ಕಲಬುರಗಿ: ಮನ್ಮಥ ಬಾಣ ಇಲ್ಲದಿರುವವನೆ ಶರಣ. ಬಯಸಿ ಬಂದುದೇ ಅಂಗಭೋಗ, ಬಯಸದೆ ಬಂದುದೇ ಲಿಂಗಭೋಗ. ದೇವರಿಗೂ ಶರಣನಿಗೆ ವ್ಯತ್ಯಾಸವಿಲ್ಲ ಎಂದು ಬೀದರ್ ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾ ಮಠದ ಅಕ್ಕ ಅನ್ನಪೂರ್ಣ ತಾಯಿ ನುಡಿದರು.
ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಸಾಂಸ್ಕೃತಿಕ ಮಂಟಪದಲ್ಲಿ ಬಸವ ಸೇವಾ ಪ್ರತಿಷ್ಠಾನ, ನೀಲಮ್ಮನ ಬಳಗ ಇಂದು ಸಂಜೆ ಹಮ್ಮಿಕೊಂಡ 51ನೇ ಬಸವ ಜ್ಯೋತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಲೇಸೆನಿಸಿಕೊಂಡು ಒಂದು ದಿನ ಬದುಕಿದವನೆ ಶರಣ. ಇಲ್ಲದ ವ್ರತ ಮಾಡುವ ಬದಲಾಗಿ ಶರಣ ವ್ರತ ಮಾಡಬೇಕು ಎಂದರು. ಶರಣ ಸಂಸ್ಕೃತಿ ಹರಡುವ ಪ್ರಯತ್ನವೇ ಶರಣ. ಶರಣ ನಿದ್ರೆಗೈದರೆ ಜಪ ಕಾಣಿರೋ, ಶರಣನೆದ್ದು ಕುಳಿತರೆ ಶಿವರಾತ್ರಿ ಎನ್ನುವಂತೆ ಭಾವಶುದ್ದಿ, ಮನಶುದ್ದಿ ಮಾಡುವ ಕ್ರಿಯೆ ನಡೆಯಬೇಕು. ದೇವನೊಂದಿಗೆ ಬದುಕಬೇಕು ಎಂದು ಅವರು ಹೇಳಿದರು.
ಸಂಸಾರದಲ್ಲಿ ಪರಮಾತ್ಮನ ನೆನಹು ಇರಬೇಕು. ನಿನ್ನ ರೂಪವೇ ದೇವರು ಎಂದು ಭಾವಿಸಿಕೊಳ್ಳಬೇಕು. ಐಕ್ಯದ ಮುನ್ನಿನ ಈ ಸ್ಥಲದಲ್ಲಿ ಬೇಕು-ಬೇಡಗಳ ಜಂಜಡದಿಂದ ಮುಕ್ತವಾಗಿರಬೇಕು ಎಂದು ತಿಳಿಸಿದರು. ತೀರ್ಥಯಾತ್ರೆ ದರ್ಶನದಂತೆ ಒಬ್ಬ ಶರಣನನ್ನು ನೋಡಿದಂತೆ ಶರಣರ ಸಂಗ ಮಾಡಬೇಕು. ಶರಣತ್ವದ ಸಂಗದಿಂದ ಬದುಕು ಪಾವನಗೊಳ್ಳಲಿದೆ. ಆಶೀರ್ವಾದದಲ್ಲಿ ಬದುಕುವುದಕ್ಕಿಂತ ಆಚರಣೆಯಲ್ಲಿ ಬದುಕಬೇಕು ಎಂದು ತಿಳಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…