ಬೆಂಗಳೂರು, ಜುಲೈ 2, 2022: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಕರ್ನಾಟಕದಲ್ಲಿ ಸಪ್ಲೈ ಚೇನ್ ಆಪರೇಷನ್ಸ್ ಅಕಾಡೆಮಿ(ಎಸ್ ಸಿಒಎ) ಉಪಕ್ರಮಗಳನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ(ಕೆಎಸ್ ಡಿಸಿ) ಜೊತೆ ಇಂದು ಒಪ್ಪಂದಕ್ಕೆ ಸಹಿ ಹಾಕಿದೆ. ನುರಿತ ಸಪ್ಲೈ ಚೇನ್ ಕಾರ್ಯನಿರ್ವಹಣೆಗಳ ಪ್ರತಿಭೆಗಳನ್ನು ಸಿದ್ಧಪಡಿಸಲು ಈ ಅಕಾಡೆಮಿ ನೆರವಾಗಲಿದೆ ಮತ್ತು ಸಂಬಂಧಿತ ಉದ್ಯಮ ತರಬೇತಿ ಹಾಗೂ ಜ್ಞಾನವನ್ನು ನೀಡಲಿದೆ. ಕೌಶಲ್ಯದ ಕೊರತೆಯ ಅಂತರವನ್ನು ಕಡಿಮೆ ಮಾಡುವುದಲ್ಲದೇ, ದೇಶದಲ್ಲಿ ಸಪ್ಲೈ ಚೇನ್ ಉದ್ಯಮದಲ್ಲಿ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ನೆರವಾಗಲಿದೆ.
ಇಂಡಸ್ಟ್ರಿ ಕನೆಕ್ಟ್ ಕಾನ್ ಕ್ಲೇವ್-ಲಾಜಿಸ್ಟಿಕ್ಸ್ ಸೆಕ್ಟರ್ ನಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ, ಐಟಿ & ಬಿಟಿ, ವಿಜ್ಞಾನ & ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ & ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ & ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮತ್ತು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದಂತೆ ಫ್ಲಿಪ್ ಕಾರ್ಟ್ ಮತ್ತು ಕೆಎಸ್ ಡಿಸಿ ಒಟ್ಟಾಗಿ ರಾಜ್ಯದಲ್ಲಿ ಯುವ ಸಮುದಾಯ ಒಟ್ಟುಗೂಡಿಸಿ ಸೂಕ್ತ ತರಬೇತಿಯನ್ನು ನೀಡಲಿವೆ.
ಕಳೆದ ವರ್ಷದ ಅಕ್ಟೋಬರ್ ನಲ್ಲಿ ಎಸ್ ಸಿಒಎ ಅಡಿಯಲ್ಲಿ ಆರಂಭಿಸಲಾದ ಈ ತರಬೇತಿ ಕಾರ್ಯಕ್ರಮವನ್ನು ಫ್ಲಿಪ್ ಕಾರ್ಟ್ ನ ನುರಿತ ಪರಿಣತ ತಜ್ಞರು ವಿನ್ಯಾಸಗೊಳಿಸಿದ್ದಾರೆ. ಈ ತಂಡವು ಅಭ್ಯರ್ಥಿಗಳಿಗೆ ಸಮಗ್ರ ಅನುಭವ ಮತ್ತು ತರಬೇತಿಯನ್ನು ನೀಡುತ್ತದೆ. ಇದು ಫ್ಲಿಪ್ ಕಾರ್ಟ್ ನ ಸಪ್ಲೈ ಚೇನ್ ಸೌಲಭ್ಯಗಳಲ್ಲಿ 15 ದಿನಗಳ ಡಿಜಿಟಲ್ ತರಗತಿ ತರಬೇತಿ ಮತ್ತು 45 ದಿನಗಳ ಉದ್ಯೋಗದ ತರಬೇತಿಯನ್ನು ಒಳಗೊಂಡಿರುತ್ತದೆ. ಇ-ಕಾಮರ್ಸ್ ಪೂರೈಕೆ ಸರಪಳಿಯ ವಿವಿಧ ಅಂಶಗಳು, ಪೂರೈಕೆ ಸರಪಳಿಯೊಂದಿಗಿನ ಪಾತ್ರಗಳು, ಕೌಶಲ್ಯಗಳು, ಸುರಕ್ಷತೆ ಮತ್ತು ಪಾಲನೆ ಮಾಡುವ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇದು ಒಟ್ಟು 60 ದಿನಗಳ ಕೌಶಲ್ಯ ತರಬೇತಿಯಾಗಿದ್ದು. ಸಪ್ಲೈ ಚೇನ್ ನಿರ್ವಹಣೆಯ ವಿವಿಧ ಅಂಶಗಳಲ್ಲಿ ವೃತ್ತಿ ಜೀವನವನ್ನು ನಿರ್ಮಾಣ ಮಾಡಲು ಹಾಗೂ ಅವರ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವಂತೆ ಮಾಡುತ್ತದೆ.
ಫ್ಲಿಪ್ ಕಾರ್ಟ್ ನ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಂ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ನೀಡಲಾಗುತ್ತದೆ. ಇದು ಕಲಿಕೆಯ ಕಾರ್ಯಕ್ರಮಗಳಿಗೆ ಆನ್ ಲೈನ್ ಪ್ಲಾಟ್ ಫಾರ್ಮ್ ಆಗಿದೆ. ಇಲ್ಲಿ ವಿದ್ಯಾರ್ಥಿಗಳು ಪ್ರಮುಖ ಉದ್ಯಮ ತಜ್ಞರು ಅಭಿವೃದ್ಧಿಪಡಿಸಿದ ಕೋರ್ಸ್ ಗಳ ಮೂಲಕ ವೈವಿಧ್ಯಮಯ ಕೌಶಲ್ಯಗಳನ್ನು ಕಲಿಯಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಫ್ಲಿಪ್ ಕಾರ್ಟ್ ನ ಚೀಫ್ ಪೀಪಲ್ ಆಫೀಸರ್ ಕೃಷ್ಣ ರಾಘವನ್ ಅವರು, ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ನಮ್ಮ ದೇಶದಲ್ಲಿ 35 ವರ್ಷಕ್ಕಿಂತ ಕಡಿಮೆ ಇರುವ ಯುವ ಸಮುದಾಯದ ಜನಸಂಖ್ಯೆ ಗಣನೀಯ ಮಟ್ಟದಲ್ಲಿದೆ. ಈ ಯುವ ಜನಸಂಖ್ಯೆಯು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಮತ್ತು ಅವರ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಲು ಸಮರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಉದ್ಯಮ ಬೆನ್ನೆಲುಬಾಗಿರುವ ಇ-ಕಾಮರ್ಸ್ ಲಾಜಿಸ್ಟಿಕ್ಸ್, ಉದ್ಯೋಗಾಕಾಂಕ್ಷಿಗಳಿಗೆ, ವಿಶೇಷವಾಗಿ ಸಪ್ಲೈ ಚೇನ್ ನಲ್ಲಿ ಬಹುಸಂಖ್ಯೆಯ ಅವಕಾಶಗಳನ್ನು ಒದಗಿಸುವ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಫ್ಲಿಪ್ ಕಾರ್ಟ್ ದೇಶದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿದ್ದು, ನಮ್ಮ ಟೆಕ್-ಶಕ್ತಗೊಂಡ ಆಧುನಿಕ ಸಪ್ಲೈ ಚೇನ್ ಮೂಲಕ ಅಭ್ಯರ್ಥಿಗಳ ಉದ್ಯೋಗಾವಕಾಶವನ್ನು ಹೆಚ್ಚಿಸಲು ಅಗತ್ಯವಾದ ಕೌಶಲ್ಯ ಸೆಟ್ ಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಸಪ್ಲೇ ಚೇನ್ ಆಪರೇಷನ್ಸ್ ಅಕಾಡೆಮಿಯ ಮೂಲಕ ಉದ್ಯೋಗಿಗಳ ಅಭಿವೃದ್ಧಿಗಾಗಿ ಆನ್ ಲೈನ್ ಮತ್ತು ಉದ್ಯೋಗದ ತರಬೇತಿಯ ವಿವೇಚನಾಯುಕ್ತ ಮಿಶ್ರಣವನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ’’ ಎಂದು ತಿಳಿಸಿದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ಚಿನ್ ಗೌಡ ಅವರು ಮಾತನಾಡಿ, “ಕೌಶಲ ಅಭಿವೃದ್ಧಿ ಮತ್ತು ಕೌಶಲಗಳ ಪ್ರಮಾಣೀಕರಣವು ಔಪಚಾರಿಕ ಆರ್ಥಿಕತೆಯಲ್ಲಿ ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಅಗತ್ಯವಾಗಿದೆ. ಭಾರತದಲ್ಲಿ ಲಾಜಿಸ್ಟಿಕ್ಸ್ ಉದ್ಯಮವು ದೇಶದ ಪ್ರಮುಖ ಉದ್ಯೋಗ ತಾಣವಾಗಿ ಹೊರಹೊಮ್ಮುತ್ತಿದೆ. ಆದರೆ, ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕೌಶಲ್ಯಪೂರ್ಣವಾದ ಮಾನವ ಶಕ್ತಿಯ ಕೊರತೆ ಎದುರಾಗಿದೆ.
ಈ ನಿಟ್ಟಿನಲ್ಲಿ ಸ್ವದೇಶಿ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್ ಕಾರ್ಟ್, ಈ ಸಪ್ಲೈ ಚೇನ್ ಆಪರೇಷನ್ಸ್ ಅಕಾಡೆಮಿಯನ್ನು ಆರಂಭ ಮಾಡಿ ಸಂಬಂಧಿತ ಉದ್ಯಮ ತರಬೇತಿಯನ್ನು ನೀಡಲು ಪಾಲುದಾರಿಕೆಯನ್ನು ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ. ನುರಿತ ಮತ್ತು ಕೌಶಲ್ಯರಹಿತವಾದ ಉದ್ಯೋಗಿಗಳ ತರಬೇತಿ ಮತ್ತು ಅಭಿವೃದ್ಧಿ ಅಗತ್ಯತೆಗಳಿಗೆ ಕೊಡುಗೆ ನೀಡಲು ಹಾಗೂ ಅವರನ್ನು ಉದ್ಯಮ-ಸಿದ್ಧರನ್ನಾಗಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ತೋರುತ್ತಿರುವ ಬದ್ಧತೆಯನ್ನು ನಾವು ಪ್ರಶಂಸಿಸುತ್ತೇವೆ’’ ಎಂದರು.
ಇತ್ತೀಚಿನ ಬಿಸಿಜಿ ಮತ್ತು ಡೆಲ್ ಫೌಂಡೇಶನ್ ಅಧ್ಯಯನದ ಪ್ರಕಾರ, ಗಿಗ್ ಆರ್ಥಿಕತೆಯು ಭಾರತದ ಕೃಷಿಯೇತರ ಕ್ಷೇತ್ರದಲ್ಲಿ 90 ಮಿಲಿಯನ್ ಉದ್ಯೋಗಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ದೀರ್ಘಾವಧಿಯಲ್ಲಿ ದೇಶದ ಜಿಡಿಪಿಗೆ 1.5 % ರಷ್ಟು ಹೆಚ್ಚು ಕೊಡುಗೆಯನ್ನು ನೀಡುತ್ತದೆ. ಸಪ್ಲೈ ಚೇನ್ ನಿರ್ವಹಣೆಯ ವಿವಿಧ ಅಂಶಗಳಲ್ಲಿ ನುರಿತ ಪ್ರತಿಭಾನ್ವಿತ ವ್ಯಕ್ತಿಗಳ ಜಾಲವನ್ನು ನಿರ್ಮಿಸಲು ವಿಶೇಷವಾಗಿ ಇ-ಕಾಮರ್ಸ್ ಲಾಜಿಸ್ಟಿಕ್ಸ್ ಜಾಗದಲ್ಲಿ ದೊಡ್ಡ ಪ್ರಮಾಣದ ಕೌಶಲ್ಯ ಮತ್ತು ಕೌಶಲ್ಯ ಉಪಕ್ರಮಗಳ ಅಗತ್ಯವಿರುತ್ತದೆ ಹಾಗೂ ಈ ದಿಸೆಯಲ್ಲಿ ಫ್ಲಿಪ್ ಕಾರ್ಟ್ ನ ಸಪ್ಲೈ ಚೇನ್ ಆಪರೇಷನ್ ಅಕಾಡೆಮಿಯು ಈ ಪ್ರಯತ್ನವನ್ನು ಸಕ್ರಿಯಗೊಳಿಸುವ ಗುರಿಯನ್ನು ಹಾಕಿಕೊಂಡಿದೆ.
ಕೌಶಲ್ಯ ಉಪಕ್ರಮದ ಮೊದಲ ಹಂತದಲ್ಲಿ ಫ್ಲಿಪ್ ಕಾರ್ಟ್, ಬಿಹಾರ, ದೆಹಲಿ, ಹರ್ಯಾಣ, ಜಾರ್ಖಂಡ್, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮಬಂಗಾಳ ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿ. ಈ ವಿದ್ಯಾರ್ಥಿಗಳು ಆನ್ ಲೈನ್ ತರಬೇತಿಯನ್ನು ಪಡೆದಿದ್ದು, ಆನ್-ದಿ-ಜಾಬ್ ತರಬೇತಿಯನ್ನೂ ಪಡೆದಿದ್ದಾರೆ. ಈ ತರಬೇತಿ ಅವಧಿಯಲ್ಲಿ ಅತ್ಯುತ್ತಮ ಪ್ರತಿಭೆಯನ್ನು ತೋರಿದ ವಿದ್ಯಾರ್ಥಿಗಳನ್ನು ಪಟ್ಟಿ ಮಾಡಿ ಅವರಿಗೆ ದೇಶಾದ್ಯಂತ ಪೂರ್ಣಪ್ರಮಾಣದ ಸಪ್ಲೈ ಚೇನ್ ನಲ್ಲಿ ಉದ್ಯೋಗಾವಾಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೂ ಮುನ್ನ, ಅಂದರೆ ಮೇ ತಿಂಗಳಲ್ಲಿ ಕಂಪನಿಯು ಪಶ್ಚಿಮ ಬಂಗಾಳ ಸರ್ಕಾರದ ತಾಂತ್ರಿಕ ಶಿಕ್ಷಣ, ತರಬೇತಿ & ಕೌಶಲ್ಯಾಭಿವೃದ್ಧಿ ಇಲಾಖೆಯ ಪಶ್ಚಿಮ್ ಬಂಗಾ ಸೊಸೈಟಿ ಫಾರ್ ಸ್ಕಿಲ್ ಡೆವಲಪ್ಮೆಂಟ್ (ಪಿಬಿಎಸ್ಎಸ್ ಡಿ) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಎಸ್ ಸಿಒಎ ಮೂಲಕ ಸಂಬಂಧಿತ ಉದ್ಯಮ ತರಬೇತಿ ಮತ್ತು ಜ್ಞಾನವನ್ನು ನೀಡಲಿದೆ.
ಕಳೆದ ಹಲವು ವರ್ಷಗಳಲ್ಲಿ ಫ್ಲಿಪ್ ಕಾರ್ಟ್ ದೇಶಾದ್ಯಂತ ವಿವಿಧ ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡು ಸಾವಿರಾರು ಅಭ್ಯರ್ಥಿಗಳಿಗೆ ತನ್ನ ಸಪ್ಲೈ ಚೇನ್ ನಲ್ಲಿ ತರಬೇತಿಯನ್ನು ನೀಡಿದೆ. ಈ ಮೂಲಕ ಅವರ ವೃತ್ತಿಯಲ್ಲಿ ಕೌಶಲ್ಯವನ್ನು ಹೆಚ್ಚು ಮಾಡಿಕೊಳ್ಳಲು ನೆರವಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…