ಕಸಾಪದಿಂದ ಏರ್ಪಡಿಸಿದ ‘ಅಮೃತ ಕಾವ್ಯ’ ವಿಶೇಷ ಕವಿಗೋಷ್ಠಿ

ಕಲಬುರಗಿ: ಮಹಾತ್ಮಾ ಗಾಂಧಿಜೀ, ಬುದ್ಧ, ಬಸವಣ್ಣ, ಅಂಬೇಡ್ಕರ್, ಅರಿಸ್ಟಾಟಲ್ ಮುಂತಾದ ದಾರ್ಶನಿಕರು ತಮ್ಮ ಜೀವನವನ್ನು ವ್ಯರ್ಥಗೊಳಿಸದೇ ಸಮಾಜಕ್ಕೆ ಅವರದೇ ಆದ ಜ್ಞಾನ ಭಂಡಾರ, ನೀತಿ, ಸಾಧನೆಗಳ ಶಾಶ್ವತವಾದ ಕೊಡುಗೆಯನ್ನು ಈ ಭೂಮಿ ಮೇಲೆ ಬಿಟ್ಟು ಹೋಗಿದ್ದಾರೆ. ಅವರ ಚಿಂತನೆಗಳು ನಮಗೆಲ್ಲರಿಗೂ ಮಾರ್ಗದರ್ಶನ ನೀಡಲಿ ಎಂದು ಸಾಹಿತಿ ಡಾ.ಎಸ್.ಎಸ್.ಪಾಟೀಲ ಹೇಳಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಶ್ರೀ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಮಂಗಳವಾರದಂದು ಏರ್ಪಡಿಸಿದ ‘ಅಮೃತ ಕಾವ್ಯ’ ವಿಶೇಷ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಧರ್ಮ, ಮತಗಳನ್ನು ಮೀರಿರುವ ಶಕ್ತಿ ಕಾವ್ಯಕ್ಕಿದೆ. ಸಮಾಜದ ಪ್ರತಿಯೊಂದು ಸಂಕಟ, ತಲ್ಲಣಗಳನ್ನು ಸರಿ ಮಾಡುವ ಶಕ್ತಿ ಕಾವ್ಯಕ್ಕಿದೆ ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಾರಸ್ವತ ಲೋಕದಲ್ಲಿ ಇಂಥ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ ಎಂದು ಮನದುಂಬಿ ಮಾತನಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ದೇಶದ ಅಭಿವೃದ್ಧಿ ದೇಶ ರಕ್ಷಣೆಗೆ ಸ್ವಚ್ಚ ಭಾರತ ನಿರ್ಮಾಣಕ್ಕೆ ಉತ್ತಮ ಸಂದೇಶ ನೀಡುವಂಥ ಕವಿತೆಗಳು ಪ್ರಸ್ತುತ ದಿನಗಳಲ್ಲಿ ಅಗತ್ಯವಿದ್ದು, ಅಂತಹವುಗಳ ರಚನೆಗೆ ಕವಿ ಹೃದಯ ಮಿಡಿಯಲಿ. ನಾವುಗಳು ಅನುಭವಿಸಿದ ನೋವು, ಬಡತನ, ದೌರ್ಜನ್ಯಗಳ ವಿರುದ್ಧ ಕಾವ್ಯದ ಧ್ವನಿಯಾಗಿ ಹೊರಹೊಮ್ಮಲಿ. ಕಾವ್ಯ, ಕಥೆ, ಲೇಖನಗಳು ಇಂದಿನ ಸಮಾಜಕ್ಕೆ ನ್ಯಾಯ ದೊರಕಿಸುವಂತಾಗಿರಬೇಕು. ಆಜಾದಿ ಕಾ ಅಮೃತ ಮಹೋತ್ಸವದ ಇಂದಿನ ಸಂದರ್ಭದಲ್ಲಿ ಆಧುನಿಕ ಭಾರತದ ಇತಿಹಾಸ, ಸ್ವಾತಂತ್ರ್ಯ ಚಳವಳಿಯ ವಿವಿಧ ಘಟನೆಗಳನ್ನು ನಾವು ಅರಿಯುವ ಪ್ರಯತ್ನ ಮಾಡಬೇಕಾಗಿದೆ ಎಂದರು.

ಹಿರಿಯ ಲೇಖಕಿ ಡಾ.ಗೀತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಸಾಹಿತ್ಯ ಸಂಚಾಲಕ ಸಿ.ಎಸ್.ಆನಂದ, ಜಿಪಂ ನ ಮಾಜಿ ಅಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ, ಜಿಲ್ಲಾ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಜಿಲ್ಲಾಧ್ಯಕ್ಷ ಮಹೇಶ ಹೂಗಾರ ಮಾತನಾಡಿದರು.

ಜಿಲ್ಲಾ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಾದ ಮಹೇಶ ಹೂಗಾರ, ಪ್ರಕಾಶ ನರೋಣಾ, ಸೈಯದ್ ಅಹ್ಮದ್ ಅಲಿ, ರಾಮು ಚವ್ಹಾಣ, ಮಲ್ಲಿನಾಥ ಖಜೂರ್ಗಿ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಪ್ರಮುಖರಾದ ಜಗನ್ನಾಥಪ್ಪ ಪನಶಾಲೆ, ರವಿಕುಮಾರ ಶಹಾಪುರಕರ್, ಭಾನುಕುಮಾರ ಗಿರೇಗೋಳ, ವಿಶ್ವನಾಥ ತೊಟ್ನಳ್ಳಿ, ಮಲ್ಲಿನಾಥ ಸಂಗಶೆಟ್ಟಿ, ಸುರೇಶ ದೇಶಪಾಂಡೆ ಚಿಂಚೊಳಿ, ಪ್ರಭುಲಿಂಗ ಮೂಲಗೆ, ಶಿವಯೋಗಪ್ಪ ಬಿರಾದಾರ, ಶಿವಾನಂದ ಡೋಮನಾಳ, ಡಾ.ಶಿವಶರಣಪ್ಪ ಕೋಡ್ಲಿ, ಡಾ.ಸುರೇಶ ಪಾಟೀಲ, ಶಿವಾ ಅಷ್ಠಗಿ,  ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಗಮನ ಸೆಳೆದ ಕವಿಗೋಷ್ಠಿ : ಕವಿಗಳಾದ ಶಾಂತಾ ಪಸ್ತಾಪುರ, ಗೋಪಾಲ ಕುಲಕರ್ಣಿ,  ಶಕುಂತಲಾ ಪಾಟೀಲ ಜಾವಳಿ, ಭೀಮರಾಯ ಹೇಮನೂರ, ಡಾ.ಕೆ.ಗಿರಿಮಲ್ಲ,  ಶಿವಯ್ಯ ಮಠಪತಿ, ಹಣಮಂತರಾಯ ಘಂಟೇಕರ್, ಎಸ್.ಎಂ.ಪಟ್ಟಣಕರ್, ಹೆಚ್.ಎಸ್.ಬರಗಾಲಿ, ಕವಿತಾ ಕಾವಳೆ, ವೆಂಕಟೇಶ ಜನಾದ್ರಿ, ಸಂತೋಷ ಕುಂಬಾರ, ಶ್ರೀಶೈಲ ಮದಾನಿ, ಗಂಗಮ್ಮಾ ನಾಲವಾರ, ಅಕ್ಷಯ ಬಿಲ್ವಪತ್ರಿ, ಶ್ರೀಕಾಂತ ಬಿರಾದಾರ ಅವರು ವಾಚಿಸಿದ ಕವನಗಳು ಭಾರತ ಸ್ವಾತಂತ್ರ್ಯದ ನೆನಪುಗಳು ಮೆಲುಕು ಹಾಕಿದಂತಾಯಿತು.

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಶೇಷ ರೀತಿಯಲ್ಲಿ ಇಡೀ ದೇಶಾದ್ಯಂತ ಆಚರಿಸಲು ಕರೆ ಕೊಟ್ಟಿರುವ ಪ್ರದಾನ ನರೇಂದ್ರ ಮೋದಿ ಅವರ ಈ ದಿಟ್ಟ ಹೆಜ್ಜೆಯಿಂದ ದೇಶ ಪ್ರತಿಯೊಬ್ಬ ನಾಗರೀಕರಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ ಮುಡಿಸಿದಂತಾಗಿದೆ. ಭಾರತ ದೇಶ ವಿಶ್ವಕ್ಕೆ ಇಂದು ಗುರು ಅನಿಸಿಕೊಳ್ಳಲು ಪ್ರದಾನಿ ಅವರ ಹೊಸ ಆಲೋಚನೆ, ದೇಶದ ನಿಜವಾದ ಪ್ರಗತಿಯೇ ಇದಕ್ಕೆ ಕಾರಣ. –  .ಅಂಬಾರಾಯ ಅಷ್ಠಗಿ, ಮಾಜಿ ಅಧ್ಯಕ್ಷ, ಜಿ.ಪಂ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

9 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

11 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

12 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

12 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

12 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420