ಕಲಬುರಗಿ: ಕಲಬುರಗಿಯ ರಂಗ ಸಂಗಮ ಕಲಾ ವೇದಿಕೆ ಸಂಸ್ಥೆಯು ಕಳೆದ ೮ ವರ್ಷಗಳಿಂದ ದಿ.ಜಂಗಮಶೆಟ್ಟಿಯವರ ಸ್ಮರಣಾರ್ಥ ರಂಗಭೂಮಿಯಲ್ಲಿ ಸಾಧನೆ ಮಾಡಿದವರಿಗಾಗಿ ರಾಜ್ಯ ಮಟ್ಟದ ಜಂಗಮಶೆಟ್ಟಿ ಪ್ರಶಸ್ತಿ ಯನ್ನು ಪ್ರತಿ ವರ್ಷ ಜುಲೈ ೧೮ ರಂದು ಕೊಡಮಾಡಲಾಗುತ್ತದೆ ಎಂದು ವೇದಿಕೆ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ಈ ಕೆಳಕಂಡ ರಂಗ ಸಾಧಕರಿಗೆ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗಿದೆ.
೧)ಬಸವರಾಜಯ್ಯಾಸ್ವಾಮಿ ಭೀಮನಹಳ್ಳಿ,
೨)ಈಶ್ವರಪ್ಪ ಫರಹತಾಬಾದ, ೩)ಮನುಬಾಯಿ ನಾಕೋಡ, ೪)ಮಂಡ್ಯ ರಮೇಶ್,
೫)ಸರಸ್ವತಿ / ಜುಲೇಖಾ ಬೇಗಂ,
೬)ಶ್ರೀ ಪಾದ ಭಟ್ಟ,
೭)ಶಿವಯ್ಯಸ್ವಾಮಿ ಬಿಬ್ಬಳ್ಳಿ, ೮)ದೀಪಕ್ ಮೈಸೂರು ಇವರಿಗೆ ಪ್ರಶಸ್ತಿ ನೀಡಲಾಗಿದೆ.
೨೦೨೨ನೇ ಸಾಲಿನ ಪ್ರಶಸ್ತಿಗಾಗಿ ರಂಗ ಸಾಧಕರೊಬ್ಬರನ್ನು ಆಯ್ಕೆ ಮಾಡಬೇಕಾಗಿದ್ದು ಅಂಥವರ ನಾಮ ನಿರ್ದೇಶನ ಮಾಡಬೇಕೆಂದು ಪ್ರಶಸ್ತಿಯ ಆಯ್ಕೆ ಸಮಿತಿಯು ಸಾರ್ವಜನಿಕರನ್ನು ಕೋರುತ್ತದೆ. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಗಮನಾರ್ಹ ಸಾಧನೆ ಮಾಡಿದ ಕಲೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಅರ್ಹ ಸಾಧಕರ ವಿವರಗಳನ್ನು ಜಂಗಮಶೆಟ್ಟಿ ರಂಗಪ್ರಶಸ್ತಿಗಾಗಿ ಈ ಕೆಳಗೆ ನಮೂದಿಸಿದ ವಿಳಾಸಕ್ಕೆ ದಿನಾಂಕ ೨೦.೬.೨೦೨೨ರ ಒಳಗಾಗಿ ಕಳುಹಿಸಬೇಕೆಂದು ಈ ಮೂಲಕ ಕೋರಿದ್ದಾರೆ. ಸಂಪರ್ಕಿಸುವ ವಿಳಾಸ: ಡಾ ಸುಜಾತಾ ಜಂಗಮಶೆಟ್ಟಿ
ಗೋಕುಲ ಸುಪರ್ ಮಾರ್ಟ್, ೨ನೇ ಮಹಡಿ, ಶ್ರೀನಿವಾಸ ಕಣ್ಣಿನ ಆಸ್ಪತ್ರೆಪಕ್ಕ, ಹಳೇ ಜೇವರಗಿ ರಸ್ತೆ, ಕಲಬುರಗಿ -೦೨, ಮೊ. 9480409732.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…