ಕಲಬುರಗಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದು ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಎರಡು ತಿಂಗಳಿಂದ ಸತತ ಧಾರಾಕಾರ ಮಳೆ ಯಾಗುತ್ತಿದ್ದರಿಂದ ಮುಂಗಾರು ಬೆಳೆಗಳಾದ ಉದ್ದು, ಹೆಸರು, ಸೋಯಾಬೀನ್ ಅಲ್ಲದೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ತೊಗರಿ ಕೂಡ ನಷ್ಟವಾಗಿದೆ.ಬಿತ್ತನೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಈವರೆಗೂ ಯಾವುದೇ ಪರಿಹಾರ ನೀಡಿಲ್ಲ.
ಪ್ರತಿ ಬಾರಿ ಬರ, ಅತಿವೃಷ್ಟಿ,ನೆರೆ ಹಾವಳಿ ಹೀಗೆ ಅನೇಕ ತೊಂದರೆ ಸುಳಿಯಲ್ಲಿ ಸಿಲುಕುತ್ತಿದ್ದಾರೆ.ಕಷ್ಟ ಪಟ್ಟು ದುಡಿದ ಬೆಳೆ ರೈತರ ಕೈಗೆ ಸಿಗುತ್ತಿಲ್ಲ.ಬೆಳೆ ವಿಮೆ ಹಣ ಕಟ್ಟಿದ್ದರೂ ವಿಮೆ ಹಣ ರೈತರ ಖಾತೆಗೆ ಜಮಾ ಆಗುತ್ತಿಲ್ಲ.ಮೇಲಿಂದ ಬೆಳೆ ಸಾಲ ಮರು ಪಾವತಿಸಲಾಗದೆ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷವೂ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿದ್ದರು ರೈತರಿಗೆ ಈ ವರೆಗೆ ಪರಿಹಾರ ಸಿಕ್ಕಿಲ್ಲ.ಬ್ಯಾಂಕಗಳಲ್ಲಿನ ಬೆಳೆ ಸಾಲ ಮನ್ನಾ ಮಾಡಿಲ್ಲ.ಕನಿಷ್ಠ ಬಡ್ಡಿ ಮನ್ನಾ ಆದರೂ ಮಾಡಬೇಕಿತ್ತು.ಆದರೆ ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದು ನಂತರ ರೈತರನ್ನು ಕಡೆಗಣಿಸುತ್ತಿರುವ ಸರ್ಕಾರಕ್ಕೆ ನಾಚಿಕೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರಿ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ಅಣೆಕಟ್ಟುಗಳು ಭರ್ತಿಯಾಗಿ ಅಣೆಕಟ್ಟುಗಳಿಂದ ನೀರು ಬೀಡುತ್ತಿದ್ದು,ನೆರೆ ಉಂಟಾಗಿ ಬೆಳೆಗಳು ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿವೆ.ರಸ್ತೆ ಸಂಪರ್ಕ ಕಡಿತಗೊಂಡಿದೆ.ಇನ್ನು ಕೆಲವೆಡೆ ಮಳೆಗೆ ಮನೆಗಳು ಕುಸಿದು ಬಿದ್ದು ರೈತರು ಬೀದಿಗೆ ಬರುವಂತಾಗಿದೆ.ಇಷ್ಟಾದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಪರಿಹಾರ ಕಾರ್ಯ ಕೈಗೊಂಡಿಲ್ಲ.ರೈತರ ಗೋಳು ಯಾರೂ ಕೇಳದಂತಾಗಿದೆ.ಮುಖ್ಯಮಂತ್ರಿಗಳು ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಲಬುರಗಿಗೆ ಆಗಮಿಸಲು ಸೂಚಿಸಬೇಕು. ವೈಮಾನಿಕ ಸಮೀಕ್ಷೆ ನಡೆಸಿ ತುರ್ತು ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…