ಕಲಬುರಗಿ: ಬೆಂಗಳೂರಿನಲ್ಲಿ ಈಚೆಗೆ ನಡೆದ ಕರ್ನಾಟಕದ ಎರಡನೇ ಮಿನಿ ಒಲಿಂಪಿಕ್-೨೦೨೨ ಕ್ರೀಡಾಕೂಟದ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿ, ವಿವಿಧ ಪದಕಗಳನ್ನು ಗಳಿಸಿದ್ದಾರೆ.
ಸಾಯಿನಾಥ್ ಮೈಪಾಲ್ ೫೦ ಕೆ.ಜಿ ವಿಭಾಗದಲ್ಲಿ ಮೊದಲ ಸ್ಥಾನ. ಆಶಿಶ್ ಧನರಾಜ್ ೫೫ ಕೆ.ಜಿ ಭಾಗದಲ್ಲಿ ಮೊದಲ ಸ್ಥಾನ. ಸಿದ್ಧಾರ್ಥ ಕಾಶಿನಾಥ ೩೫ ಕೆ.ಜಿ ವಿಭಾಗದಲ್ಲಿ ಎರಡನೇ ಸ್ಥಾನ. ವೇದಾಂತ ಕಾಶಿನಾಥ ೩೦ ಕೆ.ಜಿ ವಿಭಾಗದಲ್ಲಿ ಎರಡನೇ ಸ್ಥಾನ. ಅನಾಮಿಕ ರವಿ ೩೬ ಕೆ.ಜಿ ಭಾಗದಲ್ಲಿ ಎರಡನೇ ಸ್ಥಾನ. ಹ್ಯಾಪಿರಾಜ್ ಸಿದ್ದರಾಜು ೫೫ ಕೆ.ಜಿ ವಿಭಾಗದಲ್ಲಿ ಮೂರನೇ ಸ್ಥಾನ. ಶ್ರಾವಂತಿ ೨೮ ಕೆ.ಜಿ ವಿಭಾಗದಲ್ಲಿ ಮೊದಲ ಸ್ಥಾನ. ಶೌರ್ಯ ೬೦ ಕೆ.ಜಿ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ನಿಧಿ ಕುಲಕರ್ಣಿ, ಚಿತ್ರಲೇಖ, ಸ್ಪಂದನ, ರುದ್ರಾಕ್ಷ, ಆದಿತ್ಯ ಕೂಡ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಜುಡೋಗೆ ಆಯ್ಕೆಯಾದ ಎಂಟು ಜಿಲ್ಲೆಗಳ ಕ್ರೀಡಾಪಟುಗಳೊಂದಿಗೆ ಸೆಣಸಾಡಿ ಹೆಚ್ಚಿನ ಪದಗಳನ್ನು ಗೆದ್ದಿದ್ದಾರೆ. ಈ ಸಾಧನೆಗೆ ತರಬೇತುದಾರರಾದ ಅಶೋಕ ಎಂ., ಶ್ರೀಲೇ, ಜಿಲ್ಲಾ ಜುಡೋ ಸಂಘದ ಮುಖಂಡ ಶಿವಂ ಜೋಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…