ಟ್ರೈಕೋಡರ್ಮಾ ವಿವಿಧ ಬೆಳೆಗಳ ಬೇರು ವ್ಯಾಪ್ತಿಯಲ್ಲಿ ಬೆಳೆದು, ಮಣ್ಣಿನಿಂದ ಹರಡುವ ರೋಗಗಳನ್ನು ಜೈವಿಕವಾಗಿ ಸಮರ್ಪಕ ರೀತಿಯಲ್ಲಿ ಹತೋಟಿ ಮಾಡುವ ಸಾಮರ್ಥ್ಯವುಳ್ಳ ಉಪಯುಕ್ತವಾದ ಶಿಲೀಂದ್ರ ಜೀವಿ. ಸರ್ವೆಸಾಮಾನ್ಯವಾಗಿ ಟೈಕೋಡರ್ಮಾ ವಿರಿಡೆ, ಟ್ರೈಕೋಡರ್ಮಾ ಹಾರ್ಜಿಯಾನಮ್ ಮತ್ತುಟ್ರೈಕೋಡರ್ಮಾ ಕೋನಿಂಗಿ ಎಂಬ ಪ್ರಬೇಧಗಳನ್ನು ವ್ಯಾಪಕವಾಗಿ ವಾಣಿಜ್ಯ ಮಟ್ಟದಲ್ಲಿ ಉತ್ಪಾದನೆಗೊಳಿಸಿ ಸಸ್ಯ ರೋಗಗಳ ಹತೋಟಿಗೆ ಬಳಸಲಾಗುತ್ತದೆ.
ಈ ಉಪಯೋಗಿ ಶಿಲೀಂಧ್ರವು ಮಣ್ಣಿನಲ್ಲಿ ಬೆಳೆದು ಬೇರಿನ ಸುತ್ತಲೂಒಂದು ಪ್ರಬಲ ರಕ್ಷಣಾಕವಚವನ್ನು ನಿರ್ಮಿಸಿ ಹಾನಿಕಾರಕ ಶಿಲೀಂಧ್ರಗಳನ್ನು ನಾಶಪಡಿಸಿ, ಬೆಳೆಗೆ ಸಮರ್ಪಕವಾಗಿಆಹಾರ ಮತ್ತು ನೀರು ಸರಬರಾಜು ಮಾಡಲು ಸಹಕರಿಸುತ್ತದೆ.ಈ ಜೈವಿಕ ಶಿಲೀಂಧ್ರ್ರವು ಮಣ್ಣಿನಲ್ಲಿಇತರೆ ಹಾನಿಕಾರಕ ಸೂಕ್ಷ್ಮಾಣು ಜೀವಿಗಳಿಗಿಂತ ಅತೀ ವೇಗವಾಗಿ ಬೆಳೆದು ಬೇರು ಮತ್ತು ಮಣ್ಣಿನ ಕಣಗಳ ಸುತ್ತಲೂ ಹರಡುತ್ತದೆ.ಇದರಿಂದ ಪರೋಪಜೀವಿ ಹಾಗೂ ಹಾನಿಕಾರಕ ಶಿಲೀಂಧ್ರಕ್ಕೆ ಸ್ಥಳ ಹಾಗೂ ಆಹಾರದಅಭಾವಉಂಟಾಗುತ್ತದೆ.
ಇದಲ್ಲದೆ, ಟ್ರೈಕೋಡರ್ಮಾ ಬೆಳೆಯುವ ಹಂತದಲ್ಲಿ ಟ್ರೈಕೋಡರ್ಮಿನ್ ಆಂಟಿ ಬಯಾಟಿಕ್ ಕಿಣ್ವಗಳನ್ನು ಬಿಡುಗಡೆ ಮಾಡುವುದರಿಂದರೋಗಾಣುವನ್ನು ಯಶಸ್ವಿಯಾಗಿ ನಿಯಂತ್ರಿಸುತ್ತದೆ. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಬರುವ ರೋಗಗಳನ್ನು ಜೈವಿಕವಾಗಿ ಹತೋಟಿ ಮಾಡುವಲ್ಲಿ ಬಹುಪಯೋಗಿ ಶಿಲೀಂಧ್ರವಾದ ಟ್ರೈಕೊಡರ್ಮಾ ಮಹತ್ತರ ಪಾತ್ರವಹಿಸಿದೆ.
ಏಕದಳ, ದ್ವಿಧಳ, ಎಣ್ಣೆಕಾಳು, ತರಕಾರಿ, ಹೂ-ಹಣ್ಣು, ತೋಟಗಾರಿಕಾ ಬೆಳೆಗಳಲ್ಲಿ ಟ್ರೈಕೋಡರ್ಮಾಜೈವಿಕ ಶಿಲೀಂಧ್ರವನ್ನು ವಿವಿಧ ವಿಧಾನಗಳಲ್ಲಿ ಬಳಸಲಾಗುತ್ತದೆ.
ಬೀಜೋಪಚಾರ: ಪ್ರತಿ ಕಿಲೋ ಬಿತ್ತನೆ ಬೀಜಕ್ಕೆ ೫ ರಿಂದ ೧೦ ಗ್ರಾಂ. ಟ್ರೈಕೋಡರ್ಮಾಜೈವಿಕ ನಿಯಂತ್ರಕ ಪುಡಿಯನ್ನು ೧೦ ಮೀ.ಲೀ. ನೀರಿನೊಂದಿಗೆ ಬೆರೆಸಿ ಬೀಜೋಪಚಾರಕ್ಕಾಗಿ ಬಿತ್ತನೆಗಿಂತ ನಾಲ್ಕು ತಾಸುಗಳ ಮುಂಚಿತವಾಗಿ ಮಾಡಲಾಗುತ್ತದೆ. ಹೀಗೆ ಬೀಜೋಪಚರಿಸಿದ ಬೀಜಗಳನ್ನು ನೆರಳಿನಲ್ಲಿ ೫ ತಾಸುಗಳ ವರೆಗೆ ಒಣಗಿಸಿ ನಂತರ ಬಿತ್ತನೆಗೆಉಪಯೋಗಿಸಬೇಕು.
ಮಣ್ಣಿಗೆ ಬೆರೆಸುವ ವಿಧಾನ: ಬಿತ್ತನೆ ಮಾಡುವಾಗ ಕೃಷಿ ಬೆಳೆಗಳಿಗೆ ಬಳಸಲು ಎರಡು ಕಿಲೋ ಟ್ರೈಕೋಡರ್ಮಾಜೈವಿಕ ಪುಡಿಯನ್ನು ಸಾಣಿಸಿದ ತಿಪ್ಪೆಗೊಬ್ಬರದಲ್ಲಿ ಬೆರೆಸಿ ಭೂಮಿಗೆ ಸೇರಿಸಿದಲ್ಲಿ ಮಣ್ಣಿನಿಂದ ಬರುವ ರೋಗಾಣುಗಳನ್ನು ಹತೋಟಿ ಮಾಡಬಹುದು.
ಗಿಡಗಳಿಗೆ ಬಳಸುವ ವಿಧಾನ: ಬೇರುವ್ಯಾಪ್ತಿಯ ಅನುಕೂಲಕ್ಕೆ ತಕ್ಕಂತೆ ವಿವಿಧ ಬೆಳೆಗಳಲ್ಲಿ ಇದನ್ನು ಬಳಸಲಾಗುತ್ತದೆ. ಹಣ್ಣಿನ ಗಿಡಗಳಿಗೆ ೧೦-೧೫ ಗ್ರಾಂ.,ತೋಟಗಾರಿಕಾ ಬೆಳೆಗಳಿಗೆ ೫೦-೧೦೦ ಗ್ರಾಂ., ತರಕಾರಿ ಬೆಳೆಗಳಿಗೆ ೨೫-೫೦ ಗ್ರಾಂ. ಜೈವಿಕ ಪುಡಿಯನ್ನು ೫ ಕಿಲೋ ಗ್ರಾಂ. ತಿಪ್ಪೆಗೊಬ್ಬರಅಥವಾಕಾಂಪೋಸ್ಟ್‌ಗೊಬ್ಬರದಲ್ಲಿ ಬೆರೆಸಿ ನಂತರ ಗಿಡಗಳ ಸುತ್ತಲೂಉಂಗುರುಆಕಾರದಲ್ಲಿ ಹಾಕಿ ಮಣ್ಣಿನಿಂದ ಮುಚ್ಚಿತೇವಾಂಶಕಾಪಾಡಲು ಸಹಕಾರಿಯಾಗುವಷ್ಟುಅಲ್ಪ ಪ್ರಮಾಣದಲ್ಲಿ ನೀರು ಹಾಯಿಸಬೇಕು.
ಸಸಿ ಮಡಿಗಳಲ್ಲಿ ಬಳಸುವ ವಿಧಾನ: ೫೦೦ ಗ್ರಾಂಟ್ರೈಕೋಡರ್ಮಾ ಪುಡಿಯನ್ನು ೫೦ ಲೀಟರ್ ನೀರಿನಲ್ಲಿ ಬೆರೆಸಿ ೧೦ ಗುಂಟೆ ಪ್ರದೇಶದ ಸಸಿ ಮಡಿಗಳಲ್ಲಿ ಬೀಜ ಬಿತ್ತನೆ ಮಾಡಿದಕೂಡಲೇ ಮಣ್ಣಿನ ಮೇಲೆ ಸಿಂಪಡಿಸಬಹುದುಅಥವಾ ೫೦ ಗ್ರಾಂ. ಟ್ರೈಕೋಡರ್ಮಾವನ್ನು ೨ಘಿ೪ ಮೀಟರ್ ಅಳತೆಯ ಸಸಿ ಮಡಿತಯಾರಿ ವೇಳೆ ಮಣ್ಣಿಗೆ ಸೇರಿಸಬಹುದು.
ದ್ರಾವಣ ರೂಪದ ಟ್ರೈಕೋಡರ್ಮಾ ಬಳಸುವ ವಿಧಾನ: ಈ ರೂಪದ ಸಿಂಪರಣೆಯ ಕನಿಷ್ಠ ೫-೬ ದಿವಸ ಮುಂಚೆ ಹಾಗೂ ನಂತರ ವೇಳೆ ಅಂತರವ್ಯಾಪಿ ರಾಸಾಯನಿಕ ಔಷಧಿಗಳ ಸಿಂಪರಣೆಯನ್ನು ಕೈಗೊಳ್ಳಬಾರದು.ನೀರಿನಂಶವುಳ್ಳ ಹಣ್ಣಿನ ಬೆಳೆಗಳಾದ ಸೇಬು, ದ್ರಾಕ್ಷಿ, ಸೀಬೆ, ಪಪಾಯಇತ್ಯಾದಿ ಹಣ್ಣುಗಳನ್ನು ಬಿಡಿಸುವಎರಡು ದಿವಸದಗಳ ಮುಂಚೆ ೫ ಮಿ.ಲೀ. ಟ್ರೈಕೋಡರ್ಮಾಯುಕ್ತದ್ರಾವಣವನ್ನುಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸುವುದರಿಂದ ಸಾಗಾಣಿಕೆ ಹಂತದಲ್ಲಿ ಹಣ್ಣುಗಳನ್ನು ಕೆಲ ದಿನಗಳವರೆಗೆ ಕೆಡದಂತೆರಕ್ಷಿಸಬಹುದು.
ಕಾಂಪೋಸ್ಟ್ ತಯಾರಿಸಲು ಬಳಸುವ ವಿಧಾನ: ಒಂದುಕ್ವಿಂಟಾಲ್ ಸಾವಯವ ಅಂಶವುಳ್ಳ ಪದಾರ್ಥಅಥವಾಕಾಂಪೋಸ್ಟ್‌ಗೆ ಒಂದು ಕಿಲೋ ಗ್ರಾಂ. ಟ್ರೈಕೋಡರ್ಮಾವನ್ನು ಪದರ ಪದರ ವಾಗಿ ಬೆರೆಸಿ ಇಪ್ಪತ್ತು ದಿನಗಳ ನಂತರ ಕೃಷಿ ಭೂಮಿಗೆ ಬಳಸಬಹುದಾಗಿದೆ. ಈ ಹಂತದಲ್ಲಿಕಂಪೋಸ್ಟ್‌ಗುಂಡಿಯತ್ಯಾಜ್ಯವು ಕನಿಷ್ಠ ತೇವಾಂಶ ಹೊಂದಿರಬೇಕು.
ಬೇವಿನ ಎಣ್ಣೆ ತೆಗೆದ ೧೦೦ ಕಿಲೋ ಗ್ರಾಂ ಹಿಂಡಿಯನ್ನು ೨ ಕಿಲೋ ಗ್ರಾಂ. ಟ್ರೈಕೋಡರ್ಮಾವನ್ನು ಬೆರೆಸಿ ಮಣ್ಣಿನಲ್ಲಿರುವ ಜಂತು ಹುಳು, ಗೆದ್ದಲು ಮತ್ತು ಗೊಣ್ಣೆ ಹುಳುಗಳನ್ನು ತಡೆಯಲು ಮಣ್ಣಿನಲ್ಲಿ ಸೇರಿಸಬೇಕು. ಇದು ಶೇ. ೨. ಸಾರಜನಕ ಶೇ. ೧.೦ ರಂಜಕ, ಶೇ. ೨-೩ ಪೋಟ್ಯಾಷ್ ಹೊಂದಿರುವುದುರಿಂದ ಉತ್ತಮ ಸಾವಯವ ಗೊಬ್ಬರವಾಗುವುದು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…