ಕಲಬುರಗಿ: ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಗುಂಡಗುರ್ತಿ ಗ್ರಾಮದ ಭಾಗ್ಯಶ್ರೀ ಬಸವರಾಜ ಹೊಸಳ್ಳಿಯ ಮೃತದೇಹ ಗುರುವಾರ ಬೆಳಿಗ್ಗೆ ಕಾಗಿಣಾ ಸೇತುವೆಯ ಕೆಳಗಡೆ ಪತ್ತೆಯಾಗಿದೆ.
ಶಹಾಬಾದ ತಾಲೂಕಿನ ಸಮೀಪದ ಶಂಕರವಾಡಿ ಗ್ರಾಮದ ಕಾಗಿಣಾ ನದಿಯ ಸೇತುವೆಯಿಂದ ಭಾಗ್ಯಶ್ರೀ ಬಸವರಾಜ ಹೊಸಳ್ಳಿ ನದಿಗೆ ಜಿಗಿದು ಆತ್ಮಹತ್ಯೆ ಕೊಂಡ ಘಟನೆ ಬುಧವಾರ ನಡೆದಿತ್ತು.
ಸ್ಕೂಟಿ ವಾಹನದಲ್ಲಿ ಬಂದ ಭಾಗ್ಯಶ್ರೀ ಕಾಗಿಣಾ ಸೇತುವೆ ಮೇಲೆ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ್ದಳು.ಇದನ್ನು ಪಕ್ಕದಲ್ಲಿಯೇ ಹೋಗುತ್ತಿದ್ದ ಬಸನಲ್ಲಿದ್ದ ಯುವಕರು ನೋಡಿದ್ದಾರೆ.ಅಲ್ಲದೇ ಬಸ್ ನಿಲ್ಲಿಸಿ ಸೇತುವೆ ಬಳಿ ಬಂದು ನೋಡುವ?ರಲ್ಲಿಯೇ ಯುವತಿ ನೀರಿನಲ್ಲಿ ಮುಳುಗಿದ್ದಳು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಠಾಣೆಯ ಪೊಲೀಸರು ಬೈಕ್ ಸಂಖ್ಯೆಯಿಂದ ನದಿಗೆ ಹಾರಿದ ಯುವತಿ ಭಾಗ್ಯಶ್ರೀ ಬಸವರಾಜ ಹೊಸಳ್ಳಿ ಎಂಬುದು ಖಚಿತಪಡಿಸಿಕೊಂಡಿದ್ದರು. ಅಲ್ಲದೆ ಮೃತ ದೇಹದ ಪತ್ತೆಗಾಗಿ ಪೊಲೀಸರು ಅಗ್ನಿಶಾಮಕದಳದ ಸಿಬ್ಬಂದಿ ,ಎನ್ಡಿಆರ್ಎಫ್ತಂಡ, ಮೀನುಗಾರರು ನದಿಯಲ್ಲಿ ಹುಡುಕಾಟ ನಡೆಸಿದ್ದರು.
ಆದರೆ ಸಂಜೆಯವರಿಗೂ ಹುಡುಕಾಟ ನಡೆಸಿದರೂ ಶವ ಮಾತ್ರ ಪತ್ತೆಯಾಗಿರಲಿಲ್ಲ. ಕತ್ತಲಾಗಿದ್ದರಿಂದ ಹುಡುಕಾಟ ನಿಲ್ಲಿಸಿದ್ದರು.ಬೆಳಿಗ್ಗೆ ಶವದ ಪತ್ತೆಗಾಗಿ ಹುಡುಕಾಟ ನಡೆಸಬೇನ್ನುವಷ್ಟರಲ್ಲಿಯೇ ಬೆಳಿಗ್ಗೆ ೬:೩೦ ಗಂಟೆಗೆ ಸೇತುವೆ ಕೆಳಗಡೆ ಶವ ತೇಲಿದೆ. ಸ್ಥಳೀಯ ಮೀನುಗಾರರನ್ನು ಬಳಿಸಿಕೊಂಡು ಶವವನ್ನು ಹೊರತೆಗೆದಿದ್ದಾರೆ.
ಮುಖದ ಮೇಲೆ ಮೊಡವೆಗಳು ಉಂಟಾಗಿ ಬಟ್ಟೆ ಕಟ್ಟಿಕೊಂಡು ಇರುತ್ತಿದ್ದಳು. ಅದಕ್ಕಾಗಿ ಅವಳ ತಂದೆ ಈ ರೀತಿ ಬಟ್ಟೆ ಕಟ್ಟಿಕೊಳ್ಳುವುದು ಅಗತ್ಯವಿಲ್ಲ. ಏನು ಆಗುವುದಿಲ್ಲ ಎಂದು ಬುದ್ಧವಾದ ಹೇಳಿದ್ದರು.ಅದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದಾಳೆ.ಅಲ್ಲದೇ ಆರೋಗ್ಯ ಚೆನ್ನಾಗಿಲ್ಲದ ಕಾರಣ ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…