ಬೆಂಗಳೂರು ಆಗಸ್ಟ್ 3: ರಾಜ್ಯಮಟ್ಟದ ವರ್ಬ್ಯಾಟಲ್ ಡಿಬೇಟ್ ಚಾಂಪಿಯನ್ ಶಿಪ್ ನ ಕರ್ನಾಟಕ 2022ರ ನ 18ನೆಯ ಆವೃತ್ತಿಯಲ್ಲಿ ವಿದ್ಯಾಶಿಲ್ಪ ಅಕಾಡೆಮಿ ಯ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಇಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬಿಗಿನರ್ಸ್ ವಿಭಾಗದಲ್ಲಿ ಪಿಯಾ ಹಾಗೂ ತಾಶಿ ಮತ್ತು ಜ್ಯೂನಿಯರ್ ವಿಭಾಗದಲ್ಲಿ ಆದ್ಯಾ ಹಾಗೂ ಆಯ್ಮನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ವರ್ಬ್ಯಾಟಲ್ ಸಂಸ್ಥೆಯ ಸಂಸ್ಥಾಪಕ ರಾದ ದೀಪಕ್ ತಿಮ್ಮಯ್ಯ ಮಾತನಾಡಿ, ಬಿಗಿನರ್ಸ್ ವಿಭಾಗದಲ್ಲಿ ಒಟ್ಟು 47 ಮಂದಿ ಪಾಲ್ಗೊಂಡಿದ್ದರು ಹಾಗೂ ಜ್ಯೂನಿಯರ್ ವಿಭಾಗದಲ್ಲಿ 173 ಮಂದಿ ಪಾಲ್ಗೊಂಡಿದ್ದರು. ಒಟ್ಟು 51 ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ರಾಮಕೃಷ್ಣ ಉಪಾಧ್ಯಾಯ, ಸುನಿಲ್ ರಾಜಶೇಖರ್, ಹಂಸ್ವರ್ಧನ್, ವಿನಾಯಕ ರಾಮಕೃಷ್ಣ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಬಿಗಿನರ್ ವಿಭಾಗದ ವಿಜೇತರಿಗೆ 20,000 ಹಾಗೂ ಜ್ಯೂನಿಯರ್ ವಿಭಾಗದ ವಿಜೇತರಿಗೆ 1ಲಕ್ಷ ಮೊತ್ತವನ್ನು ಬಹುಮಾನವಾಗಿ ನೀಡಲಾಯಿತು. ಎಂಟರಿಂದ 12 ವರ್ಷದ ಮಕ್ಕಳು ಬಿಗಿನರ್ ವಿಭಾಗದಲ್ಲೂ 12ರಿಂದ 16ರ ವಯಸ್ಸಿನ ಮಕ್ಕಳು ಜ್ಯೂನಿಯರ್ ವಿಭಾಗದಲ್ಲೂ ಪಾಲ್ಗೊಂಡಿದ್ದರು ಎಂದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…