ಬಿಸಿ ಬಿಸಿ ಸುದ್ದಿ

ಕೃಷಿ ಪರಿಕರ ಮಾರಾಟಗಾರರಿಗೆ ಸಸ್ಯ ಸಂರಕ್ಷಣೆ ತರಬೇತಿ

ಕಲಬುರಗಿ: ಜಿಲ್ಲೆಯ ಕೃಷಿ ಪರಿಕರ ಮಾರಾಟ ಶಿಬಿರಾರ್ಥಿಗಳಿಗೆ ಪ್ರಸ್ತುತ ಕೃಷಿ ಮತ್ತು ತೋಟಗಾರಿಕಾ ಬೆಳೆಯಲ್ಲಿ ಕಂಡುಬಂದ ರೋಗ, ಕೀಟಗಳ ಹತೋಟಿ ಕ್ರಮಗಳ ಕುರಿತು ಮಾಹಿತಿಯನ್ನು ಕೆವಿಕೆ, ಸಸ್ಯರೋಗ ತಜ್ಞರಾದ ಜಹೀರ್‌ಅಹೆಮದ್, ಕೆವಿಕೆಯ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ವಿವರಣೆ ನೀಡಿದರು.

ಉದ್ದು, ಹೆಸರು, ತೊಗರಿ, ಸೋಯಾಬಿನ್ ಬೆಳೆಗಳಲ್ಲಿ ಎಲೆಚುಕ್ಕಿ  ರೋಗ, ತುಕ್ಕುರೋಗ, ನೆತ್ತಿ ಸುಡುವ ನೇಕ್ರಾಸಿಸ್ ರೋಗ, ಎಲೆತಿನ್ನುವ ಹುಳು, ಬಸವನ ಹುಳುವಿನ ನಿರ್ವಹಣೆ, ನೆಟೆರೋಗ ವಿವಿದ ಚಿಹ್ನೆಗಳು, ಇಳುವರಿಗೆ ದಕ್ಕೆ ತರುವ ಅಂಶಗಳು, ಸಮಗ್ರಕೀಟರೋಗ ಹತೋಟಿಯ ಮಾಹಿತಿಯನ್ನು ನೀಡಲಾಯಿತು.

ಬಿತ್ತನೆಯಾದ ಹೆಸರಲ್ಲಿ ಪೋಷಕಾಂಶಗಳ ಕೊರತೆ, ಎಲೆ ತಿನ್ನುವ ಕೀಟಗಳು ಹಾಗೂ ಅಲ್ಪ ಪ್ರಮಾಣದ ನಂಜಾಣುರೋಗಕಂಡು ಬಂದಿದೆ.ಕಳೆದ ವಾರ ಹೆಚ್ಚು ಮಳೆಯಾಗಿದ್ದು, ಕಪ್ಪು ಭೂಮಿಗಳು ಹೆಚ್ಚಿನತೇವಾಂಶ ಹೊಂದಿವೆ. ಇದರಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಕಾರ್ಯಕ್ರಮದಲ್ಲಿ ದೇಶಿ ಕೃಷಿ ಡಿಪ್ಲೋಮೊ ಸಂಚಾಲಕರಾದ ಡಾ.ಜಿ. ಪಾಂಡುರಂಗರಾವ ಹಾಗೂ ಕೋಟನೂರ್ ಕೃಷಿ ಡಿಪ್ಲೋಮೊ ಸಂಚಾಲಕರಾದ ಗುರುರಾಜಕುಲಕರ್ಣಿ, ಅನುಗಾರರು ಉಪಸ್ಥಿತರಿದ್ದರು.

ಕ್ಷೇತ್ರ ಭೇಟಿ ನೀಡಿ ವಿವಿದ ಕೀಟ ಮತ್ತು ರೋಗಗಳ ಅಧ್ಯಯನ ನಡೆಸಲಾಯಿತು.

emedialine

Recent Posts

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

11 mins ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

2 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

15 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

15 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

17 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

17 hours ago