ಪ್ರಜಾತಂತ್ರದ ವಿನಾಶ ತಡೆಗೆ ಪ್ರೊ. ಆರ್.ಕೆ ಹುಡುಗಿ ಕರೆ

ಕಲಬುರಗಿ: ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಬದುಕು- ಬರಹವನ್ನು ವಿಭಿನ್ನವಾಗಿ, ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ಮಹಾರಾಷ್ಟ್ರದ ಡಾ. ಆನಂದ ತೇಲ್ತುಂಬ್ಡೆಯವರನ್ನು ದೇಶದ್ರೋಹದ ಆರೋಪದ ಅಡಿಯಲ್ಲಿ ಕಳೆದ ಎರಡುವರೆ ವರ್ಷದಿಂದ ಜೈಲುವಾಸ ಅನುಭವಿಸುತ್ತಿರುವುದು ದುಃಖದ ಸಂಗತಿ ಎಂದು ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಅಭಿಪ್ರಾಯಪಟ್ಟರು.

ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ಸಂವಿಧಾನ ಮತ್ತು ಅಂಬೇಡ್ಕರ್ ಆಶಯದ ಹೊಸ ಸಾಂಸ್ಕೃತಿಕ ಚಳವಳಿ ಕರ್ನಾಟಕ ಇವುಗಳ ಆಶ್ರಯದಲ್ಲಿ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಅಂಬೇಡ್ಕರ್ ಚಿಂತನೆಯ ಪ್ರವರ್ತಕ ಸಂವಿಧಾನ ವಿರೋಧಿ ಸರ್ಕಾರದ ಪಿತೂರಿಗೆ ಡಾ. ಆನಂದ ತೇಲ್ತುಂಬ್ಡೆ ೭೨ನೇ ಜನ್ಮ ದಿನ ಮತ್ತು ಇತರರ ಬಿಡುಗಡೆಗೆ ಒತ್ತಾಯಿಸಿ ಆಯೋಜಿಸಿದ್ದ ನೆಲದ- ಧ್ವನಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸಂವೇದನೆ, ಪ್ರಜ್ಞೆ, ಮಾನವೀತೆ ಕಳೆದುಕೊಂಡಿರುವ ಇಂದಿನ ದಿನ ಮಾನಗಳಲ್ಲಿ ತೇಲ್ತುಂಬ್ಡೆ ಭರವಸೆಯ ತತ್ವಜ್ಞಾನಿಯಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಕಟ್ಟಡ ಕಾರ್ಮಿಕರಿಗೆ ಸುರಕ್ಷತೆ ಸೌಲಭ್ಯ, ವಸತಿ ಯೋಜನೆ ಜಾರಿಗೆ ಆಗ್ರಹಿಸಿ ಮನವಿ

ಭಯದ ವಾತಾವರಣದಲ್ಲಿ ಮುಳುಗುತ್ತಿರುವ ನಾವುಗಳು ಸಂವಿಧಾನಕ್ಕೆ ಬದ್ಧರಾಗಿ, ಪರವಾಗಿ ಹೋರಟ ಮಾಡಬೇಕಾಗುತ್ತದೆ. ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಸಮಾನತೆಗೆ ಹೋರಾಡಿದವರು ದೇಶ ವಿರೋಧಿಗಳಾಗುತ್ತಿರುವ ಪ್ರಜಾಪ್ರಭುತ್ವ ದೇಶದ ದುರಂತ ಎಂದು ಬಣ್ಣಿಸಿದರು.

ಡಾ. ಮೆರಾಜ್ ಪಟೇಲ್, ಮಲ್ಲೇಶಿ ಸಜ್ಜನ್, ಜಿ.ಕೆ. ಗೋಖಲೆ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ನ್ಯಾಯವಾದಿ ಬಸಣ್ಣ ಸಿಂಗೆ ಅಧ್ಯಕ್ಷತೆ ವಹಿಸಿದ್ದರು. ಗೌರವ ಉಪಸ್ಥಿತರಿದ್ದ ರಮಾತಾಯಿ ಡಾ. ಆನಂದ ತೇಲ್ತುಂಬ್ಡೆ (ಡಾ. ಅಂಬೇಡ್ಕರ್ ಅವರ ಮೊಮ್ಮಗಳು) ತಮ್ಮ ಅನುಭವ ಹಂಚಿಕೊಂಡರು.

ನಿವೃತ್ತ ಅಧಿಕಾರಿ ಮಾರುತಿ ಗೋಖಲೆ ತೇಲ್ತುಂಬ್ಡೆಯವರ ಜೀವನ ಮತ್ತು ಹೋರಾಟವನ್ನು ಪರಿಚಯಿಸಿದರು. ದೇವೇಂದ್ರ ಹೆಗ್ಗಡೆ ಪ್ರಾಸ್ತಾವಿಕ ಮಾತನಾಡಿದರು. ಎಸ್.ಪಿ. ಸುಳ್ಳದ ನಿರೂಪಿಸಿದರು. ಸುರೇಶ ಮೆಂಗನ್ ಸ್ವಾಗತಿಸಿದರು. ಅಲ್ಲಮಪ್ರಭು ನಿಂಬರ್ಗಾ ವಂದಿಸಿದರು.

ಇದನ್ನೂ ಓದಿ: ನೌಕರರ ಶಸ್ತ್ರ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲು ಆದೇಶಿಸಿದಕ್ಕೆ ಸ್ವಾಗತ

ನಂತರ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಡಾ.‌ಅಪ್ಪಗೆರೆ ಸೋಮಶೇಖರ, ಡಾ. ಹನುಮಂತರಾವ ದೊಡ್ಡಮನಿ, ಸುರೇಶ ಬಡಿಗೇರ, ಧರ್ಮಣ್ಣ ಧನ್ನಿ, ಅಶ್ವಿನಿ ಮದನಕರ್, ಕಿರಣ ಗಾಜನೂರ, ಪ್ರಭು ಖಾನಾಪುರೆ, ಕೆ.ಎಸ್. ಬಂಧು, ಪಿ. ನಂದಕುಮಾರ, ಶಂಕ್ರಯ್ಯ ಘಂಟಿ ಇತರರು ಭಾಗವಹಿಸಿ ದಮನಕಾರಿ ಬಂಧನವನ್ನು ಖಂಡಿಸಿದರು.

ಹಣಮಂತ ಯಳಸಂಗಿ, ಮರೆಪ್ಪ ಹಳ್ಳಿ, ದೇವೇಂದ್ರ ಶೆಳ್ಳಗಿ, ಸುನಿಲ್ ಮಾನ್ಪಡೆ, ದತ್ತಾತ್ರೇಯ ಇಕ್ಕಳಕಿ, ಸೂರ್ಯಕಾಂತ ನಿಂಬಾಳಕರ್, ಹಣಮಂತ ಬೋಧನ್, ಮಲ್ಲಪ್ಪ ಹೊಸಮನಿ, ರಾಜಶೇಖರ ಮಾಂಗ್, ವಿಠ್ಠಲ್ ವಗ್ಗನ್ ಇತರರು ಭಾಗವಹಿಸಿದ್ದರು.

ಇದನ್ನೂ ಓದಿ: ನನ್ನ ಹುಟ್ಟು ಹಬ್ಬ ಬಿಜೆಪಿಯವರಿಗೆ ಭಯ ಶುರುವಾಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ

emedialine

Recent Posts

ಕಲಬುರಗಿ: ವಕ್ಫ್ ಬಚಾವ್ ಪ್ರತಿಭಟನಾ ಸಮಾವೇಶ ಇಂದು

ಕಲಬುರಗಿ: ಕೇಂದ್ರ ಸರಕಾರ ಜಾರಿಗೊಳ್ಳಿಸುತ್ತಿರುವ ವಕ್ಫ್ ಬಚಾವ್ ಆಂದೋಲನದ ನಿಮಿತ್ತ ಇಂದು ಹಫ್ತ್ ಗುಂಬಜ್ ದರ್ಗಾ ರಸ್ತೆಯ ನ್ಯಾಷನಲ್ ಕಾಲೇಜು…

3 hours ago

ಟ್ರಾಮಾ‌ ಕೇರ್ ನಲ್ಲಿ ನಿರಂತರ ಚಿಕಿತ್ಸೆ, : ವೈದ್ಯರ ಪರಿಶ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘನೆ

ಕಲಬುರಗಿ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವಕನೊಬ್ಬನಿಗೆ ಸುಮಾರು 45 ದಿನಗಳ ಕಾಲ ಐಸಿಯು‌ನಲ್ಲಿ‌‌ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯವಿದ್ದ ಕ್ಲಿಷ್ಟಕರ…

11 hours ago

ಇಂದಿನ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆ ಅನಿವಾರ್ಯ

ಕಲಬುರಗಿ; ಕ್ರೀಡ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸರ್ವೋತೊಅಭಿವೃದ್ದಿಗೆ ಮುಂದಾಗಿರುವುದು ಸಂತೋಷದಾಯಕ ಜೊತೆಗೆ ಮಕ್ಕಳಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಹ…

12 hours ago

ಗ್ರಾಮೀಣ ಪ್ರದೇಶದಲ್ಲಿ ಘನ-ತಾಜ್ಯ ನಿರ್ವಹಣೆ ಕುರಿತು ತರಬೇತಿ

ಕಲಬುರಗಿ: ನಗರದಲ್ಲಿರುವ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ, ಅಬ್ದುಲ್‌…

12 hours ago

ಶ್ರೀ ವಿನಾಯಕ ಮಿತ್ರ ಮಂಡಳಿಯಿಂದ ಗಣೇಶ್ ವಿಸರ್ಜನೆ

ಕಲಬುರಗಿ: ಬಿದ್ದಾಪುರ ಕಾಲೋನಿಯಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಗಣೇಶ್ ವಿಸರ್ಜನೆ ಕಾರ್ಯಕ್ರಮವನ್ನು ನೆರವೇರಿತು. ವಿನಾಯಕ ಪುರಾಣಿಕ್, ಅನಿಲ್…

12 hours ago

ಅಯ್ಯಪ್ಪ ಸ್ವಾಮಿ ಮಹಾ ಪೂಜಾ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ನಾಗನಹಳ್ಳಿ ಕ್ರಾಸ್‍ನಲ್ಲಿರುವ ಗುರುಸ್ವಾಮಿಗಳಾದ ಅಶೋಕ ಹೊನ್ನಳ್ಳಿ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಮಹಾ ಪೂಜಾ ಕಾರ್ಯಕ್ರಮದಲ್ಲಿ ಮುಗುಳನಾಗಾವ ಅಭಿನವ ಶ್ರೀ…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420