ಕಲಬುರಗಿಯಲ್ಲೇ ಮೊದಲ ಸ್ನಾತಕೋತ್ತರ ಪದವಿ ಆರಂಭ!
ಕಲಬುರಗಿ – ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಪದವಿ ಪಡೆಯುವುದೇ ಹೆಮ್ಮೆಯ ಸಂಗತಿಯಾಗಿದ್ದು, ಸರಕಾರಿ ಕಾಲೇಜುಗಳು ವೃತ್ತಿಯಲ್ಲಿ ಉತ್ತಮ ಅವಕಾಶ ಒದಗಿಸಿಕೊಡುತ್ತವೆ. ಕಠಿಣ ಪರಿಸ್ಥಿತಿಯಲ್ಲೂ ಅತ್ಯುತ್ತಮ ಸೇವೆ ಮಾಡಲು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ನೀಡುತ್ತದೆ ಎಂದು ಸಂಸದ ಡಾ. ಉಮೇಶ್ ಜಾಧವ ಅಭಿಮತಪಟ್ಟರು.
ಇದನ್ನೂ ಓದಿ: ಕಲಬುರಗಿ: ಕಾಂಗ್ರೆಸ್ ಮುಖಂಡರ ಸಭೆ
ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 2ನೇ ಅಗಸ್ತ್ಯ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಇಂದಿಲ್ಲಿ ಪದವಿ ಪಡೆದು ಹೊರಹೋಗುತ್ತಿರುವ ವೈದ್ಯರು ಗ್ರಾಮೀಣ ಪ್ರದೇಶದಲ್ಲಿನ ಬಡ ರೋಗಿಗಳಿಗೆ ಚಿಕಿತ್ಸೆ ನೀಡುವುದರಿಂದ ಉತ್ತಮ ಅವಕಾಶ ಲಭಿಸುತ್ತದೆ. ವೈದ್ಯರಿಗೆ ಶ್ರದ್ದೆ ಹಾಗೂ ಜವಾಬ್ದಾರಿ ಮುಖ್ಯವಾಗಿದ್ದು, ಅದನ್ನು ಎಲ್ಲರೂ ಮೈಗುಡಿಸಿಕೊಳ್ಳಬೇಕು. ವೈದ್ಯರು ತಮ್ಮ ವೃತ್ತಿ ಬದುನಲ್ಲಿ ಘನತೆ, ಗೌರವ, ಕರ್ತವ್ಯಗಳನ್ನು ಯಾವತ್ತೂ ಮರೆಯಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: ಮದರ್ ತೆರೆಸಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕೋವಿಡ್ ನಂತಹ ದುಸ್ತರ ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ವೈದ್ಯರನ್ನು ಪ್ರಧಾನಿ ಮೋದಿ ಅವರು ಕರೋನಾ ವಾರಿಯರ್ಸ್ ಎಂದು ಕರೆದಿದ್ದಾರೆ. ಹಿಂತಹ ವೈದ್ಯರು ದೇಶಕ್ಕೆ ಹೆಚ್ಚು ಹೆಚ್ಚು ಬರುವಂತಾಗಲಿ. ಅಲ್ಲದೇ, ಸೈನಿಕರು ಹಾಗೂ ರೈತರ ಮಕ್ಕಳು ವೈದ್ಯರಾಗಿ ಹೊರಹೊಮ್ಮುತ್ತಿರುವ ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ, ರಾಜ್ಯದಲ್ಲಿ ಹೊಸದಾಗಿ ಪ್ರಾರಂಭಗೊಂಡ ವೈದ್ಯಕೀಯ ಕಾಲೇಜುಗಳಲ್ಲಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜೀಮ್ಸ್ ) ಮಾತ್ರ ಸ್ನಾತಕೋತ್ತರ ವೈದ್ಯ ಪದವಿ (ಪಿ.ಜಿ) ಆರಂಭವಾಗಿದೆ ಎಂದರು.
ಇದನ್ನೂ ಓದಿ: ಕೃಷ್ಣಾರೆಡ್ಡಿ ಹೇಳಿಕೆಗೆ ಸಿನ್ನೂರ್ ಖಂಡನೆ
ಕೊವಿಡ್ ಹಿನ್ನೆಲೆಯಲ್ಲಿ ಪಿಜಿ ಕೋರ್ಸುಗಳ ಸೂಕ್ತ ಅನುದಾನ ಕೊರತೆ ಕಾರಣದಿಂದ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ಪಿಜಿ ಕೋರ್ಸ ಆರಂಭವಾಗಲಿಲ್ಲ. ಆದರೆ, ಕಲಬುರಗಿ ಜೀಮ್ಸ್ ನಲ್ಲಿ ಪಿಜಿ ಕೋರ್ಸುಗಳ ಆರಂಭಕ್ಕೆ ಅಗತ್ಯ ಅನುದಾನ ಕೆಕೆಆರ್ ಡಿಬಿಯಿಂದ ನೀಡಿದ್ದರಿಂದ ರಾಜ್ಯದಲ್ಲೇ ಮೊದಲನೇಯದಾಗಿ ಸ್ನಾತಕೋತ್ತರ ಕೋರ್ಸುಗಳನ್ನು ಪ್ರಾರಂಭಿಸಲು ಅನುಕೂಲವಾಗಿದೆ ಎಂದರು.
ಜೀಮ್ಸ್ ನಲ್ಲಿ ಪಿಜಿ ಕೋರ್ಸ್ ಪ್ರಾರಂಭವಾಗಲು ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಬೆಂಬಲ ಸಾಕಷ್ಟಿದೆ. ಕಳೆದ ವರ್ಷದ ಮೊದಲ ಘಟಿಕೋತ್ಸವದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಂದರ್ಭದಲ್ಲಿ ವರ್ಷದೊಳಗೆ ಪಿಜಿ ಕೋರ್ಸ್ಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಇದೀಗ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸುವ ಮೂಲಕ ಸರಕಾರ ನುಡಿದಂತೆ ನಡೆದಿದೆ ಎಂದು ರೇವೂರ ಅವರು ತಿಳಿಸಿದರು.
ಇದನ್ನೂ ಓದಿ: ಸವಿಧಾನದ ರಕ್ಷಣೆ ಸೌಹಾರ್ದ ಸಮಾಜಕ್ಕಾಗಿ ಭೀಮಾ ಅರ್ಮಿ ಪ್ರತಿಭಟನೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಾತನಾಡಿ, ಇಂದಿಲ್ಲಿ ಪದವಿ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳು ಬಹಳ ಕಠಿಣ ಪರಿಶ್ರಮದಿಂದ ವೈದ್ಯಕೀಯ ಪದವಿ ಮುಗಿಸಿದ್ದೀರಿ. ಇದರಲ್ಲಿ ನಿಮ್ಮ ತಂದೆ ತಾಯಿ ಅವರ ಶ್ರಮ ಬಹಳಷ್ಟಿದೆ. ಅಲ್ಲದೇ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಪದವಿ ಪಡೆಯುತ್ತಿರುವುದು ಹೆಮ್ಮೆ ಉಂಟು ಮಾಡಿದೆ ಎಂದರು.
2ನೇ ಅಗಸ್ತ್ಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 149 ವಿದ್ಯಾರ್ಥಿಗಳು ಪದವಿ ಪಡೆದುಕೊಂಡರು. ಡಾ. ಆದರ್ಶ್ ಪಾಟೀಲ್ ಹಾಗೂ ಸುಮೈಯ್ಯ ನೌಶೀನ್ ಅವರ ಅತಿ ಹೆಚ್ಚು ಅಂಕ ಪಡೆದು ಟ್ರೋಫಿ ಪಡೆದುಕೊಂಡರು. ಸಂಸ್ಥೆಯ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದ್ದರು.
ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ ನಾಳೆ
ಈ ಸಂದರ್ಭದಲ್ಲಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಮಹಮ್ಮದ್ ಶಫಿಯುದ್ದಿನ್, ಪ್ರಾಂಶುಪಾಲ ಡಾ. ಉಮೇಶ್ ಎಸ್. ಆರ್., ಮುಖ್ಯ ಆಡಳಿತಾಧಿಕಾರಿ ಪಾರ್ವತಿ, ಎಲ್ಲಾ ವಿಭಾಗದ ಡೀನ್ ರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…