ಶಹಾಬಾದ:ಉರ್ದು ಬರುವ ಶಿಕ್ಷಕರೇ ಮಾತ್ರ ಉರ್ದು ಶಾಲೆಯ ಮಕ್ಕಳ ಭವಿಷ್ಯವನ್ನು ಬರೆಯುವುದಕ್ಕೆ ಸಾಧ್ಯ ಎಂದು ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯಸ್ವಾಮಿ ರುದ್ನೂರ್ ಹೇಳಿದರು.
ಅವರು ಶನಿವಾರ ನಗರದ ಜಿಪಿಎಸ್ ಶಾಲೆಯಲ್ಲಿ ಉರ್ದು ಸಿಆರ್‌ಸಿಯಾಗಿ ಕೆಲಸ ನಿರ್ವಹಿಸಿ ಅಯೂಬ ಡೋಣೂರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾದ ಬಿಳ್ಕೋಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇದನ್ನೂ ಓದಿ: ಇಬ್ಬರು ಮನೆಗಳ್ಳರ ಬಂಧನ: 4ಲಕ್ಷ ಮೌಲ್ಯದ ಸ್ವತ್ತು ವಶ
ಉರ್ದು ಶಾಲೆಯ ಶಿಕ್ಷಕರು ತಮಗೆ ಬಿಟ್ಟರೇ ಬೇರೆ ಶಿಕ್ಷಕರಿಗೆ ಉರ್ದು ಬರೋದಿಲ್ಲ.ಆದ್ದರಿಂದ ನಿಮ್ಮ ಮಕ್ಕಳ ಭವಿಷ್ಯವನ್ನು ನಿರ್ಮಾಣ ಮಾಡೋರು ನಿವೇ ಮತ್ತು ಅವರ ಭವಿಷ್ಯವನ್ನು ಉಜ್ವಲ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ ಎಂದರು.ಪ್ರತಿಯೊಬ್ಬ ಸರಕಾರಿ ನೌಕರರ ಸೇವೆಯಲ್ಲಿ ವರ್ಗಾವಣೆಗಳು ಸಾಮನ್ಯವಾದವು.ಆದರೆ ಅವರು ಸಲ್ಲಿಸಿರುವ ಕರ್ತವ್ಯ ಮಾತ್ರ ತುಂಬಾ ಮಹತ್ವದಾಗಿರುತ್ತದೆ. ಸುಮಾರು ೬ ವರ್ಷಗಳಿಂದ ಉರ್ದು ಸಿಆರ್‌ಸಿಯಾಗಿ ಪ್ರಾಮಾಣಿಕತೆಯಿಂದ ಅಯೂಬ ಡೋಣೂರು ಅವರು ಕೆಲಸ ಮಾಡಿದ್ದಾರೆ.ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಯಾರಿಗೂ ತೊಂದರೆಯಾಗದಂತೆ ಕೆಲಸ ನಿರ್ವಹಿಸಿದ್ದು ಮಾತ್ರ ಸಂತೋಷದ ವಿಷಯ. ಅಲ್ಲದೇ ಶಿಕ್ಷಕರಿಗೆ ಮಾಹಿತಿ ತಿಳಿಸುವುದಲ್ಲದೇ ತಾವೂ ಸಹ ಸಕ್ರೀಯವಾಗಿ ಭಾಗವಹಿಸಿ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು ಎಂದರು.
ಅಂಜುಮನ್ ಕಾಲೇಜಿನ ಪ್ರಾಂಶುಪಾಲ ಪೀರಪಾಶಾ ಹೊನಗುಂಟಾ ಮಾತನಾಡಿ, ಸಿಆರ್‌ಸಿ ಅಯೂಬ ವರ್ಗಾವಣೆಯಾಗಿದ್ದಾರೆ ಎಂದರೆ ಏನೋ ಕಳೆದಕೊಂಡಂತಾಗಿದೆ.ಅವರ ಕೆಲಸ ಮಾಡುವ ಪರಿ ಮಾತ್ರ ಹೇಳತೀರದಂತದ್ದು.ಅವರು ಎಂದಿಗೂ ಶಿಕ್ಷಕರಿಗೆ ಯಾವುದೇ ರೀತಿ ಕಿರುಕುಳ ನೀಡಿದವರಲ್ಲ.ಯಾವಾಗಲೂ ಶಿಕ್ಷಕರೊಂದಿಗೆ ಅನೋನ್ಯವಾಗಿದ್ದು ಕೆಲಸ ಮಾಡುವ ಪ್ರವೃತ್ತಿ ಹೊಂದಿದ್ದರು.ಅವರ ಹಾಗೇ ಮುಂದಿನವರು ಉತ್ತಮ ರೀತಿಯಾಗಿ ಕೆಲಸ ನಿರ್ವಹಿಸಲಿ ಎಂದು ಹೇಳಿದರು.
ಇದನ್ನೂ ಓದಿ: ನಾರಾಯಣಸ್ವಾಮಿ ಕಲಬುರಗಿಗೆ
ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ಅಯೂಬ ಡೋಣೂರ್ ಮಾತನಾಡಿ,ನಾನು ಸಿಆರ್‌ಸಿಯಾದ ನಂತರ ಅಲ್ಪಸಂಖ್ಯಾತರ ಶಾಲೆಗಳ ಶಿಕ್ಷಕರ ಜತೆಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡು ಸರಿಯಾದ ಮಾಹಿತಿ ನೀಡುವುದರ ಜತೆಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೆನೆ.ಇದಕ್ಕೆಲ್ಲಾ ಸ್ಪೂರ್ತಿಯಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರ ಮಾರ್ಗದರ್ಶನವೇ ಕಾರಣ.ಇಷ್ಟು ವರ್ಷಗಳ ಕಾಲ ಶಿಕ್ಷಕರೊಂದಿಗೆ ಬೆರೆತ ಕ್ಷಣ ಮರೆಯುವಂತಿಲ್ಲ.ಅದರಂತೆ ಅವರ ಪ್ರೀತಿ, ಗೌರವವನ್ನು ವರ್ಣಿಸಲು ಪದಗಳಿಲ್ಲ. ಇಂತಹ ಪ್ರದೇಶದಲ್ಲಿ ಕೆಲಸ ಮಾಡಿದ ನನಗೆ ಬಿಟ್ಟು ಹೋಗಲು ನೋವಾಗುತ್ತದೆ.ಆದರೂ ಅನಿವಾರ್ಯ ಎಂದು ಹೇಳಿದರು.
ಬಿಆರ್‌ಸಿ ಮಲ್ಲಿಕಾರ್ಜುನ ಸೇಡಂ, ಇಸಿಓ ವೆಂಕಟರೆಡ್ಡಿ, ನಗರಸಭೆಯ ಸದಸ್ಯರಾದ ಸಾಬೇರಾಬೇಗಂ, ಡಾ.ಅಹ್ಮದ್ ಪಟೇಲ್,ಎಸ್‌ಡಿಎಮ್‌ಸಿ ಅಧ್ಯಕ್ಷ ಸಯ್ಯದ್ ಹುಸೇನಿ,ಸಿಆರ್‌ಸಿ ಮಹ್ಮದ್ ರಫಿಕ್, ಶಿಕ್ಷಕರ ಸಂಘದ ಪ್ರದಾನಕಾರ್ಯದರ್ಶಿ ಅಬ್ದಲ್ ಸಲೀಂ, ಮೌಲಾ ಆಜಾದ ಶಾಲೆಯ ಮುಖ್ಯಗುರುಮಾತೆ ಕೀರ್ತಿ,ಬಿಆರ್‌ಪಿ ಅಶ್ವಿನಿ ಅಗ್ನಿಹೋತ್ರಿ ಇತರರು ಇದ್ದರು.
ಇದನ್ನೂ ಓದಿ: ಸುರಪುರ: ಪಠ್ಯ ಪುಸ್ತಕ ರಚನಾ ಸಮಿತಿ ವಿರುದ್ಧ ಪ್ರತಿಭಟನೆ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…