ಕಲಬುರಗಿ: ಜಿಲ್ಲೆಯ ಅಫಜಲಪೂರು ತಾಲೂಕಿನ ಪಂಚಾಯತ್ ಸಂಭಾಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ ಕಲಬರುಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಲಬುರಗಿ, ರೂಢಾ ಸಂಸ್ಥೆ ಕಲಬುರಗಿ ರವರ ಸಂಯುಕ್ತಾಶ್ರಯದಲ್ಲಿ ಜಲ ಜೀವನ ಮಿಷನ್ ಕುರಿತು ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತು.
ಈ ತರಬೇತಿಯಲ್ಲಿ ಅಫಜಲಪೂರು ತಾಲೂಕು ಪಂಚಾಯತ್ ಸಹಾಯಕ ನಿದೇರ್ಶಕರಾದ ರಮೇಶ ಪಾಟೀಲ್ ರವರು ಸಸಿಗಳಿಗೆ ನೀರು ಎರೆಯುವ ಮೂಲಕ ತರಬೇತಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಜಲ ಜೀವನ ಮಿಷನ್ ಯೋಜನೆ ಎಲ್ಲರಿಗೂ ಅನುಕೂಲವಾಗಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ. ಅದರಲ್ಲೂ ಗ್ರಾಮ ಪಂಚಾಯತಿಗಳು, ಗ್ರಾಮಸ್ಥರು, ಸಮುದಾಯ ಮುಖಂಡರು, ಸ್ವ-ಸಹಾಯ ಗುಂಪುಗಳು ಮತ್ತು ಅನುಷ್ಠಾನ ಇಲಾಖೆಗಳು ಒಟ್ಟಾಗಿ ಸೇರಿ ಕಾರ್ಯನಿರ್ವಹಿಸಿದರೆ ಯೋಜನೆ ಯಶಸ್ವಿಯಾಗುತ್ತದೆ. ಎಂದರು.
ತರಬೇತಿಯಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಡಾ.ರಾಜು ಕಂಬಾಳಿಮಠ ರವರು ಉಪನ್ಯಾಸ ನೀಡುತ್ತಾ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮಸ್ಥರಿಗೆ, ಗ್ರಾಮ ಪಂಚಾಯತಿಗಳಿಗೆ ಕಾಲ-ಕಾಲಕ್ಕೆ ತರಬೇತಿ ನೀಡಲಾಗುತ್ತಿದೆ. ಇಂದಿನ ತರಬೇತಿಯಲ್ಲಿ ಬ್ಯಾಚ್-೨ ಮತ್ತು ಬ್ಯಾಚ್-೩ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಬಿಲ್ ಕಲ್ಕೆಟರ್ ಹಾಗೂ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರಿಗೆ ಯೋಜನೆಯ ಗುರಿ ಉದ್ದೇಶ ಮತ್ತು ಯೋಜನೆಯ ತಾಂತ್ರಿಕ ಕಾರ್ಯಚರಣೆ ಮತ್ತು ಹರ್ ಘರ್ ಜಲ್ ಘೋಷಣೆ, ಮಾಡುವ ವಿಧಾನವನ್ನು ಸುದೀರ್ಘವಾಗಿ ತಿಳಿಸಿಕೊಟ್ಟರು.
ಎರಡನೇ ಉಪನ್ಯಾಸದಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಪಾತ್ರ ಹಾಗೂ ಸಮಿತಿಗಳು ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕಾರ್ಯಚರಣೆ ಮತ್ತು ನಿರ್ವಹಣೆ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿದೇರ್ಶಕರಾದ ಶಿವಾನಂದ ಪವಾರ ರವರು ತಿಳಿಸಿಕೊಟ್ಟರು.
ಮೂರನೇ ಉಪನ್ಯಾಸದಲ್ಲಿ ಯೋಜನೆಯಲ್ಲಿ ಸಮುದಾಯ ವಂತಿಕೆ ಸಂಗ್ರಹಣೆಗೆ ಬಿಲ್ ಕಲೆಕ್ಟರ್ ಹಾಗೂ ಗ್ರಾಮ ಪಂಚಾಯತಿಗಳ ಪಾತ್ರವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿದೇರ್ಶಕರಾದ ಶರಣಬಸವ ಮುಗಳಿ ರವರು ತಿಳಿಸಿಕೊಟ್ಟರು.
ನಾಲ್ಕನೇ ಉಪನ್ಯಾಸದಲ್ಲಿ ಪ್ರತಿ ಗ್ರಾಮ ಪಂಚಾಯತಿಗಳಿಗೆ ಪ್ರತಿ ೬ ತಿಂಗಳಿಗೊಮ್ಮೆ ಕುಡಿಯುವ ನೀರಿನ ಜಲ ಮೂಲಗಳನ್ನು ಗ್ರಾಮಗಳಲ್ಲಿ ಪರೀಕ್ಷೆ ಮಾಡಲು ಎಫ್.ಟಿ.ಕೆ (ನೀರು ಪರೀಕ್ಷಿಸುವ ಕಿಟ್)ನ್ನು ಕೊಟ್ಟಿದ್ದು ಆ ಕಿಟ್ ಮೂಲಕ ಗ್ರಾಮದಲ್ಲಿ ನೀರು ಪರೀಕ್ಷೆ ಮಾಡುವ ವಿಧಾನ ಹಾಗೂ ಅದಕ್ಕೆ ಪ್ರತಿ ಗ್ರಾಮದಿಂದ ೫ ಜನ ಮಹಿಳೆಯರ ನೊಂದಣಿ ಮಾಡುವ ವಿಧಾನವನ್ನು ಹಾಗೂ ಕಲುಷಿತ ನೀರಿನಿಂದಾಗುವ ದುಷ್ಪಾರಿಣಾಮಗಳ ಕುರಿತು ರೂಢಾ ಸಂಸ್ಥೆಯ ಕಲಬುರಗಿ ಸಂಯೋಜಕರಾದ ದೇವಾನಂದ ರವರು ತಿಳಿಸಿಕೊಟ್ಟರು.
೫ನೇ ಉಪನ್ಯಾಸದಲ್ಲಿ ರೂಢಾ ಸಂಸ್ಥೆಯ ಕಲಬುರಗಿ ತಂಡದ ನಾಯಕರಾದ ಸಂತೋಷ ಮೂಲಗೆ ರವರು ಯೋಜನೆಯಡಿ ಬರುವ ಸಾಧಕ-ಬಾಧಕ ಹಾಗೂ ಘನ ಮತ್ತು ದ್ರವ ತ್ಯಾಜ ಹಾಗೂ ನೈರ್ಮಲಿಕರಣದ ಕುರಿತು ತಿಳಿಸಿಕೊಟ್ಟರು.
ಕಾರ್ಯಾಗಾರದ ಮೊದಲಿಗೆ ಅಡವಿ ಸಿದ್ದೇಶ್ವರ ಸಂಸ್ಥೆಯ ಐಎಸ್‌ಆರ್ ತಂಡದ ನಾಯಕರಾದ ರಾಜಶೇಖರ ರವರು ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಫಜಲಪೂರು ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವರಾಜ ಕುಮಾರ ಹಾಗೂ ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಪ್ರಶಾಂತ ರವರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…