ಕಲಬುರಗಿ: ಜಿಲ್ಲೆಯ ಕೃಷಿ ಪರಿಕರ ಮಾರಾಟ ಶಿಬಿರಾರ್ಥಿಗಳಿಗೆ ಪ್ರಸ್ತುತ ಕೃಷಿ ಮತ್ತು ತೋಟಗಾರಿಕಾ ಬೆಳೆಯಲ್ಲಿ ಕಂಡುಬಂದ ರೋಗ, ಕೀಟಗಳ ಹತೋಟಿ ಕ್ರಮಗಳ ಕುರಿತು ಮಾಹಿತಿಯನ್ನು ಕೆವಿಕೆ, ಸಸ್ಯರೋಗ ತಜ್ಞರಾದ ಜಹೀರ್‌ಅಹೆಮದ್, ಕೆವಿಕೆಯ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ವಿವರಣೆ ನೀಡಿದರು.
ಉದ್ದು, ಹೆಸರು, ತೊಗರಿ, ಸೋಯಾಬಿನ್ ಬೆಳೆಗಳಲ್ಲಿ ಎಲೆಚುಕ್ಕಿ ರೋಗ, ತುಕ್ಕುರೋಗ, ನೆತ್ತಿ ಸುಡುವ ನೇಕ್ರಾಸಿಸ್ ರೋಗ, ಎಲೆತಿನ್ನುವ ಹುಳು, ಬಸವನ ಹುಳುವಿನ ನಿರ್ವಹಣೆ, ನೆಟೆರೋಗ ವಿವಿದ ಚಿಹ್ನೆಗಳು, ಇಳುವರಿಗೆ ದಕ್ಕೆ ತರುವ ಅಂಶಗಳು, ಸಮಗ್ರಕೀಟರೋಗ ಹತೋಟಿಯ ಮಾಹಿತಿಯನ್ನು ನೀಡಲಾಯಿತು.
ಬಿತ್ತನೆಯಾದ ಹೆಸರಲ್ಲಿ ಪೋಷಕಾಂಶಗಳ ಕೊರತೆ, ಎಲೆ ತಿನ್ನುವ ಕೀಟಗಳು ಹಾಗೂ ಅಲ್ಪ ಪ್ರಮಾಣದ ನಂಜಾಣುರೋಗಕಂಡು ಬಂದಿದೆ.ಕಳೆದ ವಾರ ಹೆಚ್ಚು ಮಳೆಯಾಗಿದ್ದು, ಕಪ್ಪು ಭೂಮಿಗಳು ಹೆಚ್ಚಿನತೇವಾಂಶ ಹೊಂದಿವೆ. ಇದರಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಕಾರ್ಯಕ್ರಮದಲ್ಲಿ ದೇಶಿ ಕೃಷಿ ಡಿಪ್ಲೋಮೊ ಸಂಚಾಲಕರಾದ ಡಾ.ಜಿ. ಪಾಂಡುರಂಗರಾವ ಹಾಗೂ ಕೋಟನೂರ್ ಕೃಷಿ ಡಿಪ್ಲೋಮೊ ಸಂಚಾಲಕರಾದ ಗುರುರಾಜಕುಲಕರ್ಣಿ, ಅನುಗಾರರು ಉಪಸ್ಥಿತರಿದ್ದರು.
ಕ್ಷೇತ್ರ ಭೇಟಿ ನೀಡಿ ವಿವಿದ ಕೀಟ ಮತ್ತು ರೋಗಗಳ ಅಧ್ಯಯನ ನಡೆಸಲಾಯಿತು.