ಬೆಂಗಳೂರು: ಪತ್ರಕರ್ತರಿಗೆ ಕೊಡ ಮಾಡುವ ಮಾನ್ಯತಾ (accreditation) ಕಾರ್ಡ್ ನಲ್ಲಿ ಆಗಿದ್ದ ಲೋಪವನ್ನು ಕೂಡಲೇ ಸರಿಪಡಿಸಿ ಹಿಂದಿನ ಮಾದರಿಯಲ್ಲಿ ಕಾರ್ಡ್ ಕೊಡುವುದಾಗಿ ಭರವಸೆ ನೀಡಿದ್ದ ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು, ಎಲ್ಲಾ ಜಿಲ್ಲೆಗೂ ಲೋಪ ಸರಿಪಡಿಸಿರುವ ಹೊಸ ಕಾರ್ಡ್ ರವಾನಿಸಿದ್ದಾರೆ.
ದಿನಾಂಕ 8.3.2022 ರಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದ ಅಧ್ಯಕ್ಷ ಶಿವಾನಂದ ತಗಡೂರು ಅವರು ವಾರ್ತಾ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ, ಅಕ್ರಿಡಿಟೇಶನ್ ಕಾರ್ಡ್ ನಲ್ಲಿ ಜಿಲ್ಲೆಗೆ ಮಾತ್ರ ಸೀಮಿತ ಎನ್ನುವುದನ್ನು ಕೂಡಲೇ ತೆಗೆಯಬೇಕು. ಮೊದಲಿದ್ದಂತೆ ಕಾರ್ಡ್ ನೀಡಬೇಕು ಒತ್ತಾಯಿಸಿದ್ದರು.
ಪತ್ರಕರ್ತರಿಗೆ ನೀಡುವ ಮಾನ್ಯತಾ ಕಾರ್ಡ್ ಎಲ್ಲರಿಗೂ ಒಂದೇ ಮಾದರಿಯಲ್ಲಿ ಇರುತಿತ್ತು. ಆದರೆ, ಈ ಬಾರಿ ಕಾರ್ಡನ್ನು ಜಿಲ್ಲೆಗೆ ಮಾತ್ರ ಸೀಮಿತ ಮಾಡಿರುವ ಲೋಪದ ಬಗ್ಗೆ ಕೆಯುಡಬ್ಲ್ಯೂಜೆ ಗಮನಸೆಳೆದಿದ್ದು ಅಲ್ಲದೆ, ಈ ಬಗ್ಗೆ ಕೆಲ ಜಿಲ್ಲೆಗಳಿಂದ ಬಂದಿರುವ ದೂರುಗಳನ್ನು ಆಯುಕ್ತರ ಗಮನಕ್ಕೆ ತರಲಾಗಿತ್ತು. ಸರಿಪಡಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಕೆಯುಡಬ್ಲ್ಯೂಜೆ ಎಚ್ಚರಿಕೆ ನೀಡಿತ್ತು.
ಲೋಪಗಳಿರುವ ಕಾರ್ಡ್ ಗಳನ್ನು ವಾಪಸ್ಸು ಪಡೆದುಕೊಳ್ಳುವಂತೆ ಅಂದೇ ಜಿಲ್ಲಾ ವಾರ್ತಾಧಿಕಾರಿಗಳಿಗೆ ಸೂಚನೆ ನೀಡಿ, ಹೊಸ ಕಾರ್ಡ್ ಕಳುಹಿಸಿಕೊಡುವುದಾಗಿ ಆಯುಕ್ತರಾದ ಡಾ.ಹರ್ಷ ಅವರು ಭರವಸೆ ನೀಡಿದ್ದರು.
ಅದೇ ರೀತಿಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಡಾ.ಹರ್ಷ ಅವರಿಗೆ ಕೆಯುಡಬ್ಲ್ಯೂಜೆ ಅಭಿನಂದನೆಗಳನ್ನು ಸಲ್ಲಿಸಿದೆ.
ಹೊಸದಾಗಿ ಕಳುಹಿಸಿದ ಮಾನ್ಯತಾ ಕಾರ್ಡ್ ಗಳನ್ನು ಆಯಾ ಜಿಲ್ಲೆಯ ವಾರ್ತಾ ಇಲಾಖೆಯಲ್ಲಿ ಪಡೆದುಕೊಂಡು, ಈ ಹಿಂದೆ ನೀಡಿದ್ದ ಮಾನ್ಯತೆ ಕಾರ್ಡ್ ವಾಪಸ್ಸು ನೀಡುವಂತೆ ಕೆಯುಡಬ್ಲ್ಯೂಜೆ ವಿನಂತಿಸಿದೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…