ಇಬ್ಬರು ಮನೆಗಳ್ಳರ ಬಂಧನ: 4ಲಕ್ಷ ಮೌಲ್ಯದ ಸ್ವತ್ತು ವಶ

2
50

ಕಲಬುರಗಿ: ನಗರ ಪೊಲೀಸ ಆಯುಕ್ತಾಲಯದ ವ್ಯಾಪ್ತಿಯ ಸಬ್ ಅರ್ಬನ್ ಪೊಲೀಸರು  ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಬಂಧಿಸಿ 4 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಾಡು ಹಗಲೇ ತಲ್ವಾನಿಂದ ಯುವಕ ಓರ್ವನ ಮೇಲೆ ಮರಣಾಂತಿಕ ಹಲ್ಲೆ

Contact Your\'s Advertisement; 9902492681

ತಯ್ಯಬ್ ಮಸಜೀದ್ ಹತ್ತಿರದ ನಿವಾಸಿ ಮಹ್ಮದ್ ಸಮೀರ ಮುನಿರೊದ್ದಿನ್ ಮತ್ತು ಎಸ್.ಎಮ್ ಕಾಲೋನಿ ನಿವಾಸಿ ಮಲ್ಲಮ್ಮ ಸುರೇಶ್ ಬಂಧಿತ ಆರೋಪಿಗಳು. ಮನೆಗಳ ಚಿಲಕಾ ಮುರಿದ್ದು ಮನೆಗಳ್ಳತನ ಮಾಡುತ್ತಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ 78 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 4,00,000/- ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಪೊಲೀಸರ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರಾದ ಭಾ.ಪೊ.ಸೇ. ಡಾ.ವೈ.ಎಸ್.ರವಿಕುಮಾರ, ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ಇದನ್ನೂ ಓದಿ: ಸುರಪುರ: ಪಠ್ಯ ಪುಸ್ತಕ ರಚನಾ ಸಮಿತಿ ವಿರುದ್ಧ ಪ್ರತಿಭಟನೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here