ಬಿಸಿ ಬಿಸಿ ಸುದ್ದಿ

ಶಹಾಬಾದನ್ನೇ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಬೇಕೆಂದು ಒಕ್ಕೋರಲ ಧ್ವನಿಯಾಗಿದೆ: ಮರಿಯಪ್ಪ ಹಳ್ಳಿ

ಶಹಾಬಾದ:ಆಡಳಿತಾತ್ಮಕ ದೃಷ್ಟಿಯಿಂದ ಶಹಾಬಾದ ತಾಲೂಕಾವನ್ನು ಕಲಬುರಗಿ ಜಿಲ್ಲಾ ವ್ಯಾಪ್ತಿಗೆ ಸೇರ್ಪಡೆಯಾಗಬೇಕು. ಸೇಡಂ ಅನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡುವದಿದ್ದರೇ ಅದಕ್ಕೆ ಸಂಪೂರ್ಣ ನಮ್ಮ ವಿರೋಧವಿದೆ.ಅದರ ಬದಲಿಗೆ ಎಲ್ಲರ ಅನುಕೂಲ ದೃಷ್ಟಿಯಿಂದ ಶಹಾಬಾದನ್ನೇ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಬೇಕೆಂದು ಒಕ್ಕೋರಲ ಧ್ವನಿಯಿಂದ ತೀರ್ಮಾನಿಸಲಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ರವಿವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾದ ಶೈಕ್ಷಣಿಕ ಜಿಲ್ಲೆಯನ್ನಾಗಿ ಸೇಡಂ ವಿರೋಧಿಸಿ ಶಹಾಬಾದ ನಗರವನ್ನಾಗಿ ಮಾಡಿ ಬಯಸಿ ಕರೆದಿರುವ ವಿವಿಧ ಪಕ್ಷದ, ಸಂಘಟನೆಗಳ ಹಾಗೂ ಸಂಸಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಶಹಾಬಾದ ತಾಲೂಕಾದಿಂದ ಕೇವಲ ೨೫ ಕಿಮೀ ಅಂತದಲ್ಲಿರುವ ಜಿಲ್ಲಾ ಕಲಬುರಗಿ ಬಹಳ ಹತ್ತಿರವಿದೆ.ಈಗಾಗಲೇ ಆಡಳಿತಾತ್ಮಕ ದೃಷ್ಟಿಯಿಂದ ಎಲ್ಲಾ ಕೆಲಸ ಕಾರ್ಯಗಳು ಚಿತ್ತಾಪೂರ ಹಾಗೂ ಕಲಬುರಗಿಯ ಮೇಲೆ ಅವಲಂಬನೆಯಾಗಿದ್ದೆವೆ.ಆದ್ದರಿಂದ ಸಭೆಯಲ್ಲಿ ಎಲ್ಲರ ಅಭಿಪ್ರಾಯದ ಮೇರೆಗೆ ಜಿಲ್ಲಾ ಕೇಂದ್ರವಾದ ಕಲಬುರಗಿ ವ್ಯಾಪ್ತಿಗೆ ಶಹಾಬಾದ ತಾಲೂಕಾವನ್ನು ಸೇರ್ಪಡೆ ಮಾಡಬೇನ್ನುವುದು ನಮ್ಮ ಪ್ರಥಮ ಬೇಡಿಕೆಯಾಗಿದೆ.ಒಂದು ವೇಳೆ ಸೇಡಂ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಬೇಕೆನ್ನುವ ಇರಾದೆ ಇದ್ದರೇ ಅದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ.ಯಾವುದೇ ಕಾರಣಕ್ಕೂ ನಾವು ಸೇಡಂ ಬರುವುದಕ್ಕೆ ನಾವು ತಯಾರಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ ಅರುಣ ಪಟ್ಟಣಕರ್ ಮಾತನಾಡಿ, ಶಹಾಬಾದಿಂದ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಕೇವಲ ೨೫ ಕಿಮೀ ಅಂತರವಿದೆ.ಆದರೆ ಅದೇ ಸೇಡಂ ತಾಲೂಕಾಕ್ಕೆ ಹೋಗಬೇಕಾದರೆ ೬೫ ಕಿಮೀ ಹೋಗಬೇಕಾಗುತ್ತದೆ.ಜನರು ತಮ್ಮ ಕೆಲಸ ಕಾರ್ಯಗಳಿಗೆ ಬಹುದೂರ ಅಲೆಯಬೇಕಾದ ಪ್ರಸಂಗ ಎದುರಾಗುತ್ತದೆ.ಅಲ್ಲದೇ ಶಹಾಬಾದ ತಾಲೂಕಿನ ಕಡೆಹಳ್ಳಿ ಗ್ರಾಮದಿಂದ ಬಡ ಜನರು ತೆರಳಬೇಕಾದರೆ ಸುಮಾರು ೮೦ ಕಿಮೀ ದೂರವಾಗುತ್ತದೆ.ಯಾವ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ.ಅದೇನೆ ಇರಲಿ ತಾಲೂಕಿನ ಆಡಳಿತಾತ್ಮಕ ದೃಷ್ಟಿಯಿಂದ ಕಲಬುರಗಿ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿದರು.

ನಗರ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಸೇಡಂ ಶೈಕ್ಷಣಿಕ ಜಿಲ್ಲೆಯಾಗಬೇಕೆಂಬ ಸಂಚು ನಡೆದಿದೆ.ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ.ಜಿಲ್ಲೆಯಲ್ಲಿಯೇ ದೊಡ್ಡದಾದ ನಗರವೇನಾದರೂ ಇದ್ದರೇ ಅದು ಶಹಾಬಾದ. ನಗರಸಭೆಯನ್ನು ಹೊಂದಿದೆ.ಹಿಂದಿನ ಇತಿಹಾಸವನ್ನು ತೆಗೆದು ನೋಡಬಹುದೆಂದು ಹೇಳಿದರಲ್ಲದೇ,ಭೌಗೋಳಿಕವಾಗಿ ಶಹಾಬಾದ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ಅನುಕೂಲತೆಗಳು ಇಲ್ಲಿವೆ. ಯಡ್ರಾಮಿ, ಜೇವರ್ಗಿ,ಚಿತ್ತಾಪೂರ, ಕಾಳಗಿ ಇವೆಲ್ಲವನ್ನೂ ಶಹಾಬಾದ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು.ಶಹಾಬಾದ ಎಲ್ಲಕ್ಕೂ ಕೇಂದ್ರ ಬಿಂದುವಾಗುತ್ತದೆ.ಅಲ್ಲದೇ ಎಲ್ಲಾ ತಾಲೂಕಾಗಳಿಗೆ ಸಮೀಪವಾಗುತ್ತದೆ.ಸಾರ್ವಜನಿಕರಿಗೆ ಎಲ್ಲಾ ರೀತಿಯಿಂದ ಅನುಕೂಲವವಾಗುತ್ತದೆ ಎಂದರು.ಅಲ್ಲದೇ ನಾವು ರಾಜಕೀಯ ಬಿಟ್ಟರೂ ಪರವಾಗಿಲ್ಲ.ಆದರೆ ಶಹಾಬಾದ ನಗರವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದರು.

ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು.ಮುಂದಿನ ಹೋರಾಟದ ರೂಪರೇಷೆಗಳನ್ನು ಸಿದ್ದಪಡಿಸಬೇಕು.ಹೋರಾಟಕ್ಕೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ಭಾಗವಹಿಸಬೇಕು.ಅಲ್ಲದೇ ವ್ಯಾಪಾರಸ್ಥರ ಸಂಘ, ಆಟೋ ಚಾಲಕರ ಸಂಘ ಸೇರಿದಂತೆ ನಗರದಲ್ಲಿರುವ ವಿವಿಧ ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳು, ಶಾಲಾ-ಕಾಲೇಜಿನ ಆಡಳಿತ ಮಂಡಳಿಯವರು ಸೇರಿದಂತೆ ನಗರದ ಸಮಾಜದ ಮುಖಂಡರನ್ನು ಒಟ್ಟುಗೂಡಿ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಜಯಕುಮಾರ ಮುಟ್ಟತ್ತಿ, ಪೀರಪಾಶಾ, ಕೃಷ್ಣಪ್ಪ ಕರಣಿಕ್,ರಘುವೀರಸಿಂಗ ಠಾಕೂರ,ಶರಣಗೌಡ ಪಾಟೀಲ ಹಳೆಶಹಾಬಾದ, ಮಹ್ಮದ್ ಮಸ್ತಾನ್, ಮಲ್ಕಪ್ಪ ಮುದ್ದಾ,ಬಸವರಾಜ ಮಯೂರ,ಜಗನ್ನಾಥ.ಎಸ್.ಹೆಚ್,ಭೀಮರಾವ ಸಾಳುಂಕೆ, ಪಿ.ಎಸ್.ಮೇತ್ರೆ ಮಾತನಾಡಿದರು.

ಶರಣಬಸಪ್ಪ ಕೋಬಾಳ,ಶರಣಗೌಡ ಪಾಟೀಲ ಗೋಳಾ(ಕೆ), ನಾಗಣ್ಣ ರಾಂಪೂರೆ, ಸಾಹೇಬಗೌಡ ಬೋಗುಂಡಿ, ಸೂರ್ಯಕಾಂತ ಕೋಬಾಳ,ಬಸವರಾಜ ಮದ್ರಿಕಿ,ಕಿರಣ ಚವ್ಹಾಣ, ಅಹ್ಮದ್ ಪಟೇಲ್,ಮಲ್ಲಣ್ಣ ಮರತೂರ,ಬೆಳ್ಳಪ್ಪ ಕಣದಾಳ,ವಿಶ್ವರಾಜ ಫಿರೋಜಾಬಾದ, ಮಲ್ಲೇಶಿ ಭಜಂತ್ರಿ,ಮಲ್ಲಣ್ಣ ಮಸ್ಕಿ, ಮಹ್ಮದ್ ಇಮ್ರಾನ್,ಮಹ್ಮದ್ ಅಜರ್, ವಿಜಯಕುಮಾರ ಕಂಠಿಕರ್, ಅವಿನಾಶ ಕೊಂಡಯ್ಯ,ಆನಂದ ಕೊಡಸಾ,ಅರುಣ ಜಾಯಿ, ಶಾಂತಪ್ಪ ಹಡಪದ,ಜಾಫರ್ ಪಟೇಲ್,ತಿಪ್ಪಣ್ಣ ಧನ್ನೇಕರ್ ಸೇರಿದಂತೆ ಅನೇಕರು ಇದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

1 hour ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

2 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

2 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

3 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

3 hours ago