ಬಿಸಿ ಬಿಸಿ ಸುದ್ದಿ

ಹಿರೇಸಾವಳಗಿಯ ಶ್ರೀ ಶಿವಲಿಂಗೇಶ್ವರ ಮಹಾಪುರಾಣ

ಕಲಬುರಗಿ: ಈ ವರ್ಷದ ಶ್ರಾವಣ ಮಾಸದ ಅಂಗವಾಗಿ ನಗರದ ವಿದ್ಯಾನಗರ ಕಾಲೋನಿಯ ವೆಲ್‌ಫೇರ್ ಸೊಸೈಟಿಯ ಸಮುದಾಯ ಭವನದಲ್ಲಿ ಹಿರೇಸಾವಳಗಿಯ ಶ್ರೀ ಶಿವಲಿಂಗೇಶ್ವರ ಮಹಾ ಪುರಾಣ ಇದೇ ತಿಂಗಳ 29 ರಿಂದ ಶುಕ್ರವಾರ ರಂದು ಆಯೋಜಿಸಲಾಗಿದೆ ಎಂದು ವಿದ್ಯಾನಗರ ವೆಲ್‌ಫೇರ್‌ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿನಿತ್ಯ ಸಾಯಂಕಾಲ ೬.೩೦ ರಿಂದ ೮.೦೦ ಗಂಟೆಗೆ ೧ ತಿಂಗಳ ಪರ್ಯಂತ ನಡೆಯಲಿದೆ ಹಿರೇಸಾವಳಗಿಯ ಶ್ರೀ ಶಿವಲಿಂಗೇಶ್ವರ ಮಹಾ ಪುರಾಣ ಹಮ್ಮಿಕೊಂಡಿರುವಕಾರಣ ಕಲಬುರಗಿತಾಲೂಕಿನ ಹಿರೇಸಾವಳಗಿ ಜಗದ್ಗುರು ಶಿವಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯರಾದ ಶ್ರೀ. ಮ.ನಿ.ಪ್ರಗುರುನಾಥ ಮಹಾಸ್ವಾಮಿಗಳಿಗೆ ಪುರಾಣಉದ್ಘಾಟನಾಕಾರ್ಯಕ್ರಮದ ನೇತೃತ್ವ ವಹಿಸಲು ಆಮಂತ್ರಣ ಕೊಟ್ಟು ಸನ್ಮಾನಿಸಿ ಸತ್ಕರಿಸಲಾಯಿತು.

ಪುರಾಣದ ಸಂಕ್ಷಪ್ತ ಮಾಹಿತಿ: ನಮ್ಮದೇಶವು ಮಹಾಪುರುಷರಿಗನೇಕರಿಗೆ ಜನ್ಮ ಭೂಮಿಯಾಗಿದೆ, ಜಗದ್ವಿಖ್ಯಾತ ಧರ್ಮಘ ಬೋಧಕರಿಗೆ, ತತ್ವಜ್ಞರಿಗೂ, ಅನುಭವಿಗಳಿಗೂ ಈ ನಮ್ಮ ಪವಿತ್ರ ಭೂಮಿಯಲ್ಲಿ ಉದಯಿಸಿ ಮಾನವಜನಾಂಗದ ಉದ್ಧಾರ ಮಾಡಿರುವ ಅನೇಕ ಪೂಜ್ಯರಲ್ಲಿಹಿರೇಸಾವಳಗಿಯ ಶಿವಲಿಂಗೇಶ್ವರ ಮಹಾಸ್ವಾಮಿಗಳು ಒಬ್ಬರಾಗಿದ್ದಾರೆ.

ಕೊಳ್ಳೂರು ಗ್ರಾಮದ ಹಿರೇಗೌಡರ ವಂಶದಲ್ಲಿ ತಂದೆ ಲಿಂಗಬಸಪ್ಪತಾಯಿ ಮಲ್ಲಮ್ಮಅವರ ಉದರದಲ್ಲಿ ಜನಿಸಿದ ಇವರುಚಿಕ್ಕ ವಯಸ್ಸಿನಲ್ಲಿ ತಮ್ಮ ಮಹಾಮಹಿಮೆಗಳನ್ನು ತೋರಿಸುತ್ತಾ ಮಹಮ್ಮದೀಯ ಧರ್ಮದ ಸತ್ಮುರುಷನಾದ ಬಂದೇನವಾಜರಿಗೆ ತಮ್ಮ ಲೀಲೆ ತೋರಿಸಿ ಮುಂದೆ ಹಿಂದೂ ಮುಸಲ್ಮಾನರು ಈ ಇಬ್ಬರು ಭಿನ್ನಧರ್ಮದ ಸತ್ಪುರುಷರು ಭಕ್ತಿ ಗೌರವಗಳಿಂದ ಕಾಣುತ್ತಿದ್ದರು. ಪೂಜ್ಯರು ಲೋಕೋದ್ದಾರಕ್ಕಾಗಿ ಜನರನ್ನು ಪೋಷಿಸುತ್ತಾ, ದೀನರನ್ನುಉದ್ದರಿಸುತ್ತಾ, ಜನರ ವ್ಯಾದಿ ಮೊದಲಾದ ಭವಣೆಗಳನ್ನು ನಿವಾರಿಸುತ್ತಾ ಪವಾಡಗಳು ಮಾಡುತ್ತಾ ೩೬೦ಕ್ಕೂ ಹೆಚ್ಚು ದಾಸೋಹ ಮಠಗಳನ್ನು ಸ್ಥಾಪಿಸಿದ ಕೀರ್ತಿ ಇವರದಾಗಿದೆ.

ವಿಶೇಷವಾಗಿ ಕಲಬುರಗಿಯ ಬಂದೇನವಾಜರು ಪೂಜ್ಯರ ಬೇಟಿಗೆ ಹುಲಿಯ ಮೇಲೆ ಬಂದ ಸಮಯದಲ್ಲಿ ಪೂಜ್ಯರುತಾವು ಕುಳಿತಿದ್ದ ಕಟ್ಟೆಯ ಸಮೇತಚಲಿಸುತ್ತಾಅವರಿಗೆ ಸ್ವಾಗತಿಸಿದ್ದು ಆಶ್ಚರ್ಯಕರ ಪವಾಡಕ್ಕೆ ಬಂದೇನವಾಜರು ಶರಣರಾಗಿದ್ದು, ತುಂಬಿದ ಕೃಷ್ಣಾ ನದಿಯ ನೀರಿನ ಮೇಲೆ ನಡೆದದ್ದು, ಹುಲಿ ಹಾಗೂ ಆಕಳಿಗೆ ಒಂದೇ ಮಂಥಣಿಯಲ್ಲಿ ನೀರು ಕುಡಿಸಿದ್ದು, ಬಾಲಖೇಡದಲ್ಲಿ ದಿಲ್ಲಿಯ ಬಾದ್‌ಷಾನಿಗೆ ಲಿಂಗಲೀಲೆ ತೋರಿಸಿದ್ದು, ಮಾಂಸದಡಿಗೆಗೆಮಲ್ಲಿಗೆ ಮಾಡಿದ್ದು ಹೀಗೆ ಅನೇಕ ಪವಾಡಗೈದುಕೊನೆಯಲ್ಲಿತಮ್ಮದೇಹವನ್ನು ೩ ವಿಭೂತಿಗಟ್ಟೆ ಮತ್ತುಫತ್ರಿಯಾಗಿ ಭಕ್ತರಿಗೆ ಬಿಟ್ಟು ಹೋದಮರಣವನ್ನೆಗೆದ್ದು ಮೃತ್ಯುಂಜಯರು.ಅಂತಹ ಪವಾಡ ಪುರುಷ ಶಿವಲಿಂಗೇಶ್ವರ ಪುರಾಣ ಪ್ರವಚನ ಕೇಳುವುದೇ ನಮ್ಮ ನಿಮ್ಮೆಲ್ಲರ ಭಾಗ್ಯಎನ್ನುತ್ತವಿದ್ಯಾನಗರ ಸುತ್ತ ಮುತ್ತಲಿನ ಬಡಾವಣೆಯ ಭಕ್ತರುಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಸಾಯಂಕಾಲ ನಡೆಯುವ ಈ ಪುರಾಣಕಾರ್ಯಕ್ರಮವನ್ನು ಕೇಳಿ ಮಲ್ಲಿಕಾರ್ಜುನದೇವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ.

ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಹಿರಿಯರಾದ ಬಸವಂತರಾವ ಜಾಬಶೆಟ್ಟಿ, ವಿಶ್ವನಾಥ ರಟಕಲ, ಶಂಭುಲಿಂಗ ಪಾಟೀಲ ಉಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

24 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago