ಪರಿಷ್ಕೃತ ಪಠ್ಯ ಪುಸ್ತಕ ರದ್ದತಿಗೆ ಝಿಶಾನ್ ಆಗ್ರಹ

0
19

ಕಲಬುರಗಿ: ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಸಮಿತಿ ಶಿಫಾರಸ್ಸು ತಿರಸ್ಕರಿಸಿ ಸಮಿತಿಯನ್ನು ಹಿಂಪಡೆದು ರದ್ದುಗೊಳಿಸಬೇಕು ಮತ್ತು ಈ ಹಿಂದಿನ ಪರಿಷ್ಕೃತ ಪಠ್ಯ ಪುಸ್ತಕಗಳನ್ನೇ ಮುಂದುವರಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳ ಜಂಟಿ ವೇದಿಕೆ- ಕರ್ನಾಟಕ ಮುಖಂಡ ಝಿಶಾನ್ ಆಗ್ರಹಿಸಿದರು.

2017-18ರಲ್ಲಿ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಪರಿಷ್ಕರಣೆ ಮಾಡಲಾಗಿದ್ದ ಕೆಲವು ತರಗತಿಗಳ ಪಠ್ಯ ಪುಸ್ತಕಗಳನ್ನು ಪುನರ್ ಪರಿಶೀಲನೆ ಮಾಡಿದ್ದು ಅನೇಕ ಪಾಠಗಳನ್ನು ಬದಲಾವಣೆ ಮಾಡಿ ಕೆಲವು ಪ್ರಮುಖ ಪಾಠಗಳನ್ನು ಕೈ ಬಿಟ್ಟು ಹೊಸ ಪಾಠಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ನಾಡಿನ ಹೆಮ್ಮೆಯ ಲೇಖಕರಾದ ಸಾರಾ ಅಬೂಬಕರ್, ಪಿ. ಲಂಕೇಶ, ಅರವಿಂದ ಮಾಲಗತ್ತಿ, ಬಿ.ಟಿ. ಲಲಿತಾನಾಯಕ ಹಾಗೂ ಇನ್ನಿತರ ಮೌಲಿಕ ಪಾಠಗಳನ್ನು ಪಠ್ಯದಿಂದ ತೆಗೆದು ಹಾಕಲಾಗಿದೆ. ಸೇರ್ಪಡೆಯಾದ ಬಹುತೇಕ ಪಾಠಗಳು ಒಂದು ಜಾತಿಯವರ ಅಥವಾ ಒಂದು ಸಿದ್ಧಾಂತವನ್ನು ಪ್ರತಿಪಾದಿಸಿದ ವ್ಯಕ್ತಿಗಳಾಗಿರುವುದರಿಂದ ಮೇಲ್ನೋಟಕ್ಕೆ ಪಠ್ಯ ಪುಸ್ತಕಗಳಲ್ಲಿ ಕೋಮುವಾದಿಕರಣ ಮತ್ತು ಕೇಸರಿಕರಣದ ಹುನ್ನಾರ ಅಡಗಿದೆ ಎಂದು ಆಪಾದಿಸಿದರು.

ಸರ್ಕಾರದ ಈ ನಡೆ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಬಹುತ್ವ ವಿರೋಧಿಯಾಗಿದ್ದು, ಇದು ನಾಡಿಗೆ ಬಗೆದ ದ್ರೋಹವಾಗಿದೆ ಎಂದು ತಿಳಿಸಿದರು.

ಯಾವುದೇ ಶೈಕ್ಷಣಿಕ ಹಿನ್ನೆಲೆ ಇಲ್ಲದ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ತಪ್ಪು. ಧ್ವಜವನ್ನು ತನ್ನ ಲಂಗೋಟಿಗೆ ಹೋಲಿಸಿಕೊಂಡು, ನಾಡಗೀತೆ ತಿರುಚಿರುವವರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಫ್ರೇಮ್ ವರ್ಕ್ ಅಡಿಯಲ್ಲಿ ಪಠ್ಯ ಪುಸ್ತಕದ ವಸ್ತು ಮೊದಲು ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಆನಂತರ ಪಠ್ಯ ಪುಸ್ತಕ ರಚನೆಯಾಗಬೇಕು. ಇದ್ಯಾವುದನ್ನು ಮಾಡದೆ ಏಕಾಏಕಿ, ಅತ್ಯಂತ ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಹೊರಟಿರುವುದು ಏನನ್ನು ತೋರಿಸಿಕೊಡುತ್ತದೆ ಎಂದರು.

ಜನಪರ ಮತ್ತು ಸಂವಿಧಾನಪರವಾಗಿ ಕಾರ್ಯನಿರ್ವಹಿಸಬೇಕಾದ ಶಿಕ್ಷಣ ಸಚಿವರು ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಡಾ. ಅನಿಲ ಟೆಂಗಳಿ, ಬಾಬು ಬೀಳಗಿ, ರಾಜೇಂದ್ರ ರಾಜವಾಳ, ಅಭಿಷೇಕ ಚಕ್ರವರ್ತಿ, ಸುನಿಲ್ ಮಾನ್ಪಡೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here