ಶರಣ ಜೀವನ ಬದುಕಲು ಪ್ರಯತ್ನಿಸಬೇಕು: ಅಕ್ಕ ಅನ್ನಪೂರ್ಣತಾಯಿ

0
198

ಕಲಬುರಗಿ: ಮನ್ಮಥ ಬಾಣ ಇಲ್ಲದಿರುವವನೆ ಶರಣ. ಬಯಸಿ ಬಂದುದೇ ಅಂಗಭೋಗ, ಬಯಸದೆ ಬಂದುದೇ ಲಿಂಗಭೋಗ. ದೇವರಿಗೂ ಶರಣನಿಗೆ ವ್ಯತ್ಯಾಸವಿಲ್ಲ ಎಂದು ಬೀದರ್ ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾ ಮಠದ ಅಕ್ಕ ಅನ್ನಪೂರ್ಣ ತಾಯಿ ನುಡಿದರು.

ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಸಾಂಸ್ಕೃತಿಕ ಮಂಟಪದಲ್ಲಿ ಬಸವ ಸೇವಾ ಪ್ರತಿಷ್ಠಾನ, ನೀಲಮ್ಮನ ಬಳಗ ಇಂದು ಸಂಜೆ ಹಮ್ಮಿಕೊಂಡ 51ನೇ ಬಸವ ಜ್ಯೋತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಲೇಸೆನಿಸಿಕೊಂಡು ಒಂದು ದಿನ ಬದುಕಿದವನೆ ಶರಣ. ಇಲ್ಲದ ವ್ರತ ಮಾಡುವ ಬದಲಾಗಿ ಶರಣ ವ್ರತ ಮಾಡಬೇಕು ಎಂದರು. ಶರಣ ಸಂಸ್ಕೃತಿ ಹರಡುವ ಪ್ರಯತ್ನವೇ ಶರಣ. ಶರಣ ನಿದ್ರೆಗೈದರೆ ಜಪ ಕಾಣಿರೋ, ಶರಣನೆದ್ದು ಕುಳಿತರೆ ಶಿವರಾತ್ರಿ ಎನ್ನುವಂತೆ ಭಾವಶುದ್ದಿ, ಮನಶುದ್ದಿ ಮಾಡುವ ಕ್ರಿಯೆ ನಡೆಯಬೇಕು. ದೇವನೊಂದಿಗೆ ಬದುಕಬೇಕು ಎಂದು ಅವರು ಹೇಳಿದರು.

Contact Your\'s Advertisement; 9902492681

ಸಂಸಾರದಲ್ಲಿ ಪರಮಾತ್ಮನ ನೆನಹು ಇರಬೇಕು. ನಿನ್ನ ರೂಪವೇ ದೇವರು ಎಂದು ಭಾವಿಸಿಕೊಳ್ಳಬೇಕು. ಐಕ್ಯದ ಮುನ್ನಿನ ಈ ಸ್ಥಲದಲ್ಲಿ ಬೇಕು-ಬೇಡಗಳ ಜಂಜಡದಿಂದ ಮುಕ್ತವಾಗಿರಬೇಕು ಎಂದು ತಿಳಿಸಿದರು. ತೀರ್ಥಯಾತ್ರೆ ದರ್ಶನದಂತೆ ಒಬ್ಬ ಶರಣನನ್ನು ನೋಡಿದಂತೆ ಶರಣರ ಸಂಗ ಮಾಡಬೇಕು. ಶರಣತ್ವದ ಸಂಗದಿಂದ ಬದುಕು ಪಾವನಗೊಳ್ಳಲಿದೆ. ಆಶೀರ್ವಾದದಲ್ಲಿ ಬದುಕುವುದಕ್ಕಿಂತ ಆಚರಣೆಯಲ್ಲಿ ಬದುಕಬೇಕು ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here