ಕಲಬುರಗಿ: ನೂತನ ಪಠ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಪಠ್ಯಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಶಿಕ್ಷಣ ಸಚಿವ ಬಿ.ಸಿ ಹಾಗಶ್ ಗಾಳಿಗ ತೂರಿರುವ ಪಠ್ಯಕ್ರಮ ಕೈಬಿಡಬೇಕೆಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಸಂಚಾಲಕರು ರಾಜೇಂದ್ರ ರಾಜವಾಳ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಹೆಸರಲ್ಲಿ ದ್ವೇಷ ಹರಡುವ ಪಠ್ಯಗಳನ್ನು ಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಈಗ ಸೇರಿಸಲಾಗಿರುವ ಪಠ್ಯಗಳು ಪ್ರೀತಿ, ವಿಶ್ವಾಸ, ನಂಬಿಕೆ, ಪರಸ್ಪರ ಗೌರವ, ಸ್ನೇಹ, ಸಹೋದರತೆ, ರಾಷ್ಟ್ರೀಯತೆ, ಮಾನವೀಯ ಮೌಲ್ಯಗಳನ್ನು ಹೇಳಿಕೊಡುವುದಿಲ್ಲ. ಈ ಸರ್ಕಾರ ತನ್ನ ಹಿಡನ್ ಅಜೆಂಡಾವನ್ನು ಸಾಕಾರಗೊಳಿಸಿಕೊಳ್ಳಲು ವಿದ್ಯಾರ್ಥಿಗಳ ಭವಿಷ್ಯನ್ನು ಬಳಸಿಕೊಳ್ಳುತ್ತಿದೆ. ಪಾಲಕರು ತಮ್ಮ ಮಕ್ಕಳ ಭವಿಷ್ಯದ ಕುರಿತು ದನಿ ಎತ್ತಬೇಕು. ಸಮಾಜದ ಪ್ರಜ್ಞಾವಂತರು ಪ್ರಶ್ನೆಗಳನ್ನು ಎತ್ತಬೇಕು. ಅಲ್ಲದೆ ಸಂವಿಧಾನದ ಪ್ರಕಾರ ಕಡ್ಡಾಯವಾಗಿರುವ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಪಠ್ಯಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಶಿಕ್ಷಣ ಸಚಿವ ಬಿ.ಸಿ ಹಾಗಶ್ ಗಾಳಿಗ ತೂರಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಹೇಳಿದ್ದಾರೆ.
ಪರಿಷ್ಕೃತ ಶಾಲಾ ಪಠ್ಯಗಳಲ್ಲಿ ಭಗತ್ ಸಿಂಗ್, ನಾರಾಯಣಗುರು, ಪೆರಿಯಾರ್ ಅವರ ಕುರಿತಾದ ಪಠ್ಯಗಳನ್ನು ಸಾರಾ ಅಬೂಬಕರ್, ಲಂಕೇಶ್, ಡಾ.ಜಿ. ರಾಮಕೃಷ್ಣ ಮತ್ತಿತರರ ಬರಹಗಳನ್ನು ತೆಗೆದು ಹಾಕಿರುವ ಬಗ್ಗೆ ಮತ್ತು ವಿವಾದಾಸ್ಪದವಾದ ಹೆಡ್ಗೇವಾರ್ ಕುರಿತ ಪಠ್ಯವನ್ನು ಸೇರ್ಪಡೆ ಮಾಡಿರುವ ಬಗ್ಗೆ ಈಗಾಗಲೇ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿ-ಯುವಜನರ ಭವಿಷ್ಯವನ್ನು ಲೆಕ್ಕಿಸದೇ ಪಠ್ಯಪುಸ್ತಕವನ್ನು ಪಕ್ಷದ ಪ್ರಣಾಳಿಕೆ, ಪರ ಪುಸ್ತಕವಾಗಿ ಯುವಜನರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಹುನ್ನಾರ ಇದರ ಹಿಂದಿದೆ ಎಂದು ದುರಿದ್ದಾರೆ.
ಈ ಸಮಿತಿಯ ಶಿಫಾರಸ್ಸುಗಳ ಪ್ರಕಾರ ಸೇರ್ಪಡೆಗೊಳ್ಳಲಿರುವ ಬಹುತೇಕ ಪಠ್ಯಗಳೂ ಬ್ರಾಹ್ಮಣ ಮತ್ತು ಬಲಾಢ್ಯ ಜಾತಿಗಳ ಲೇಖಕರು ಬರೆದವಾಗಿವೆ ಮಾತ್ರವಲ್ಲ ಜಾತಿ, ಧರ್ಮ ಮತ್ತು ಲಿಂಗಾಧಾರಿತವಾದ ಅಸಮಾನತೆಗಳನ್ನು ಎತ್ತಿಹಿಡಿಯುತ್ತಲಿವೆ. ಮಕ್ಕಳ ಕಲಿಕೆಗೆ ಹಾನಿಕರವಾದ ಅನೇಕ ಅಂಶಗಳು ಈ ಪಠ್ಯಗಳಲ್ಲಿ ಇರುವುದನ್ನು ಈಗಾಗಲೇ ತಜ್ಞ ತೋರಿಸಿದ್ದಾರೆ. ಪಠ್ಯಪರಿಷ್ಕರಣ ಸಮಿತಿಯಲ್ಲಿಯೇ ಬಹುತೇಕ ಒಂದು ಜಾತಿಗೆ ಸೇರಿದವರನ್ನು ಸೇರಿಸುವುದು, ಆ ಜಾತಿಗೆ ಸೇರಿದವರ ಪಠ್ಯಗಳನ್ನೇ ಬಹುತೇಕ ಹೊಸ ಪಠ್ಯಗಳಾಗಿ ಸೇರಿಸಿಕೊಳ್ಳುವುದು, ಆ ಜಾತಿಗೆ ಹೊರತಾರವರ ಪಠ್ಯಗಳನ್ನು ಮಾತ್ರ ತೆಗೆಯುವುದು ಒಂದು ಹುನ್ನಾರವೆಂಬುದನ್ನು ಅರಿಯಲು ಯಾವ ಕನ್ನಡಿಯ ಅಗತ್ಯವೂ ಇಲ್ಲ. ಈ ಸಮಿತಿಯು ಈಗಿಂದೀಗಲೇ ಬರ್ಖಾಸ್ತುಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜಾತಿಯ ವಿಚಾರ ಮಾತ್ರವಲ್ಲದೆ, ತೆಗೆಯಲಾದ ಪಠ್ಯಗಳನ್ನು ನೋಡಿದರೆ ಅವೆಲ್ಲವೂ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಹಲವು ತಲೆಮಾರುಗಳನ್ನು ಉತ್ತಮ ರೀತಿಯಲ್ಲಿ ಪ್ರಭಾವಿಸಿರುವ, ದೇಶದ ಒಳಿತಿಗಾಗಿ ಶ್ರಮಿಸಲು ಯುವ ತಲೆಮಾರನ್ನು ಪ್ರೇರೇಪಿಸುವಂತಹ ಮಹಾನ್ ವ್ಯಕ್ತಿಗಳ ಕುರಿತಾದವಾಗಿವೆ; ಜೊತೆಗೆ ಕನ್ನಡ ನಾಡಿನಲ್ಲಿ ಸಹಜೀವನ ನಡೆಸುತ್ತಿರುವ ಹಲವು ಸಮುದಾಯಗಳ
ಬದುಕುಗಳನ್ನು ಪರಿಚಯಿಸುವಂತಹವಾಗಿವೆ. ಇವುಗಳನ್ನು ತೆಗೆದು ಬದಲಿಗೆ ಏಕಸಂಸ್ಕೃತಿಯನ್ನು ಪ್ರತಿಪಾದಿಸುವಂತಹ ಬರಹಗಳು ಸೇರ್ಪಡೆಯಾಗಿರುವುದು ಆಕಸ್ಮಿಕವಂತೂ ಅಲ್ಲ ಎಂದು ಟೀಕಿಸಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಸಾಂವಿಧಾನಿಕ ಆಶಯಗಳನ್ನು ಉಲ್ಲಂಘಿಸಿ ರಚನೆಯಾಗಿರುವ ಪಠ್ಯ ಪರಿಷ್ಕರಣ ಸಮಿತಿಯ ರಚನೆಯೇ ಆಸಾಂವಿಧಾನಿಕವಾಗಿದೆ. ಇದನ್ನು ಅನೂರ್ಜಿತಗೊಳಿಸಬೇಕು, ಈ ಪರಿಷ್ಕರಣ ಸಮಿತಿಯ ಯಾವುದೇ ಶಿಫಾರಸ್ಸುಗಳನ್ನೂ ಪರಿಗಣಿಸಬಾರದು. *ಶಾಲೆ ಆರಂಭವಾದರೂ ಇನ್ನೂ ನಡೆಯುತ್ತಿರುವ ಹೊಸ ಪಠ್ಯಪುಸ್ತಕ ಮುದ್ರಣದ ಪ್ರಹಸನವನ್ನು ನಿಲ್ಲಿಸಿ ಈ ಹಿಂದಿನ ಸಾಲಿನ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಕೂಡಲೇ ಕಳಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿಕೃತವಾದ ಹಲವಾರು ನಡವಳಿಕೆಗಳನ್ನು ಸಾರ್ವಜನಿಕವಾಗಿ ತೋರಿಸಿರುವ ಅಶ್ಲೀಲ ಹಾಗೂ ಅಭಿರುಚಿ ಹೀನ ಸಾಮಾಜಿಕ ಜಾಲತಾಣ ಬರಹಗಳನ್ನು ಬರೆದಿರುವ ಒಬ್ಬ ವ್ಯಕ್ತಿಯನ್ನು ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿಸುವ ಮೂಲಕ ಮಕ್ಕಳಿಗೆ ಕೊಡಲು ಹೊರಟಿರುವ ಸಂದೇಶವೇನು ಎಂಬ ಕುರಿತು ಸರ್ಕಾರವು ಸಾರ್ವಜನಿಕ ಹೇಳಿಕೆ ನೀಡಬೇಕು. ಕರ್ನಾಟಕವನ್ನು ಮತ್ತು ಭಾರತವನ್ನು ಗಾಢವಾಗಿ ಪ್ರಭಾವಿಸಿರುವ ಚಿಂತಕರು ಮತ್ತು ಸಮಾಜ ಸುಧಾರಕರ ಕುರಿತ ಪಠ್ಯಗಳನ್ನು ಕೈಬಿಟ್ಟು ರಾಷ್ಟ್ರಧ್ವಜ ಮತ್ತು ದೇಶದ ಸ್ವಾತಂತ್ರ‍್ಯ ಚಳವಳಿಯನ್ನು ಅಗೌರವಿಸಿರುವ ಹೆಡ್ಗೇವಾರ್ ಅವರಂತಹ ವ್ಯಕ್ತಿಗಳ ಬರಹಗಳನ್ನು ಸೇರಿಸಲು ಅನುವು ಮಾಡಿಕೊಟ್ಟಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳು ಸಾಕಷ್ಟು ಬರಬೇಕಿದೆ ಎಂಬುದು ನಿಜ. ಅದು ಇನ್ನಷ್ಟು ಎಲ್ಲರ ಕೈಗೆಟಕುವ ರೀತಿಯಲ್ಲಿ, ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಬದಲಾಗಬೇಕು. ಆದರೆ ಈ ನಡೆಗಳು ಕೆಲವರಿಗೆ ಮಾತ್ರ ಶಿಕ್ಷಣ ದಕ್ಕುತ್ತಿದ್ದ ಕಾಲದ ಚಿಂತನೆಗಳನ್ನು ಮುಂದಿಡುತ್ತಿವೆ ಎಂಬ ಆತಂಕ ಮೂಡಿಸುತ್ತಿವೆ. ಕಳೆದ ಎರಡು ಶತಮಾನಗಳಲ್ಲಿ ಇಡೀ ಪ್ರಪಂಚಕ್ಕೆ ಮೇಧಾವಿಗಳನ್ನು ನೀಡಿದ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಸಕಾರಾತ್ಮಕವಾಗಿ ಬದಲಿಸುವ ಬದಲು, ಹಿಂದಕ್ಕೊಯ್ಯುವ ಹುನ್ನಾರವನ್ನು ನಾವೆಂದಿಗೂ ಒಪ್ಪುವುದಿಲ್ಲ.
ಸರ್ಕಾರ ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಅಪಾಯಕಾರಿಯಾದ ಪಠ್ಯಗಳನ್ನು ಸಮರ್ಥಿಸುವ ಮತ್ತು ಅಸಂವಿಧಾನಿಕವಾದ ಪರಿಷ್ಕರಣ ಸಮಿತಿಯ ಶಿಫಾರಸ್ಸುಗಳನ್ನು ಪಠ್ಯಪುಸ್ತಕಗಳ ವಿಚಾರದಲ್ಲಿ ಮುಂದುವರೆಸಿದ್ದೇ ಆದರೆ ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಕಪ್ಪು ಬಾವುಟ ಪ್ರದರ್ಶನದ ಹೋರಾಟ ನಡೆಸಲಾಗುವುದು ಎಂದು ಕೆ.ವಿ.ಎಸ್ ಜಿಲ್ಲಾ ಮುಖಂಡರಆದ ಕಾಶಿನಾಥ ಹಂಗರಗಿ,ನಾಗರಾಜ, ಶರಣು ಬಿ. ಅಣಜಗಿ, ಶರಣು ಬಿ.ಟಿ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…