ಬಿಸಿ ಬಿಸಿ ಸುದ್ದಿ

ಯುವಜನರು ಜೀವನದ ಸವಾಲುಗಳನ್ನು ಸಮಾಧಾನದಿಂದ ಎದುರಿಸಬೇಕು: ಡಾ. ಚಂದ್ರಶೆಖರ

ಕಲಬುರಗಿ: ಯುವಜನರು ಜೀವಲದಲ್ಲಿ ಎದುರಾಗುವ ಸವಾಲುಗಳ ಮತ್ತು ಸಮಸ್ಯಗಳನ್ನು ತುಂಬಾ ಸಮಚಿತ್ತದಿಂದ ಎದುರಿಸುವದನ್ನು ಕಲಿತುಕೊಳ್ಳಬೇಕು. ಅವರು ಸಿಟ್ಟು, ಭಯ, ದು:ಖದ ಭಾವನೆಗಳಿಗೆ ಒಳಗಾಗದೆ ಸಮಾಧಾನ, ದೈರ್ಯ ಆತ್ಮ ವಿಶ್ವಾಸ ಮತ್ತು ಸಾರಾಸಾರ ಆಲೋಚನೆಮಾಡಿ ಹೂಂದಾಣಿಕೆ ಮಾಡಿಕೋಳ್ಳಬೇಕು ಹಣವನ್ನು ವ್ಯಥಾ ಖರ್ಚು ಮಾಡಬಾರದು. ಸಾಲಮಾಡಿ ಅದರ ಸುಳಿಯಲ್ಲಿ ಸಿಕ್ಕಿಕೊಳ್ಳದೆ ಮಿತವೈಯದಿಂದ ಸರಳ ಜೀವನವನ್ನು ಅಳವಡಿಸಿಕೊಂಡು ಸಂತೋಷದಿಂದ ಬದುಕಬೇಕು ಎಂದು ಪ್ರಖ್ಯಾತ ಮನೋವೈದ್ಯರಾದ ಡಾ.ಸಿ.ಆರ್. ಚಂದ್ರಶೆಖರ ತಿಳಿಸಿದರು.

ಅವರು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೆಶಿಸಿ ಕಲಿಕೆ ಮತ್ತು ಮಾನಸಿಕ ಆರೋಗ್ಯ ಸಮಸ್ಯಗಳು ಎಂಬ ವಿಷಯವನ್ನು ಕುರಿತು ಮಾತನಾಡುತ್ತ ತಿಳಿಸಿದರು. ಯುವಜನರು ಕಲಿಕೆಯಲ್ಲಿ ಪೂರ್ಣ ಏಕಾಗ್ರತೆಯಿಂದ ತೊಡಗಿಕೊಳ್ಳಬೇಕು ವಿದ್ಯಾರ್ಥಿಗಳು ಬಂದು ಪಾಠವನ್ನು ಓದುವಾಗ ಅಥವಾ ಉಪನ್ಯಾಸವನ್ನು ಆಲಿಸುವಾಗ ಸಂಪೂರ್ಣ ಅರ್ಥಗ್ರಹಿಕೆಯನ್ನು ಪಡೆಯಬೇಕು. ಎಕೆಂದರೆ ಪಾಠವೂ ಅರ್ಥವಾದಾಗ ಮಾತ್ರ ಮೇದುಳಿನಲ್ಲಿ ಸಂಗ್ರಹವಾಗಲು ಸಾದ್ಯವಿದೆ.ಓದಿದ ಪಾಠ ಅರ್ಥವಾದಾಗ ಮಾತ್ರ ಆಸಕ್ತಿ ಎಕಾಗ್ರತೆ ಸ್ಮೆರಣೆ ಹೆಚ್ಚಾಗುತ್ತವೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ಕಂಡುಬರುವ ಖಿನ್ನತೆ, ಭಯ, ಆತಂಕ ಇತ್ಯಾದಿ ಮಾನಸಿಕ ಕಾಯಲೆಗಳ ಕುರಿತು ವಿರಳವಾಗಿ ಮತ್ತು ಸ್ವಾರಸ್ಯಕರವಾಗಿ ವಿವರಿಸಿದರು.ಆಪ್ತಸಲಹೆ ಪಡೆದುಕೊಂಡರೆ ವಿದ್ಯಾರ್ಥಿಗಳ ಈ ಎಲ್ಲಾ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಪ್ರೊ.ಎಮ್. ಎಸ್. ಪಾಟಿಲ್ ವಿದ್ಯಾರ್ಥಿ ಅಕಾಡೆಮಿಯ ಸಲಹೆಗಾರರು ಸ್ವಾಗತಿಸಿದರು ಪ್ರೊ. ಶರಣಮ್ಮ ವಾರದ ಅವರು ಮುಖ್ಯ ಅತಿಥಿಗಳ ಪರಿಚಯ ಮಾಡಿಸಿದರು. ಪ್ರೊ.ಜಗದೇವಿ ಕಲಶೆಟ್ಟಿಯವರು ನಿರೂಪಿಸಿದರು, ಡಾ ಸುರೇಶಕುಮಾರ ಉಪಸ್ಥಿತರಿದ್ದರು ಡಾ. ಡಿ.ಟಿ.ಅಂಗಡಿ ಪ್ರಾಂಶುಪಾಲರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಇಂತಹ ಮಹಾನ್ ಮಾನಸಿಕ ತಜ್ಞರ ಮಾತುಗಳನ್ನು ಕೇಳಿ, ತಿಳಿದುಕೊಂಡು ಅನ್ವಯಿಸಿದರೆ ವಿದ್ಯಾರ್ಥಿಗಳು ಸರಳವಾಗಿ ಕಲಿಯಲು ಮತ್ತು ಹೆಚ್ಚು ಅಂಕಗಳಿಸಿ ಪರೀಕ್ಷೆಗಳಲ್ಲಿ ಪಾಸಾಗಲು ಸಾಧ್ಯವಿದೆ ಎಂದು ಹೇಳಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago