ಕಲಬುರಗಿ: ಅಮೇರಿಕ ದೇಶದ ಏಶಿಯಾ ವೇದಿಕ್ ಕಲ್ಚರಲ್ ವಿಶ್ವ ವಿದ್ಯಾಲಯದ ವತಿಯಿಂದ ಪೂಜ್ಯ ಶ್ರೀ ಮಂತ್ರ ಮಹರ್ಷಿ ಡಾ.ಎನ್.ಬಿ.ರೆಡ್ಡಿ ಸದ್ಗುರುಜಿ ರವರಿಗೆ ಲಭಿಸಿರುವ ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭದ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ ನಮ್ಮ ಕನ್ನಡ ಟಿವಿ ಮಿಡಿಯಾ ಪ್ರಾವೆಟ್ ಲಿಮಿಟೆಡ್ ಬೆಂಗಳೂರು ಹಾಗೂ ಕಮಲಾಪುರ ಮಾಜಿ ತಾಲೂಕಾ ಪಂಚಾಯತ್ ಉಪಾಧ್ಯಕ್ಷ ದೀಪಕ ಸಲಗರ ಇವರ ಅಧ್ಯಕ್ಷತೆಯಲ್ಲಿ ಪೂಜ್ಯಶ್ರೀ ಮಂತ್ರ ಮಹರ್ಷಿ ಡಾ.ಎನ್.ಬಿ.ರೆಡ್ಡಿ ಸದ್ಗುರುಜಿ ಅವರಿಗೆ ಅಭಿನಂದಿಸಲಾಯಿತು.
ಈ ಕಾರ್ಯಕ್ರಮವನ್ನು ಹಿರಿಯ ಚಲನಚಿತ್ರ ನಟ ವೈಜಿನಾಥ ಬಿರಾದಾರ ಅವರು ಉದ್ಘಾಟಿಸಿ ಮಾತನಾಡುತ್ತಾ ಸದ್ಗುರುಜಿ ರವರ ದಿವ್ಯ ದೃಷ್ಟಿಯು ನಮ್ಮಂತ ಭಕ್ತ ಸಮೂಹದ ಮೇಲೆ ಬಿದ್ದರೆ ಸಾಕು ಜೀವನ ಪಾವನ ಆಗುತ್ತದೆ ಮನುಷ್ಯನ ಜೀವನಕ್ಕೆ ಸದ್ಗುರುವಿನ ಆಶೀರ್ವಾದ ಬೇಕೇ ಬೇಕು ಅಂದಾಗ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ಅವರು ಹೇಳಿದರು.
ಜೀವನದಲ್ಲಿ ಗುರುವೆಂಬ ಪದ ಬಹಳ ಅರ್ಥಗರ್ಭಿತವಾದದ್ದು. ಹಿಂದೆ ಗುರು ಮುಂದೆ ಗುರಿ ಅಂದಾಗ ಜೀವನದಲ್ಲಿ ಸ್ವಾರ್ಥಕತೆ ಕಾಣಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಗೋವಿಂದ ರಾಜು, ಉದ್ಯಮಿ ಜಯರಾಜ, ಬಸವರಾಜ ಆರ್. ಆರ್ಯ ಹುಮನಾಬಾದ, ನಿವೃತ್ತ ಶಿಕ್ಷಕ ದಾನಪ್ಪ ಸಲಗರ ಸಂತೋಷ ಖೇಡ್ ಮತ್ತು ಶಂಭುಲಿಂಗ ಗೊಳೆ ಉಪಸ್ಥಿತರಿದ್ದರು, ಧಮೇಂದ್ರ ಪೂಜಾರಿ ಸ್ವಾಗತಿಸಿದರು ನಮ್ಮ ಕನ್ನಡ ಟಿವಿಯ ಖ್ಯಾತ ನಿರೂಪಕ ಎಸ್.ಎಮ್.ಭಕ್ತ ಕುಂಬಾರ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…