾಡಿನ ಮಕ್ಕಳ ಭವಿಷ್ಯವನ್ನೂ ಈ ಸರ್ಕಾರ ಮಣ್ಣು ಮಾಡಲು ಹೊರಟಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿರುವಂತೆ, ಇತಿಹಾಸವನ್ನು ಅರಿಯದವರಿಂದ ಇತಿಹಾಸವನ್ನು ರಚಿಸಲಾಗುವುದಿಲ್ಲ.

Contact Your\'s Advertisement; 9902492681

ಬರೆದುಕೊಂಡಿರುವ ಶಾಸಕ ಇಂದು ಈ ನಾಡಿನ ಇತಿಹಾಸವನ್ನೇ ತಿರುಚಿ, ತಾಯಿನಾಡನ್ನೇ ಬ್ರಿಟೀಷರಿಗೆ ಮಾರಲು ಹೊರಟಿದ್ದ ಹೇಡಿಗಳನ್ನು, ವೀರರಂತೆ ಬಿಂಬಿಸಲು ಮುಂದಾಗಿರುವುದು ಈ ದೇಶದಕ್ಕಾಗಿ ಪ್ರಾಣತೆತ್ತ ನಿಜವಾದ ದೇಶಭಕ್ತರಿಗೆ ಮಾಡಿರುವ ಘೋರ ಅಪಮಾನ.

  • IT ಸೆಲ್ ನ ₹2 ಟ್ರೋಲ್ ಗಳು ಇಂದು ಪಠ್ಯಪುಸ್ತಕ ಪರಿಷ್ಕರಣೆ ಸೂತ್ರಧಾರಿಗಳು
  •  – ಜಾತಿ ಅಸಮಾನತೆಗಳನ್ನು ಎತ್ತಿ ತೋರಿಸಿದ ಲೇಖಕರು
  • – ಕೋಮು ಸೌಹಾರ್ದತೆಯನ್ನು ಸರಿದ ಕವಿಗಳು
  • – ಬಡ ಜನರ ಗ್ರಾಮೀಣ ಜಾನಪದ ನುಡಿಗಳು
  • ಇಂದು ಬೇಕಾಗಿಲ್ಲ. ಆದರೆ ಬಾಯಿ ಬಿಟ್ಟರೆ ಸುಳ್ಳು ಹೇಳುವ ಬಾಡಿಗೆ ಭಾಷಣಕಾರರ ಲೇಖನಗಳು ಇಂದು ಪಠ್ಯ ಪುಸ್ತಕದ ಭಾಗವಾಗಿದೆ.
  • > ದೇಶಕ್ಕಾಗಿ ಪ್ರಾಣತೆತ್ತ ಭಗತ್ ಸಿಂಗ್,
  • > 3 ಬಾರಿ ಬ್ರಿಟೀಷರ ವಿರುದ್ಧ ಯುದ್ಧ ಮಾಡಿದ ಟಿಪ್ಪು,
  • ಬದಲಿಗೆ
  • > ದೇಶದ ತಿರಂಗ ಧ್ವಜ ಬದಲು RSS ನ ಭಾಗ್ವ ಧ್ವಜಕ್ಕೆ ಮಂಡಿಯೂರಬೇಕು,
  • > ಬ್ರಿಟಿಷರ ಜೊತೆ RSS ಕಾರ್ಯಕರ್ತರು ಕೈ ಸೇರಿಸಬೇಕು
  • > ಸಂವಿಧಾನದದ ಬದಲು ಮನುಸ್ಮೃತಿ ಜಾರಿಯಾಗಲಿ
  • ಎಂದ RSS ಸಂಸ್ಥಾಪಕರಿಂದ ಮಕ್ಕಳು ಕಲಿಯಬೇಕಿರೋದು ಏನು?
  • – ಈ ಪಠ್ಯ ಪುಸ್ತಕ ಸಮಿತಿಯಲ್ಲಿದ್ದ 8 ಜನರಲ್ಲಿ 7 ಜನ,

– ಅವರು ಹೊಸದಾಗಿ ಸೇರಿಸಿದ ಪಠ್ಯಗಳ ಲೇಖಕರಲ್ಲಿ 10 ಜನರಲ್ಲಿ 9 ಜನ ಒಂದೇ ಜಾತಿಗೆ ಸೀಮಿತರಾದವರಾಗಿದ್ದಾರೆ. ಆದರೆ ಹಿಂದಿನ ಪುಸ್ತಕದಿಂದ ಕತ್ತರಿ ಹಾಕಿರುವ ಪಠ್ಯಗಳ ಲೇಖಕರಲ್ಲಿ ಎಲ್ಲರೂ  ಹಿಂದುಳಿದ, ಪರಿಶಿಷ್ಟ ಜಾತಿಯ ಹಾಗೂ ಇತರ ಸಮುದಾಯಗಳಿಗೆ ಸೇರಿದ್ದವರದ್ದಾಗಿದೆ.

ಸರ್ವ ಸಮುದಾಯಗಳ ನಾಡು ಸೃಷ್ಟಿಸಬೇಕಿದ್ದ, ಸರ್ವ ಸಮಾಜಗಳಿಗೆ ಸಮಾನ ಮನೋಭಾವ ಮೂಡಿಸಬೇಕಿದ್ದ, ಪಠ್ಯಪುಸ್ತಕಗಳನ್ನ ಇನ್ನು ಮುಂದೆ ಏಕ ಜಾತಿ ವಿಚಾರಗಳನ್ನು ಮಾತ್ರ ಹೇಳಲು ಉಪಯೋಗಿಸಲಾಗುವುದು. ಬಹು ಸಂಸ್ಕೃತಿಯ ಈ ಕನ್ನಡ ನಾಡಿನಲ್ಲಿ ಇನ್ಮುಂದೆ ಏಕ ಜಾತಿ ಪ್ರಭಾವದ ಮನುವಾದದ ಬೇರೆನ್ನು ನೆಡಲು BJP ಈ ಪಠ್ಯದ ಮೂಲಕ ಪ್ರಯತ್ನಿಸುತ್ತಿದೆ.

ಸಾರಾ ಅಬೂಬಕರ್, ಕೆ ಲೀಲಾ, ಬಿ ಟಿ ಲಲಿತಾ ನಾಯ್ಕ್ ಅವರ ಚೇತೋಹಾರಿ ಲೇಖನಗಳನ್ನ ಕೈಬಿಟ್ಟು, ಹೆಣ್ಣೊಬ್ಬಳನ್ನು ಹಣದ ರಾಶಿಗೆ ಹೋಲಿಸುವ RSS ಪ್ರೇಮಿಯ ಲೇಖನವನ್ನ ಸೇರಿಸಲಾಗಿದೆ. ಮನುವಾದದ ಸ್ತ್ರೀ ವಿರೋಧಿ ನೀತಿಗಳನ್ನ 21ನೇ ಶತಮಾನದಲ್ಲಿ, ನಮ್ಮ ಮಕ್ಕಳಿಗೆ ಕಲಿಸುವ ನೀಚ ಸ್ಥಿತಿಗೆ ನಾವು ಬಂದಿದ್ದೀವಾ? ಜಾತಿ ಶೋಷಣೆ ವಿರುದ್ದ ಹೋರಾಡಿದವರನ್ನ ಬದಿಗೆ ಸರಿಸುತ್ತಾ, ಮನುವಾದ ಸಾರಿದವರನ್ನ ಮುನ್ನೆಲೆಗೆ ತರಲಾಗುತ್ತಿದೆ. ಇವೆಲ್ಲವನ್ನು BJP ನಾಯಕರ ಮಕ್ಕಳು ಎಂದಿಗೂ ಕಲಿಯುವುದಿಲ್ಲ. ಇವರ ಮಕ್ಕಳೆಲ್ಲರೂ ಓದುವುದು ವಿದೇಶದಲ್ಲಿ. ಆದರೆ ಇಲ್ಲಿ ಓದಲಿರುವ ನಮ್ಮ ಮಕ್ಕಳಿಗೆ ತಿರುಚಿದ ಇತಿಹಾಸ ಕಲಿಸಿ ಅವರ ಭವಿಷ್ಯವನ್ನು ಮಣ್ಣು ಮಾಡಲು BJP ಹೊರಟಿದೆ.

ಇವರು ಹೇಳೋದು ಸಬ್ ಕ ಸಾಥ್, ಸಬ್ ಕ ವಿಕಾಸ್ ಇವರು ಮಾಡೋದು ಮನುವಾದ್ ಕ ಸಾಥ್, ಮನುವಾದ್ ಕ ವಿಕಾಸ್, ಸಬ್ ಕ ಸರ್ವನಾಶ್ ಬುದ್ಧ-ಬಸವ-ಅಂಬೇಡ್ಕರ್ ರ ಪ್ರಗತಿಪರ ಚಿಂತನೆಗಳಿಂದ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯ. ಪ್ರಬುದ್ಧಸಮಾಜದಿಂದ ಮಾತ್ರವೇ ಪ್ರಗತಿ ಹೊಂದಲು ಸಾಧ್ಯ. ಮಕ್ಕಳ ಇಂದಿನ ಅವಶ್ಯಕತೆ ಪ್ರಬುದ್ಧತೆಯೇ ಹೊರತು ಮನುವಾದವಲ್ಲಾ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here