ಬಿಸಿ ಬಿಸಿ ಸುದ್ದಿ

ಯಡಿಯಾಪುರ ಗ್ರಾಮದ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಸುರಪುರ: ಮತಕ್ಷೇತ್ರದ ಯಡಿಯಾಪುರ ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ರಾಜಾ ವೆಂಕಟಪ್ಪ ನಾಯಕ ಮಾಜಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರು ಮಾತನಾಡಿ ನನ್ನ ಅಧಿಕಾರ ಅವಧಿಯಲ್ಲಿ ಜನರ ಏಳಿಗೆಗಾಗಿ ಸಾಕಷ್ಟು ಜನಪರ ಯೋಜನೆಗಳನ್ನು ತಂದು ಕ್ಷೇತ್ರದ ಅಭಿವೃದ್ಧಿ ಪ್ರಯತ್ನಸಿದ್ದೇನೆ. ಹಾಗೂ ರೈತರ ಜಮೀನುಗಳಿಗೆ ಕಾಲುವೆ ಮುಖಾಂತರ ನೀರು ಒದಗಿಸಲು ಯೋಜೆನಯನ್ನು ಹಾಕಿಕೊಂಡು ರೈತರಪರವಾಗಿ ನಿರ್ಣಯಗಳನ್ನು ಕೈಗೊಂಡಿದ್ದೇನೆ. ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಧಿಕಾರದಲ್ಲಿ ಜನರು ನೆಮ್ಮದಿಯಿಂದ ಜೀವನಸಾಗಿಸಲಾಗುತ್ತಿಲ್ಲಾ ಮತ್ತು ಇವರ ದುರಾಡಳಿತಕ್ಕೆ ಜನರು ರೋಸಿಹೋಗಿದ್ದಾರೆ. ದಿನಬೆಳಗಾದರೆ ಯಾವುದೋ ಒಂದು ವಿವಾದವನ್ನು ಹುಟ್ಟಿಹಾಕಿ ಜನರ ದಾರಿತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

ಈ ಸರಕಾರವು ಮಕ್ಕಳ ಪಠ್ಯದಲ್ಲಿಯೂ ತಮ್ಮ ದ್ವೇಷದ ಭಾವನೆಯನ್ನು ಮೂಡಿಸಿ ಮಕ್ಕಳ ಮನಸ್ಥಿಯನ್ನು ಹದಗೆಡಿಸಲು ಮುಂದಾಗಿದೆ ಮತ್ತು ನಮ್ಮ ಹೆಮ್ಮಯ ಪ್ರಥಮ ಸ್ವಾತಂತ್ರ್ಯ ಸೇನಾನಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಪಠ್ಯಯನ್ನು ಕೈ ಬಿಟ್ಟು ನಮ್ಮ ಕಲ್ಯಾಣ ಕರ್ನಾಟಕದ ಜನರ ಭಾವನೆಗೆ ಧಕ್ಕೆಯನ್ನುಂಟು ಮಾಡುತ್ತಿದೆ ಜನಪರ ಆಡಳಿತವನ್ನು ನೀಡಲು ಸಂಪೂರ್ಣವಾಗಿ ಈ ಸರಕಾರ ವಿಫಲವಾಗಿದೆ ಇತಂಹ ದುರಾಡಳಿತದ ಕುರಿತು ನಮ್ಮ ಕಾರ್ಯಕರ್ತರು ಜನರಿಗೆ ಮನವರಿಕೆಮಾಡಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಲ್ಲಿ ಸದೃಢಗೊಳಿಸಬೇಕು ಮತ್ತು ಮುಂಬರು ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಯಡಿಯಾಪುರ ಗ್ರಾಮದ ಮುಖಂಡರಾದ ಲಿಂಗರಾಜ ಪೊಲೀಸ್ ಪಾಟೀಲ, ನಾನಾಗೌಡ ಪೊ.ಪಾಟೀಲ, ಬಸವಂತ್ರಾಯಗೌಡ ಕಾರನೂರು, ತಿಪ್ಪಣ್ಣ ಹೂವಣ್ಣ ಮೇಟಿ, ಬಂದಗಿಸಾಬ ಶೇಖಸಿಂದಿ, ಹೈಯಾಳಪ್ಪ ಮೇಟಿ, ಮಾರುತಿ ತಳಳ್ಳಿ, ಶಿವಮಾನಪ್ಪ ಹೊಸಮನಿ, ವಿರೇಶ ಬಡಿಗೇರ, ಮಾಳಪ್ಪ ಹುಣಸಿಹೊಳೆ, ಹಣಮಂತ್ರಾಯ ಕುಂಬಾರ, ನಿಂಗಪ್ಪ ಆಲಾಳ, ಕೆಂಚಪ್ಪ ತಳಳ್ಳಿ, ಮಲ್ಲಪ್ಪ ದೊಡಮನಿ, ಬೀರಪ್ಪ ಮೇಟಿ, ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತ ದೊಡಮನಿ, ಬಾಬು ದೊಡಮನಿ, ಸಾಬಪ್ಪ ದೊಡಮನಿ, ಚಂದಪ್ಪ ದೊಡಮನಿ ಸೇರಿದಂತೆ ಇನ್ನಿತರರು.

ಮುಖಂಡರಾದ ವಿಠ್ಠಲ ಯಾದವ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹು ಮುದೋಳ, ಭೀಮರಾಯ ಮೂಲಿಮನಿ, ಮಾನಪ್ಪ ದೇವತ್ಕಲ್, ಆಮನಿಂಗಪ್ಪ ಕೆರಿಹೊಲ, ಗ್ರಾಪಂ ಸದಸ್ಯ ಮಾಳಪ್ಪ, ಕನಕಾಚಲ ಜಾಗೀರದಾರ, ಮಹೇಶ ಜಾಗಿರದಾರ, ಬಸವರಾಜ ದೊರಿ, ರಾಜಶೇಖರ ನಾಯಕ, ಸಿದ್ದನಗೌಡ ಹಂದ್ರಾಳ, ಭೀಮರೆಡ್ಡಿ ಮುದ್ನೂರ ದೇವಿಂದ್ರಪ್ಪ ಮುದ್ನೂರ(ಡೆವಿಡ್), ಗ್ರಾಪಂ ಮಾಜಿ ಸದಸ್ಯ ಮಲ್ಕಪ್ಪ ಉಪಸ್ಥಿತರಿದ್ದರು

emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

16 mins ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

3 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

5 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

18 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

18 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

20 hours ago