ಹೈದರಾಬಾದ್ ಕರ್ನಾಟಕ

ಸಮಾಜ ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದು ಅಗತ್ಯ : ಪ್ರೊ.ವಿ.ಟಿ.ಕಾಂಬಳೆ

ಕಲಬುರಗಿ:ಸಮಾಜದಲ್ಲಿರುವ ದೀನ-ದಲಿತ, ಶೋಷಿತ, ಅಸಹಾಯಕರಿಗೆ ಸಹಾಯ ಹಸ್ತ ಚಾಚಬೇಕು. ಅವರಲ್ಲಿದೇವರನ್ನುಕಾಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವ್ಯಕ್ತಿಯುತನ್ನ ಸ್ವಾರ್ಥಜೀವನ ಸಾಗಿಸಿದರೆ ಅಂತಹಜೀವನಕ್ಕೆ ಬೆಲೆಯಿಲ್ಲ. ಜೊತೆಗೆ ಸಮಾಜ ಸೇವಾ ಮನೋಭಾವನೆ ಬೆಳೆಸಿಕೊಂಡು ಸೇವೆಯನ್ನು ಮಾಡಿದರೆ ಸಾರ್ಥಕಜೀವನ ನಮ್ಮದಾಗುತ್ತದೆಎಂದು ಗುವಿವಿ ಕುಲಸಚಿವ ಪ್ರೊ.ವಿ.ಟಿ.ಕಾಂಬಳೆ ಅಭಿಪ್ರಾಯಪಟ್ಟರು.

ನಗರದಕಸ್ತುರಬಾ ಬಾಲಕಿಯರ ಶಾಲೆಯ ವಿದ್ಯಾರ್ಥಿಗಳಿಗೆ ’ಸುಜಯ್ ಶಿಕ್ಷಣ ಮತ್ತುಕಲ್ಯಾಣ ಸಂಸ್ಥೆ’ ವತಿಯಿಂದಗುರುವಾರ ಸಂಜೆಸ್ವೆಟರ್‌ಗಳ ವಿತರಣೆ ಹಾಗೂ ವಿಶ್ವ ಹೆಪಟೈಟಿಸ್ ದಿನಾಚರಣೆಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದಅವರು, ಸುಜಯ್ ಶಿಕ್ಷಣ ಮತ್ತುಕಲ್ಯಾಣ ಸಂಸ್ಥೆಯ ಸಮಾಜಮುಖಿಕಾರ್ಯ ಮಾದರಿಯಾಗಿದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜಮುಖಿ ವೈದ್ಯಡಾ.ಮಲ್ಲಾರ್‌ರಾವ್ ಮಲ್ಲೆ ಮಾತನಾಡಿ, ಹೆಪಟೈಟಿಸ್‌ಕಾಯಿಲೆಯುವೈರಾಣುವಿರುವಕಲುಷಿತ ನೀರಿನ ಸೇವನೆ, ಸೋಂಕಿತ ವ್ಯಕ್ತಿಯ ಮಲ, ಕಲುಷಿತಆಹಾರ ಮತ್ತು ನೀರಿನ ಸೇವನೆಯಿಂದ ವೈರಾಣುದೇಹವನ್ನು ಪ್ರವೇಶಿಸುತ್ತದೆ. ಸುಸ್ತು, ಹಸಿವಿಲ್ಲದಿರುವಿಕೆ, ಹೊಟ್ಟೆನೋವು, ವಾಕರಿಕೆ, ಗಾಡ ಬಣ್ಣದ ಮೂತ್ರ, ಮೈ-ಕೈ ನೋವು, ತೂಕ ಇಳಿಕೆ, ಚರ್ಮ ಮತ್ತುಕಣ್ಣು ಹಳದಿ ಬಣ್ಣವಾಗುವುದುಅಂದರೆಕಾಮಾಲೆರೋಗಇದರ ಪ್ರಮುಖ ಲಕ್ಷಣಗಳಾಗಿವೆ. ಶುದ್ಧಆಹಾರ ಮತ್ತು ನೀರಿನ ಸೇವನೆ, ವೈಯಕ್ತಿಕ ಸ್ವಚ್ಛತಗೆ ಹೆಚ್ಚಿನಗಮನವನ್ನು ನೀಡುವುದು, ಸೋಂಕಿತ ವ್ಯಕ್ತಿಯದೈಹಿಕ ಸಂಪರ್ಕ ಮಾಡದಿರುವುದು, ಮುನ್ನೆಚ್ಚರಿಕೆಕ್ರಮವಾಗಿರೋಗ ಬಾರದಂತೆತಡೆಯಲು ಹೆಪಟೈಟಿಸ್ ಲಸಿಕೆಗಳನ್ನು ಹಾಕುವುದುತಡೆಗಟ್ಟುವ ವಿಧಾನಗಳಾಗಿವೆ ಎಂದರು.

ಕಾರ್ಯಕ್ರಮದಲ್ಲಿಡಾ.ಸುನೀಲಕುಮಾರಎಚ್.ವಂಟಿ, ಜಯಶ್ರೀ ಎಚ್.ವಂಟಿ, ಸುಜಯ್‌ಎಚ್.ವಂಟಿ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರದೇಗಾಂವ, ಸಂಜೀವಕುಮಾರ ಶೆಟ್ಟಿ, ಸುನೀತಾರಡ್ಡಿ, ವೀರೇಶ ಬೋಳಶೆಟ್ಟಿ ನರೋಣಾ, ಚಂದ್ರಣ್ಣ ಮಲ್ಕಾಪುರೆ, ವೆಂಕಟೇಶರಂಗಂಪೇಟ್, ಸಂಗಮೇಶ ಇಮ್ಡಾಪೂರ್, ಪ್ರೊ.ಶಂಕರಲಿಂಗ ಹೆಂಬಾಡೆ, ಅಶೋಕ ಕಾಳೆ, ಬಸವರಾಜಎಸ್.ಪುರಾಣೆ, ಮಲ್ಲಿನಾಥ ನಾಟಿಕಾರ, ಸುವರ್ಣಾ, ಶ್ರೀದೇವಿ, ಸಂಪತ್ತಕುಮಾರಿ, ಸುರಾಖಾ, ಸುವರ್ಣ, ವಾಣಿಶ್ರೀ, ನೀಲಮ್ಮಾ ಸೇರಿದಂತೆಇನ್ನಿತರರು ಭಾಗವಹಿಸಿದ್ದರು.

ನಿಖಿತಾ, ಮಹಾದೇವಿ ಪ್ರಾರ್ಥಿಸಿದರು. ಸಂಗೀತಾ, ನಂದಿನಿ ಸ್ವಾಗತಿಸಿದರು. ರಮೇಶ ಯಾಳಗಿ ನಿರೂಪಿಸಿದರು. ಎಂ.ಬಿ.ನಿಂಗಪ್ಪ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago