ಕಲಬುರಗಿ: ಯುವಜನರು ಜೀವಲದಲ್ಲಿ ಎದುರಾಗುವ ಸವಾಲುಗಳ ಮತ್ತು ಸಮಸ್ಯಗಳನ್ನು ತುಂಬಾ ಸಮಚಿತ್ತದಿಂದ ಎದುರಿಸುವದನ್ನು ಕಲಿತುಕೊಳ್ಳಬೇಕು. ಅವರು ಸಿಟ್ಟು, ಭಯ, ದು:ಖದ ಭಾವನೆಗಳಿಗೆ ಒಳಗಾಗದೆ ಸಮಾಧಾನ, ದೈರ್ಯ ಆತ್ಮ ವಿಶ್ವಾಸ ಮತ್ತು ಸಾರಾಸಾರ ಆಲೋಚನೆಮಾಡಿ ಹೂಂದಾಣಿಕೆ ಮಾಡಿಕೋಳ್ಳಬೇಕು ಹಣವನ್ನು ವ್ಯಥಾ ಖರ್ಚು ಮಾಡಬಾರದು. ಸಾಲಮಾಡಿ ಅದರ ಸುಳಿಯಲ್ಲಿ ಸಿಕ್ಕಿಕೊಳ್ಳದೆ ಮಿತವೈಯದಿಂದ ಸರಳ ಜೀವನವನ್ನು ಅಳವಡಿಸಿಕೊಂಡು ಸಂತೋಷದಿಂದ ಬದುಕಬೇಕು ಎಂದು ಪ್ರಖ್ಯಾತ ಮನೋವೈದ್ಯರಾದ ಡಾ.ಸಿ.ಆರ್. ಚಂದ್ರಶೆಖರ ತಿಳಿಸಿದರು.
ಅವರು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೆಶಿಸಿ ಕಲಿಕೆ ಮತ್ತು ಮಾನಸಿಕ ಆರೋಗ್ಯ ಸಮಸ್ಯಗಳು ಎಂಬ ವಿಷಯವನ್ನು ಕುರಿತು ಮಾತನಾಡುತ್ತ ತಿಳಿಸಿದರು. ಯುವಜನರು ಕಲಿಕೆಯಲ್ಲಿ ಪೂರ್ಣ ಏಕಾಗ್ರತೆಯಿಂದ ತೊಡಗಿಕೊಳ್ಳಬೇಕು ವಿದ್ಯಾರ್ಥಿಗಳು ಬಂದು ಪಾಠವನ್ನು ಓದುವಾಗ ಅಥವಾ ಉಪನ್ಯಾಸವನ್ನು ಆಲಿಸುವಾಗ ಸಂಪೂರ್ಣ ಅರ್ಥಗ್ರಹಿಕೆಯನ್ನು ಪಡೆಯಬೇಕು. ಎಕೆಂದರೆ ಪಾಠವೂ ಅರ್ಥವಾದಾಗ ಮಾತ್ರ ಮೇದುಳಿನಲ್ಲಿ ಸಂಗ್ರಹವಾಗಲು ಸಾದ್ಯವಿದೆ.ಓದಿದ ಪಾಠ ಅರ್ಥವಾದಾಗ ಮಾತ್ರ ಆಸಕ್ತಿ ಎಕಾಗ್ರತೆ ಸ್ಮೆರಣೆ ಹೆಚ್ಚಾಗುತ್ತವೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ಕಂಡುಬರುವ ಖಿನ್ನತೆ, ಭಯ, ಆತಂಕ ಇತ್ಯಾದಿ ಮಾನಸಿಕ ಕಾಯಲೆಗಳ ಕುರಿತು ವಿರಳವಾಗಿ ಮತ್ತು ಸ್ವಾರಸ್ಯಕರವಾಗಿ ವಿವರಿಸಿದರು.ಆಪ್ತಸಲಹೆ ಪಡೆದುಕೊಂಡರೆ ವಿದ್ಯಾರ್ಥಿಗಳ ಈ ಎಲ್ಲಾ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಪ್ರೊ.ಎಮ್. ಎಸ್. ಪಾಟಿಲ್ ವಿದ್ಯಾರ್ಥಿ ಅಕಾಡೆಮಿಯ ಸಲಹೆಗಾರರು ಸ್ವಾಗತಿಸಿದರು ಪ್ರೊ. ಶರಣಮ್ಮ ವಾರದ ಅವರು ಮುಖ್ಯ ಅತಿಥಿಗಳ ಪರಿಚಯ ಮಾಡಿಸಿದರು. ಪ್ರೊ.ಜಗದೇವಿ ಕಲಶೆಟ್ಟಿಯವರು ನಿರೂಪಿಸಿದರು, ಡಾ ಸುರೇಶಕುಮಾರ ಉಪಸ್ಥಿತರಿದ್ದರು ಡಾ. ಡಿ.ಟಿ.ಅಂಗಡಿ ಪ್ರಾಂಶುಪಾಲರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಇಂತಹ ಮಹಾನ್ ಮಾನಸಿಕ ತಜ್ಞರ ಮಾತುಗಳನ್ನು ಕೇಳಿ, ತಿಳಿದುಕೊಂಡು ಅನ್ವಯಿಸಿದರೆ ವಿದ್ಯಾರ್ಥಿಗಳು ಸರಳವಾಗಿ ಕಲಿಯಲು ಮತ್ತು ಹೆಚ್ಚು ಅಂಕಗಳಿಸಿ ಪರೀಕ್ಷೆಗಳಲ್ಲಿ ಪಾಸಾಗಲು ಸಾಧ್ಯವಿದೆ ಎಂದು ಹೇಳಿದರು.