ಕಲಬುರಗಿ:- ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸಹಕಾರ ಕ್ಷೇತ್ರದ ಧುರೀಣರು ರಾಜಕೀಯ ನಾಯಕರು ಕಲಬುರಗಿ ಎಪಿಎಂಸಿ ಮಾಜಿ ಅಧ್ಯಕ್ಷರು, ಜಿಲ್ಲಾ ಜನತಾ ಬಜಾರ್ ಮಾಜಿ ಅಧ್ಯಕ್ಷರು, ಕಲಬುರಗಿ ಜಿಲ್ಲೆಯ ಗಾಣಿಗ ಸಮಾಜದ ಗೌರವ ಅಧ್ಯಕ್ಷರಾದ ಶ್ರೀ ಅಪ್ಪರಾವ ಪಾಟೀಲ ಅತನೂರ ಅವರ ಜನ್ಮ ದಿನ ಅಮೃತ ಮಹೋತ್ಸವ 75 ಹಾಗೂ ಮದುವೆಯ ಸುವರ್ಣ ಮಹೋತ್ಸವ 50 ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ನೆಲೋಗಿ, ಕಾರ್ಯಾಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಸುರೇಶ ಸಜ್ಜನ , ಜಿಲ್ಲಾ ಗಾಣಿಗ ಸಮಾಜ ಅಧ್ಯಕ್ಷರಾದ ಕಾರ್ಯದರ್ಶಿ ಶರಣಕುಮಾರ ಬಿಲ್ಲಾಡ ಸಾಹು ನೆಲೋಗಿ,
ಉಪಾಧ್ಯಕ್ಷರಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶರಣಕುಮಾರ ಮೋದಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಅರುಣಕುಮಾರ ಪಾಟೀಲ, ಹೆಚ್.ಕೆ.ಸಿ.ಸಿ. ಅಧ್ಯಕ್ಷರಾದ ಪ್ರಶಾಂತ ಎಸ್. ಮಾನಕರ್, ಜಿಲ್ಲಾ ಗಾಣಿಗ ನೌಕರರ ಸಂಘದ ಅಧ್ಯಕ್ಷರಾದ ಸಂಗನಗೌಡ ಪಾಟೀಲ, ಮಹಾಂತೇಶ ಕೊಣ್ಣೊರ, ಡಾ.ಶ್ರೀ ಶೈಲ ಘೂಳಿ, ರಾಜಶೇಖರ ಯಕಂಚಿ ಆಹಾರ ಸಮಿತಿಯ ಅಧ್ಯಕ್ಷರಾಗಿ ಅಶೋಕ ಪಾಟೀಲ ಅತನೂರ ಅವರಿಗೆ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ರವಿವಾರ ಬೆಳಿಗ್ಗೆ 10 ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ಸಭೆ ಸೇರಿ ಕಾರ್ಯಕ್ರಮದ ರುಪರೇಷ ಮತ್ತು ಚರ್ಚೆ, ಮಾತುಕತೆ ನಡೆಸಿ ಎಲ್ಲರೂ ಸೇರಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕರಾಗಿ ಪ್ರೊ.ಶಿವರಾಜ್ ಪಾಟೀಲ್, ಪ್ರಚಾರ ಸಮಿತಿ, ವೇದಿಕೆ ಸಮಿತಿ, ಪತ್ರಿಕೆ ಮುದ್ರಣ ಸಮಿತಿ, ಅಭಿನಂದನಾ ಗ್ರಂಥ ಸಮಿತಿ ಹಾಗೂ ಇನ್ನೂ ವಿವಿಧ ಸಮಿತಿ ರಚನೆ ಮಾಡಲಾಯಿತು.
ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸುವ ಉದ್ದೇಶದಿಂದ ಸಮಿತಿಗಳು ರಚನೆ ಮಾಡಲಾಗಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಲ್ಲಮಪ್ರಭು ಪಾಟೀಲ, ಸುರೇಶ ಸಜ್ಜನ, ಶರಣಕುಮಾರ ಮೋದಿ, ಪ್ರಶಾಂತ ಮಾನಕರ್, ಡಾ.ಶ್ರೀ ಶೈಲ ಘೋಳಿ, ತುಕರಾಮಗೌಡ ಪಾಟೀಲ, ಮಹಾಂತೇಶ ಕಣ್ಣೊರ, ಭೀಮರಾವ ಗುಜಗೊಂಡ ನೆಲೋಗಿ, ಶಂಕರಗೌಡ ಪಾಟೀಲ, ರಾಜಶೇಖರ ಯಕಂಚಿ, ಸುರೇಶ ಪಾಟೀಲ ನೇದಲಗಿ ಇತರರು ಮಾತನಾಡಿದರು.
ಅನೇಕ ಸಮಾಜದ ಮುಖಂಡರು, ರಾಜಕೀಯ ಧುರೀಣರು, ವೈದ್ಯರು, ಯುವ ಮುಖಂಡರು ಭಾಗವಹಿಸಿದ್ದರು. ಗಾಣಿಗ ಸಮಾಜ ಗೌರವ ಅಧ್ಯಕ್ಷರಾದ ಶರಣಪ್ಪ ಅಂದಾನಿ, ಹೊನ್ನಕಿರಣಗಿ, ಬಾಬಾಗೌಡ ಪಾಟೀಲ ಭೂಸನೂರ, ರುಕ್ಮಣಗೌಡ ಪಾಟೀಲ, ರುದ್ರಗೌಡ ಪಾಟೀಲ ಕಲ್ಲೂರ(ಕೆ), ಡಾ.ಸದಾಶಿವ ಪಾಟೀಲ, ಡಾ.ಗುರಲಿಂಗಪ್ಪ, ಡಾ.ಕೆ.ಜಿ.ಬಿರಾದಾರ ವಸ್ತಾರಿ, ಡಾ.ಎಸ್.ಎನ್. ಪಾಟೀಲ, ಶರಣಗೌಡ ಕೆಂಭಾವಿ, ಶಂಕರಗೌಡ ಪಾಟೀಲ ಕಲ್ಲೂರ, ರಾಜಶೇಖರಗೌಡ ಅಖಂಡಹಳ್ಳಿ, ಸುಭಾಷಗೌಡ ಪಾಟೀಲ ಬಬಾಲಾದಿ, ಬಸವರಾಜಗೌಡ ಅವರಾದಿ, ಕೇಶವಗೌಡ ಹೊನ್ನಕಿರಣಗಿ, ಪ್ರಕಾಶ ಪಾಟೀಲ ಯತ್ನಾಳ, ಶಿವಾನಂದ ದ್ಯಾಮಗೊಂಡ ಕಲ್ಲೂರ, ಸಂಗನಗೌಡ ಎನ್.ಬಿರಾದಾರ ಅರಳಗುಂಡಗಿ, ಡಾ. ಗುರುಲಿಂಗಪ್ಪ ಎ.ಪಾಟೀಲ ಅತನೂರ, ಡಾ. ಬಸವರಾಜ ಅಂಗಡಿ, ವೀರೇಶ ಕಲಶೇಟ್ಟಿ, ಚಂದ್ರಕಾಂತ ಗೌಡರ್ ಬಳ್ಳೂಂಡಗಿ, ಸಂದೀಪ ದೇಸಾಯಿ, ಬಾಬುಗೌಡ ಬಿರಾದಾರ, ವಿಠಲ ಸಿದ್ಧಣನವರ ಹೆರೋರ(ಬಿ), ರಾಜಕುಮಾರ ಪಾಟೀಲ, ಶಿವಪುತ್ರ, ಶಿವಾನಂದ ಗುರಮಠ, ಸಿದ್ದು ಪೊದ್ದಾರ, ನಿಂಗನ ಅವರಾದ, ಗುಂಡು, ಶರಣು, ಮುತ್ತು ಪಾಟೀಲ ಇತರರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ಶರಣಕುಮಾರ ಬಿಲ್ಲಾಡ ಸಾಹು ನೆಲೋಗಿ, ಸ್ವಾಗತ ಮತ್ತು ನಿರೂಪಣೆ ಬಿ.ಎಂ.ಪಾಟೀಲ ಕಲ್ಲೂರ, ನಿಂಗನಗೌಡ ಪಾಟೀಲ ಯಲಗೋಡ ವಂದಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಅಲ್ಲಮಪ್ರಭು ಪಾಟೀಲ, ಕಾರ್ಯಾಧ್ಯಕ್ಷರಾದ ಸುರೇಶ ಸಜ್ಜನ, ಕಾರ್ಯದರ್ಶಿ ಶರಣಕುಮಾರ ಬಿಲ್ಲಾಡ ಸಾಹು ನೆಲೋಗಿ ಅವರಿಗೆ ಸನ್ಮಾನ ಮಾಡಲಾಯಿತು.
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…