ಜೇವರ್ಗಿ: ತಾಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಾವನೂರ ಗ್ರಾಮದ ಸಿದ್ದಪ್ಪ ತಂದೆ ನಿಂಗಪ್ಪ ಸೀತಾಳ ಎಂಬುವವರ ಮನೆ ಕಳ್ಳತನವಾಗಿದೆ.
ಬಡ ಆಟೋ ಚಾಲಕನಾದ ಸಿದ್ದಪ್ಪ ತಂದೆ ನಿಂಗಪ್ಪ ಸೀತಾಳ ಕಷ್ಟ ಪಟ್ಟು ದುಡಿದು ತನ್ನ 3 ಜನ ಹೆಣ್ಣು ಮಕ್ಕಳ ಭವಿಷ್ಯಕಾಗಿ ಕೂಡಿಟ್ಟ ಹಣ ಕಳ್ಳರ ಪಾಲಾಗಿದೆ. ಕುಟುಂಬಸ್ಥರು ಬೇಸಿಗೆ ದಗೆಯಿಂದಾಗಿ ಪತ್ರಸ್ ಮನೆ ಹೊರಗಡೆ ಮಲಗಿರುವಾಗ ಮಧ್ಯರಾತ್ರಿ ಸುಮಾರು 12 ಗಾಢನಿದ್ರೆಯಲ್ಲಿ ಮಲಗಿರುವಾಗ ಕದೀಮರು ಕೈಚಳಕ ತೋರಿದ್ದಾರೆ .ಮನೆಯ ಹಿಂಭಾಗದಿಂದ ಒಳಗೆ ಬಂದು ಕಳ್ಳನು ಮೇಲ್ಚಾವಣಿ ಶೆಡ್ಡನ್ನು ಕಿತ್ತಿ ಒಳಗೆ ನುಸುಳಿ ಮನೆಯಲ್ಲಿ ಇರುವ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಮತ್ತು ನಗದು ಹಣವನ್ನು ದೋಚಿ ನಿಶಬ್ದವಾಗಿ ಪರಾರಿಯಾಗಿದ್ದಾರೆ.
ಮನೆಯವರಿಗೆ ಕಿಂಚಿತ್ತು ಸುಳಿಯು ಸಿಗದಂತೆ ಪರಾರಿಯಾದ ಕಳ್ಳರು 20ಸಾವಿರ ನಗದು ರೂಪಾಯಿಗಳು ಸೇರಿದಂತೆ 6 ಗ್ರಾಂ ಚಿನ್ನ ಮತ್ತು 21 ಸಾವಿರ ಮೌಲ್ಯದ ಒಪ್ಪೋ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ .
ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಶೋಧದಲ್ಲಿ ತೊಡಗಿದ್ದಾರೆ. ಎಂದು ತಿಳಿದುಬಂದಿದೆ. ಪೊಲೀಸರು ಬೇಗನೆ ಕಳ್ಳರನ್ನು ಪತ್ತೆಹಚ್ಚಿ ಅವರನ್ನು ಬಂದಿಸಿ ವಿಚಾರಣೆ ನಡೆಸಿ ನನಗೆ ನ್ಯಾಯ ಕೊಡಿಸುತ್ತಾರೆ ಎಂದು ನಂಬಿದೇನೆ ಎಂದು ಸಿದ್ದಪ್ಪ ಸೀತಾಳ ಉದಯಕಾಲ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…