ಸುರಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.ನಿಷ್ಠಿ ಕಡ್ಲೆಪ್ಪನವರ ವಿರಕ್ತಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿಜಿ ಹಾಗೂ ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶ್ರಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಾಜುಗೌಡ ಮಾತನಾಡಿ,ಪತ್ರಕರ್ತರೆಂದರೆ ದೇಶದ ಅಭಿವೃಧ್ಧಿಗೆ ನಾಲ್ಕನೆ ಅಂಗವಿದ್ದಂತೆ.ನನ್ನ ಈ ಮಟ್ಟದ ಬೆಳವಣಿಗೆಗೆ ಪತ್ರಕರ್ತರ ಕೊಡುಗೆ ತುಂಬಾ ಇದೆ ಎಂದು ಸ್ಮರಿಸಿಕೊಂಡರು.ಅಲ್ಲದೆ ನಾವು ತಪ್ಪು ಮಾಡಿದಾಗ ತೆಗಳುವ ಹಾಗೂ ಒಳ್ಳೆಯದನ್ನು ಮಾಡಿದಾಗ ಪ್ರಶಂಸಿಸುವ ಕೆಲಸವನ್ನು ಮಾಡುವ ಮೂಲಕ ಮತ್ತಷ್ಟು ಉತ್ತಮವಾದ ಕಾರ್ಯ ಮಾಡಲು ಮಾರ್ಗದರ್ಶನವನ್ನು ಮಾಡಿದ್ದಾರೆ.ನಾನು ಸದಾಕಾಲ ಎಲ್ಲಾ ಪತ್ರಕರ್ತರನ್ನು ಗೌರವಿಸುತ್ತೇನೆ ಎಂದರು.
ಒಂದು ಕತ್ತಿಯಿಂದ ಒಬ್ಬರು ಇಬ್ಬರನ್ನು ಹಿರಿಯಬಹುದು ಆದರೆ ಒಬ್ಬ ಪತ್ರಕರ್ತ ತನ್ನ ಲೇಖನಿಯಿಂದ ಇಡೀ ಸಮಾಜವನ್ನು ಏಳಿಗೆಗೊಳಿಸಬಲ್ಲ ಶಕ್ತಿ ಇದೆ ಎಂದರು.ಅಲ್ಲದೆ ಇದೇ ಸಂದರ್ಭದಲ್ಲಿ ಸುರಪುರ ನಗರದಲ್ಲಿ ಪತ್ರಿಕಾ ಭವನದ ನಿರ್ಮಾಣಕ್ಕೆ ೨೫ ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲಾಗುವುದು ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಲು ಮುಂದಾಗುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ,ಇವತ್ತು ಪತ್ರಕರ್ತರು ಪತ್ರಿಕೋದ್ಯಮಿಗಳ ಆಳುಗಳಾಗಿ ಕೆಲಸ ಮಾಡುವಂತಾಗಿದೆ.ಅಲ್ಲದೆ ಒಂದು ಸುದ್ದಿಯನ್ನು ತುಂಬಾ ತೂಕದಲ್ಲಿ ಬರೆಯಬೇಕಾದ ಅನಿವಾರ್ಯತೆಯಲ್ಲಿ ಪತ್ರಕರ್ತರಿದ್ದೇವೆ,ಪತ್ರಿಕೆಯ ಬೆಳವಣಿಗೆಗೆ ಆರ್ಥಿಕತೆಯ ಅವಶ್ಯವು ಇದೆ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸುದ್ದಿ ಮಾಡುವಾಗ ಸಾಕಷ್ಟು ಒತ್ತಡವನ್ನು ಅನುಭವಿಸುತ್ತೇವೆ ಎಂದರು.ಅಲ್ಲದೆ ಶಾಸಕ ರಾಜುಗೌಡ ಅವರು ಜಿಲ್ಲೆಯಲ್ಲಿ ಪತ್ರಿಕಾ ಭವನವನ್ನು ಒದಗಿಸಿದರು ಅಲ್ಲದೆ ಕಳೆದ ೧೦ ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿದಿದ್ದನ್ನು ಕೂಡಃ ಸ್ವತ ರಾಜುಗೌಡ ಅವರು ೧ ಲಕ್ಷ ೨೫ ಸಾವಿರ ರೂಪಾಯಿಗಳ ಸಹಾಯ ಮಾಡುವ ಮೂಲಕ ಜಿಲ್ಲೆಯ ಪತ್ರಕರ್ತರಿಗೆ ನೆರವಾಗಿದ್ದಾರೆ ಎಂದು ಸ್ಮರಿಸಿದರು.ಅಲ್ಲದೆ ಸುರಪುರ ಮತ್ತು ಹುಣಸಗಿ ಪಟ್ಟಣದಲ್ಲಿ ಶೀಘ್ರದಲ್ಲಿ ಪತ್ರಿಕಾ ಭವನ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಪೇದೆ ದಯಾನಂದ ಜಮಾದಾರ ಹಾಗೂ ಪತ್ರಿಕಾ ವಿತರಕರಾದ ಶ್ಯಾಮಸುಂದರ ಕೆಂಭಾವಿ,ದೇವಿಂದ್ರ ರುಕ್ಮಾಪುರ ಮತ್ತು ಅಜ್ಮಲ್ ತೋಫಿಕ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದ ವೇದಿಕೆ ಮೇಲೆ ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ),ನಯೋಪ್ರಾ ಅಧ್ಯಕ್ಷ ಪ್ರಕಾಶ ಸಜ್ಜನ್,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಡಿವೈಎಸ್ಪಿ ಡಾ:ಮಂಜುನಾಥ ಟಿ,ಟಿಹೆಚ್‌ಓ ಡಾ:ಆರ್.ವಿ ನಾಯಕ,ತಾ.ಪಂ ಇಓ ಚಂದ್ರಶೇಖರ ಪವಾರ್,ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಕಾಮನಟಿಗಿ,ಹುಣಸಗಿ ತಾಲೂಕು ಅಧ್ಯಕ್ಷ ಭೀಮಸೇನರಾವ್ ಕುಲಕರ್ಣಿ ವೇದಿಕೆಯಲ್ಲಿದ್ದರು.
ತಾಲೂಕು ಅಧ್ಯಕ್ಷ ಸಿದ್ದಯ್ಯ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಪತ್ರಕರ್ತರಾದ ವಿಜಯಚಾರ್ಯ ರಾಜಪುರೋಹಿತ ಸ್ವಾಗತಿಸಿದರು,ರಾಜು ಕುಂಬಾರ ನಿರೂಪಿಸಿದರು,ಮಲ್ಲಿಕಾರ್ಜುನ ತಳ್ಳಳ್ಳಿ ವಂದಿಸಿದರು.ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಗಿರೀಶ ಶಾಬಾದಿ,ಡಿ.ಸಿ ಪಾಟೀಲ್,ಅಶೋಕ ಸಾಲವಾಡಗಿ,ನಾಗರಾಜ ನ್ಯಾಮತಿ,ಶ್ರೀಕರಭಟ್ ಜೋಷಿ,ರವಿರಾಜ ಕಂದಳ್ಳಿ,ಮಲ್ಲು ಗುಳಗಿ,ಮಹಾದೇವಪ್ಪ ಬೊಮ್ಮನಹಳ್ಳಿ,ಕಲೀಂ ಫರೀದಿ,ಕ್ಷೀರಲಿಂಗಯ್ಯ ಬೋನಾಳ,ಮನಮೋಹನ ಪ್ರತಿಹಸ್ತ,ಪರಶುರಾಮ ಮಲ್ಲಿಬಾವಿ,ಶ್ರೀಮಂತ ಚಲುವಾದಿ,ಸೋಮು ನಾಯಕ,ಪುರುಷೋತ್ತಮ ದೇವತ್ಕಲ್,ರಾಘವೇಂದ್ರ ಮಾಸ್ತರ,ಮುರಳಿಧರ ಅಂಬುರೆ,ಮಲ್ಲು ಬಾದ್ಯಾಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಅನೇಕ ಜನ ಸಾರ್ವಜನಿಕರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…