ಕಲಬುರಗಿ: ಹನುಗುಂಟ ಗ್ರಾಮದ ಎಲ್ಲಾ ಜನಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಮರ್ಪಕವಾಗಿ ಉದ್ಯೋಗ ನೀಡಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಸುಮಾರು ೨ ಗಂಟೆಗಳ ಕಾಲ ಪಂಚಾಯತಿ ಎದುರುಗಡೆ ಜನಗಳು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎ.ಐ.ಕೆ.ಕೆ.ಎಂ.ಎಸ್ ತಾಲೂಕ ಕಾರ್ಯದರ್ಶಿ ರಾಜೇಂದ್ರ ಅತನೂರ ಮಾತನಾಡಿಯಾವ ಒಬ್ಬ ಅಧಿಕಾರಿ ಕೂಡ ಬಂದು ವಿಚಾರಿಸದೆ ಇರುವುದು ನೋಡಿದರೆ ಅಧಿಕಾರಿಗಳ ಎಷ್ಟು ನೀರ್ಲಕ್ಷೆದಿಂದ್ದಾರೆ ಎಂದು ಹೇಳಿದರು.`
ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿನ ಬಹುತೇಕ ಜನರು ಹೊಲಗಳಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ರಾಶಿ ಮುಗಿದ ನಂತರ ಹಳ್ಳಿಗಳಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಹಳ್ಳಿಯ ಜನಗಳು ಜೀವನೋಪಾಯಕ್ಕೆ ನಗರಗಳಿಗೆ ಗುಳೆ ಹೋಗುತ್ತಾರೆ . ಇದನ್ನು ತಪ್ಪಿಸಲೆಂದೇ ಕೇಂದ್ರ ಸರ್ಕಾರ ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಲ್ಲಿನ ಜನಗಳಿಗೆ ಕೆಲಸ ನೀಡಿ ಹಳ್ಳಿಗಳಲ್ಲಿ ಬದುಕಲು ಅನುಕೂಲ ಮಾಡಿದೆ ಎಂದು ತಿಳಿಸಿದರು.
ಹೊನಗುಂಟಾ ಗ್ರಾಮದಲಿ ಸಮರ್ಪಕವಾಗಿ ಎಲ್ಲಾ ಜನಗಳಿಗೆ ಕೆಲಸ ನೀಡುತ್ತಿಲ್ಲ. ಜನಗಳು ಹಲವಾರು ಬಾರಿ ಅಧಿಕಾರಿಗಳಿಗೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಮೇಲಾಧಿಕಾರಿಗಳು ನಡೆಯುತ್ತಿರುವ ಅವ್ಯವಹಾರವನ್ನು ನಿಲ್ಲಿಸಿ, ಎಲ್ಲಾ ಜನರಿಗೆ ಸಮರ್ಪಕವಾಗಿ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಒದಗಿಸಬೇಕು ಮತ್ತು ಸರಿಯಾಗಿ ವೇತನ ನೀಡಬೇಕು ಎಂದು ಅಖಿಲ ಭಾರತ ರೈತರ ಕೃಷಿ ಕಾರ್ಮಿಕ ಸಂಘಟನೆ ಆಗ್ರಹಿಸಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…